ಬೆಂಗಳೂರಿನ ಆಕಾಶದಲ್ಲಿ ಇಂದು ಅದ್ಭುತ ದೃಶ್ಯವೊಂದು ಕಂಡುಬಂದಿದೆ. ಸೂರ್ಯನ ಸುತ್ತ ಒಂದು ವೃತ್ತ ಕಂಡುಬಂದಿದೆ.
ಬೆಂಗಳೂರು : ಬೆಂಗಳೂರಿನ ಆಕಾಶದಲ್ಲಿ ಇಂದು ಅದ್ಭುತ ದೃಶ್ಯವೊಂದು ಕಂಡುಬಂದಿದೆ. ಸೂರ್ಯನ ಸುತ್ತ ಒಂದು ವೃತ್ತ ಕಂಡುಬಂದಿದೆ. ಇದನ್ನು ಸೌರ ಉಂಗುರ ಎಂದು ಕರೆಯುಲಾಗುತ್ತದೆ. ಸೂರ್ಯನ ಸುತ್ತ ಈ ವೃತ್ತವನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಈ ಅದ್ಬುತ ನೋಡುತ್ತಿದ್ದಂತೆ ಜನರು ಇದರ ಫೋಟೊ ತೆಗೆಯಲು ಆರಂಭಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮೋಡಗಳಿಂದಾಗಿ ಈ ಸೌರ ಉಂಗುರವು ರೂಪುಗೊಳ್ಳುತ್ತದೆ. ಮೋಡಗಳಲ್ಲಿ ಸಣ್ಣ ಸಣ್ಣ ಮಂಜುಗಡ್ಡೆಯ ಕಣಗಳಿರುತ್ತವೆ. ಸೂರ್ಯನ ಕಿರಣಗಳು ಈ ಹಿಮದ ಕಣಗಳ ಮೇಲೆ ಬಿದ್ದಾಗ, ಕಿರಣಗಳು ಚದುರಿಹೋಗಲು ಪ್ರಾರಂಭಿಸುತ್ತವೆ. ಕಿರಣಗಳು ಒಂದು ಕೋನದಲ್ಲಿ ವಿಭಜನೆಯಾದಾಗ, ಸೂರ್ಯನ ಸುತ್ತ ಈ ರೀತಿಯ ವೃತ್ತವು ರೂಪುಗೊಳ್ಳುತ್ತದೆ.
ಇಂದು ಬೆಂಗಳೂರಿನಲ್ಲಿ ಹವಾಮಾನ ತಿಳಿಯಾಗಿದೆ. ಬಿಸಿಲು ಮೂಡಿದ್ದು, ಆಕಾಶದಲ್ಲಿ ಬಿಳಿ ಮೋಡಗಳು ಕಾಣಿಸುತ್ತಿವೆ. ಹೀಗಿರುವಾಗ ಸೂರ್ಯನ ಸುತ್ತ ಇಂಥಹ ವೃತ್ತ ಅಥವಾ ಉಂಗುರ ಕಾಣಿಸಿಕೊಳ್ಳುತ್ತದೆ.
ಆಕಾಶದಲ್ಲಿ ಮೂಡಿ ಬಂದ ಈ ಅಮೋಘ ದೃಶ್ಯ ವೀಕ್ಷಿಸಿದ ಜನರಲ್ಲೂ ಸಂತೋಷ ಮನೆ ಮಾಡಿತ್ತು. ಈ ದೃಶ್ಯವನ್ನು ಕ್ಯಾಮರಾದಲ್ಲೂ ಸೆರೆ ಹಿಡಿಯುತ್ತಿರುವ ನೋಟ ಕಂಡು ಬಂತು.
ಇದರಲ್ಲಿ ಸೂರ್ಯನ ಸುತ್ತ ಮೂಡಿರುವ ವೃತ್ತ ಕೂಡಾ ಕಾಮನಬಿಲ್ಲಿನಂತೆ ಕಾಣಿಸುತ್ತಿದೆ. ಇದರಲ್ಲಿ ಕಾಮನಬಿಲ್ಲಿನ ಏಳೂ ಬಣ್ಣಗಳನ್ನು ಕಾಣಬಹುದು.