ಸ್ನೇಹಿತೆಯ ಪತಿಯನ್ನೇ ಪಟಾಯಿಸಿ ಮದುವೆಯಾದ ಈ ಖ್ಯಾತ ನಟಿ ಯಾರು ಗೊತ್ತಾ..? ಈಕೆ ಬಹುಭಾಷಾ ತಾರೆಯೂ ಹೌದು!!

South Actress hansika motwani: ಹನ್ಸಿಕಾ ಮೋಟ್ವಾನಿ ದಕ್ಷಿಣದ ಜನಪ್ರಿಯ ಮತ್ತು ಮನಮೋಹಕ ನಟಿ. ಮುಗ್ಧ ನಗುವಿನಿಂದಲೇ ಎಲ್ಲರನ್ನೂ ಸೆಳೆದ ಹನ್ಸಿಕಾ ನಿನ್ನೆಯಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು... ಇದೇ ವೇಳೆ ಈ ನಟಿಯ ಕುರಿತಾದ ಶಾಕಿಂಗ್‌ ಮಾಹಿತಿಯೊಂದು ಸಖತ್‌ ಸದ್ದು ಮಾಡುತ್ತಿದೆ..

1 /7

ಕಿರುತೆರೆಯಿಂದ ಹಿಡಿದು ಬಾಲಿವುಡ್, ಟಾಲಿವುಡ್ ವರೆಗೂ ನಟಿ ಹನ್ಸಿಕಾ ಛಾಪು ಮೂಡಿಸಿದ್ದಾರೆ... ಹನ್ಸಿಕಾ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆಗಳಾಗಿವೆ.. ಕೆಲವೊಮ್ಮೆ ಹಾರ್ಮೋನ್ ಇಂಜೆಕ್ಷನ್ ನಿಂದಾಗಿ, ಕೆಲವೊಮ್ಮೆ ಎಂಎಂಎಸ್ ಲೀಕ್ ನಿಂದಾಗಿ ಹನ್ಸಿಕಾ ಸುದ್ದಿಯಲ್ಲಿದ್ದರು.  

2 /7

ಹನ್ಸಿಕಾ ಬಾಲನಟಿಯಾಗಿ ಕಿರುತೆರೆಗೆ ಕಾಲಿಟ್ಟರು. ಅವರು 2000 ರಲ್ಲಿ 'ಶಕಾ ಲಕಾ ಬೂಮ್ ಬೂಮ್' ನಲ್ಲಿ ಕಾಣಿಸಿಕೊಂಡರು.. ನಂತರ ಅವರು ಏಕ್ತಾ ಕಪೂರ್ ಅವರ ಜನಪ್ರಿಯ ಧಾರಾವಾಹಿ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ನಲ್ಲಿ ಕಾಣಿಸಿಕೊಂಡರು.  

3 /7

2003 ರಲ್ಲಿ, ಹನ್ಸಿಕಾ ಮೋಟ್ವಾನಿ ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ಅವರ ಕೋಯಿ ಮಿಲ್ ಗಯಾದಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ಹನ್ಸಿಕಾ ಕುಟುಂಬ ಸಮೇತ ವಿದೇಶಕ್ಕೆ ತೆರಳಿದ್ದರು. 2007 ರಲ್ಲಿ ತೆಲುಗು ಚಿತ್ರ ದೇಶಮುದುರು ಮೂಲಕ 4 ವರ್ಷಗಳ ನಂತರ ತೆರೆಗೆ ಮರಳಿ ಎಲ್ಲರನ್ನು ಅಚ್ಚರಿಗೊಳಿಸಿದರು. ಆ ವೇಳೆ ಹನ್ಸಿಕಾ ತಾಯಿ ಹಾರ್ಮೋನ್ ಇಂಜೆಕ್ಷನ್ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು.  

4 /7

ಹನ್ಸಿಕಾ ಮೋಟ್ವಾನಿ ಅವರು ತಮ್ಮ ಗೆಳೆಯ ಸೊಹೈಲ್ ಕಥುರಿಯಾ ಅವರೊಂದಿಗೆ ಡಿಸೆಂಬರ್ 4, 2022 ರಂದು ಜೈಪುರದ ಮುಂಡೋಟಾ ಫೋರ್ಟ್‌ನಲ್ಲಿ ವಿವಾಹವಾದರು.  

5 /7

ವಾಸ್ತವವಾಗಿ, ಸೊಹೈಲ್ ಕಥುರಿಯಾ ಅವರು 2006 ರಲ್ಲಿ ಹನ್ಸಿಕಾ ಅವರ ಸ್ನೇಹಿತೆ ರಿಂಕಿ ಬಜಾಜ್ ಅವರೊಂದಿಗೆ ಗೋವಾದಲ್ಲಿ ಮದುವೆಯಾಗಿದ್ದರು.. ಅವರ ಮದುವೆಯಲ್ಲಿ ಹನ್ಸಿಕಾ ಕೂಡ ಪಾಲ್ಗೊಂಡಿದ್ದರು. ಬಳಿಕ ಅವರ ವಿಚ್ಛೇದನದ ನಂತರ, ಹನ್ಸಿಕಾ ಸೊಹೈಲ್ ಜೊತೆ ಸಪ್ತಪದಿ ತುಳಿದರು.. ಇದರಿಂದಾಗಿ ಮನೆ ಒಡೆದಿದ್ದಾರೆ ಎನ್ನುವ ಟ್ಯಾಗ್‌ ಕೂಡ ಈಕೆಗೆ ಸಿಕ್ಕಿತ್ತು..   

6 /7

ಇದಲ್ಲದೇ ಎಂಎಂಎಸ್ ಲೀಕ್ ವಿವಾದದಲ್ಲೂ ಆಕೆ ಸಿಲುಕಿಕೊಂಡಿದ್ದಳು. 2015ರಲ್ಲಿ ಹುಡುಗಿಯೊಬ್ಬಳು ಸ್ನಾನ ಮಾಡುತ್ತಿರುವ ಎಂಎಂಎಸ್ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ವೀಡಿಯೋ ಹನ್ಸಿಕಾ ಅವರದ್ದು ಎಂದು ಹೇಳಲಾಗಿತ್ತು.. ಆದರೆ ನಂತರ ಸ್ವತಃ ಅವರೇ ವಿಡಿಯೋ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದು, ಅದು ನಾನಲ್ಲ ಬೇರೆ ಯಾರೋ ಎಂದಿದ್ದರು..   

7 /7

ಇನ್ನು ಹನ್ಸಿಕಾ ಎನ್ನುವುದು ಇಂದು ಸೌತ್ ಚಿತ್ರರಂಗದಲ್ಲಿ ದೊಡ್ಡ ಹೆಸರು. ಅವರು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ 60 ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ.