ಹಲವು ವರ್ಷಗಳ ಬಳಿಕ ಆಗಸ್ಟ್ 16 ರಂದು ನಿರ್ಮಾಣಗೊಳ್ಳುತ್ತಿದೆ ವಿಶೇಷ ಯೋಗ, ಧನ-ವೈಭವ ಪ್ರಾಪ್ತಿಗೆ ಸುವರ್ಣಾವಕಾಶ!

Shravan Maas 2023: ಶಿವ ಪುರಾಣದ ಪ್ರಕಾರ, ಅಧಿಕ ಮಾಸದ ಅಮಾವಾಸ್ಯೆ ತಿಥಿಯ ದಿನ ಶಿವಲಿಂಗದ ಮೇಲೆ ಒಂದು ವಿಶೇಷ ರೀತಿಯ ಹೂವು ಅರ್ಪಿಸುವುದರಿಂದ ದೇವ-ದೇವತೆಗಳ ಜೊತೆಗೆ ಪೂರ್ವಜರ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ (Spiritual News In Kannada). 
 

ಬೆಂಗಳೂರು: ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ. ಶ್ರಾವಣ ಮಾಸದಲ್ಲಿ ಸಂಪೂರ್ಣ ಭಕ್ತಿಭಾವ ಮತ್ತು ವಿಧಿವಿಧಾನಗಳಿಂದ ಶಿವನನ್ನು ಪೂಜಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಸರಿಸುಮಾರು 19 ವರ್ಷಗಳ ಬಳಿಕ ಶ್ರಾವಣ 30 ದಿನಗಳ ಬದಲಿಗೆ 59 ದಿನಗಳದ್ದಾಗಿದೆ. ಅರ್ಥಾತ್ ಈ ಬಾರಿ ಒಟ್ಟು 8 ಶ್ರಾವಣ ಸೋಮವಾರಗಳು ಬರುತ್ತಿವೆ (Spiritual News In Kannada). ಹಾಗೆ ನೋಡಿದರೆ ಪ್ರತಿ ಮೂರು ವರ್ಷಗಳಿಗೊಮ್ಮೆ ಅಧಿಕಮಾಸ ಬರುತ್ತದೆ. ಇದನ್ನು ಪುರುಷೋತ್ತಮ ಮಾಸ ಎಂದೂ ಕೂಡ ಕರೆಯಲಾಗುತ್ತದೆ. ಸಂಪೂರ್ಣ ಒಂದು ತಿಂಗಳುಗಳ ಬಳಿಕ ಆಗಸ್ಟ್ 16 ರಂದು ಅಮಾವಾಸ್ಯೆಯ ದಿನ ಅಧಿಕ ಮಾಸ ಮುಕ್ತಾಯಗೊಳ್ಳಲಿದೆ. ಶಿವ ಪುರಾಣದ ಪ್ರ್ಕಾರ ಆಗಸ್ಟ್ 16 ರಂದು ಶಿವಾನಿಗೆ ವಿಧಿವಿಧಾನಗಳ ಮೂಲಕ ಪೂಜಿಸುವುದರ ಜೊತೆಗೆ ಒಂದು ವಿಶೇಷ ವಸ್ತುವನ್ನು ಅರ್ಪಿಸಿದರೆ ಅಪಾರ ಧನ ಪ್ರಾಪ್ತಿಯ ಜೊತೆಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತದೆ. 

 

ಇದನ್ನೂ ಓದಿ-ವರ್ಷ 2024ರವರೆಗೆ ಈ ರಾಶಿಗಳ ಜನರಿಗೆ ಐಶ್ವರ್ಯಲಕ್ಷ್ಮಿಯ ಕೃಪೆಯಿಂದ ಭಾರಿ ಧನಲಾಭ ಪ್ರಾಪ್ತಿಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

1. ಆಗಸ್ಟ್ 16 ರಂದು ನಿರ್ಮಾಣಗೊಳ್ಳುತ್ತಿದೆ ಅಪರೂಪದ ಕಾಕತಾಳೀಯ : ಜೋತಿಷ್ಯ ಶಾಸ್ತ್ರ ಹಾಗೂ ಹಿಂದೂ ಪಂಚಾಂಗದ ಪ್ರಕಾರ ಆಗಸ್ಟ್ 15 ಮಂಗಳವಾರ ಮಧ್ಯಾಹ್ನ 12 ಗಂಟೆ 42 ನಿಮಿಷಕ್ಕೆ ಅಮಾವಾಸ್ಯೆಯ ತಿಥಿ ಆರಂಭಗೊಳ್ಳುತ್ತಿದೆ. ಇದು ಬುಧವಾರ ಮಧ್ಯಾಹ್ನ 3 ಗಂಟೆ 7 ನಿಮಿಷದವರೆಗೆ ಇರಲಿದೆ. ಇದರಿಂದ ಅಮಾವಾಸ್ಯೆ ಆಗಸ್ಟ್ 16ಕ್ಕೆ ಬೀಳುತ್ತಿದೆ. ಹೀಗಾಗಿ ಇಲ್ಲ ಅಮಾವಾಸ್ಯೆ ತಿಥಿ ಅಂತ್ಯ ಹಾಗೂ ಶ್ರಾವಣ ಮಾಸ ಆರಂಭ ಎರಡೂ ತಿಥಿಗಳು ಏಕಕಾಲಕ್ಕೆ ಸಂಭವಿಸುತ್ತಿರುವ ಕಾರಣ ಒಂದು ಅದ್ಭುತ ಯೋಗ ರೂಪುಗೊಳ್ಳುತ್ತಿದ್ದು, ಇದು ಅತ್ಯಂತ ಶುಭ ಹಾಗೂ  ಕಾಕತಾಳೀಯ ಎನ್ನಲಾಗುತ್ತಿದೆ. 

2 /5

2. ಶಿವ ಪುರಾಣದ ಪ್ರಕಾರ ಶ್ರಾವಣ ಮಾಸದಲ್ಲಿ ಶಿವ ಹಾಗೂ ತಾಯಿ ಪಾರ್ವತಿ ಪೃಥ್ವಿಗೆ ಬಂದು ನೆಲೆಸುತ್ತಾರೆ ಎನ್ನಲಾಗುತ್ತದೆ. ಹೀಗಾಗಿ ಈ ತಿಂಗಳಲ್ಲಿ ಅವರ ಪೂಜೆ ನೆರವೇರಿಸಿದರೆ ಅಪಾರ ಧನ-ಧಾನ್ಯ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಇದಲ್ಲದೆ ಅಧಿಕ ಅಮಾವಾಸ್ಯೆ ತಿತಿಯೂ ಕೂಡ ಬೀಳುವ ಕಾರಣ ಪೂರ್ವಜರ ಆಶೀರ್ವಾದ ಕೂಡ ಪ್ರಾಪ್ತಿಯಾಗಲಿದೆ. 

3 /5

3. ಆಗಸ್ಟ್ 16 ರಂದು ಶಿವನಿಗೆ ಅರ್ಪಿಸಿ ಈ ವಿಶೇಷ ವಸ್ತು: ಆಗಸ್ಟ್ 16 ರಂದು ಅಂದರೆ ಅಧಿಕ ಮಾಸದ ಅಮಾವಾಸ್ಯೆಯ ತಿಥಿಯ ದಿನ ದೇವಾಧಿದೇವ ಮಹಾದೇವ ಹಾಗೂ ಪೂರ್ವಜರ ಆಶೀರ್ವಾದ ಪಡೆಯಲು ಶಿವಲಿಂಗದ ಮೇಲೆ ಒಂದು ಲೋಟ ಜಲದ ಜೊತೆಗೆ ಹಳದಿ ಕನೇರಿ ಹೂವನ್ನು ಅವಶ್ಯವಾಗಿ ಅರ್ಪಿಸಿ. 

4 /5

4. ಹಳದಿ ಕನೇರಿ ಹೂವು ಶಿವನಿಗೆ ಅತ್ಯಂತ ಪ್ರಿಯವಾದ ಹೂವು ಎನ್ನಲಾಗುತ್ತದೆ. ಶಿವಳಿಂದಾದ ಮೇಲೆ ಈ ಹೂವನ್ನು ಅರ್ಪಿಸಿದರೆ, ಧನ-ಧಾನ್ಯದಲ್ಲಿ ಅಪಾರ ವೃದ್ಧಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಇದು ಮನೆಯಲ್ಲಿನ ದಾರಿದ್ರ್ಯವನ್ನು ತೊಲಗಿಸಲು ಕಾರಣವಾಗಿ ಮನೆಯಲ್ಲಿ ಸುಖ-ಸೌಭಾಗ್ಯ-ಶಾಂತಿ ನೆಲೆಸುವಂತೆ ಮಾಡುತ್ತದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)