Dinesh Karthik: ಸದ್ಯ ಐಪಿಎಲ್ 2024ರ ಋತು ನಡೆಯುತ್ತಿದೆ. ಪ್ಲೇ ಆಫ್ ಹಂತ ಪ್ರವೇಶಿಸಿ ಟ್ರೋಫಿ ಎತ್ತಿ ಹಿಡಿಯಲು ತಂಡಗಳು ಭರ್ಜರಿ ಸರ್ಕಸ್ ನಡೆಸುತ್ತಿದೆ. 10 ತಂಡಗಳ ಪೈಕಿ ಸದ್ಯ 9 ತಂಡಗಳು ಪ್ಲೇ ಆಫ್ ಹಂತ ತಲುಪುವ ಸಾಧ್ಯತೆ ಇದ್ದು, ಮುಂಬೈ ಬಹುತೇಕ ಟೂರ್ನಿಯಿಂದ ಹೊರಬಿದ್ದಂತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ನಾವಿಂದು ಈ ವರದಿಯಲ್ಲಿ ಓರ್ವ ಆಟಗಾರನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಕ್ರಿಕೆಟಿಗನ ತವರು ಚೆನ್ನೈ ಆದರೂ ಸಹ IPLನಲ್ಲಿ ಆಡುತ್ತಿರೋದು RCB ಪರ. ಅಷ್ಟಕ್ಕೂ ಆ ಆಟಗಾರ ಯಾರು ಎಂಬುದನ್ನು ತಿಳಿಯೋಣ.
ಇಲ್ಲಿ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಗ್ಗೆ ಮಾತನಾಡುತ್ತಿದ್ದೇವೆ. ಇವರು ಜೂನ್ 1, 1985 ರಂದು ತಮಿಳುನಾಡಿನಲ್ಲಿ ಜನಿಸಿದರು. ಅದ್ಭುತ ವಿಕೆಟ್ ಕೀಪರ್ ಮಾತ್ರವಲ್ಲದೆ, ಅವರು ಉತ್ತಮ ಬ್ಯಾಟಿಂಗ್’ಗೂ ಹೆಸರುವಾಸಿಯಾಗಿದ್ದಾರೆ.
ದೇಶೀಯ ಕ್ರಿಕೆಟ್’ನಲ್ಲಿ ತಮಿಳುನಾಡು ಪರ ಆಡುವ ದಿನೇಶ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆರ್ ಸಿ ಬಿ ಪರ ಬ್ಯಾಟ್ ಬೀಡುತ್ತಾರೆ. ಇದಕ್ಕೂ ಮುನ್ನ 2018 ರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು. ಪ್ರಸ್ತುತ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್ಮನ್. 2022ರ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅವರನ್ನು ತನ್ನ ತಂಡಕ್ಕೆ ಸೇರ್ಪಡೆಗೊಳಿಸಿದ್ದು, 5.50 ಕೋಟಿ ನೀಡಿತ್ತು.
ದಿನೇಶ್ ಕಾರ್ತಿಕ್ 2004 ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು, ಅವರ ಚೊಚ್ಚಲ ಪಂದ್ಯ 5 ಸೆಪ್ಟೆಂಬರ್ 2004ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯವಾಗಿದೆ. ಅದಾದ ಬಳಿಕ ಎರಡು ತಿಂಗಳಲ್ಲೇ ಟೆಸ್ಟ್ ಕ್ರಿಕೆಟಿಗನಾಗಿಯೂ ಎಂಟ್ರಿ ಪಡೆದರು. ನವೆಂಬರ್ 2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು.
ದಿನೇಶ್ ಕಾರ್ತಿಕ್ 1 ಜೂನ್ 1985 ರಂದು ಚೆನ್ನೈ ನಗರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ದಿನೇಶ್ ಕಾರ್ತಿಕ್ ತಂದೆಯ ಹೆಸರು ಕೃಷ್ಣಕುಮಾರ್ ಮತ್ತು ತಾಯಿಯ ಹೆಸರು ಪದ್ಮಿನಿ ಕೃಷ್ಣಕುಮಾರ್. ದಿನೇಶ್ ಕಾರ್ತಿಕ್ ಅವರ ಕಿರಿಯ ಸಹೋದರನ ಹೆಸರು ವಿನೇಶ್ ಕಾರ್ತಿಕ್.
ದಿನೇಶ್ ಕಾರ್ತಿಕ್ 2007 ರಲ್ಲಿ ನಿಕಿತಾ ಎಂಬವರನ್ನು ವಿವಾಹವಾಗಿದ್ದರು. ಆದರೆ ಆಕೆ ಮದುವೆಯ ನಂತರವೂ ಮತ್ತೋರ್ವ ಕ್ರಿಕೆಟಿಗ ಮುರಳಿ ವಿಜಯ್ ಜೊತೆ ಸಂಬಂಧ ಬೆಳೆಸಿದ್ದರು. ಈ ವಿಚಾರ ತಿಳಿದ ದಿನೇಶ್, ಆಕೆಗೆ ವಿಚ್ಛೇದನ ನೀಡಿದರು, ನಂತರ 2015 ರಲ್ಲಿ ಭಾರತದ ಪ್ರಸಿದ್ಧ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ವಿವಾಹವಾದರು. ಈ ಮುದ್ದಾದ ಜೋಡಿ 2019 ರಲ್ಲಿ ಅವಳಿ ಮಕ್ಕಳಿಗೆ ಪೋಷಕರಾದರು.