Stairway to Heaven: ಸ್ವರ್ಗಕ್ಕಿರುವ ಈ ಮೆಟ್ಟಿಲುಗಳನ್ನು ತೆರವುಗೊಳಿಸಲಿದೆ ಹೊನೊಲುಲು ಆಡಳಿತ, ಕಾರಣ ಇಲ್ಲಿದೆ

Honolulu: Stairway to Heaven - ಹವಾಯಿಯ  (Hawaii)  ಹೊನುಲುಲು (Honolulu)ನಲ್ಲಿರುವ ಹೈಕು ಮೆಟ್ಟಿಲುಗಳನ್ನು (Haiku Stairs) ಸ್ವರ್ಗದ ಮೆಟ್ಟಿಲುಗಳು (Stairway to Heaven) ಎಂದು ಕೂಡ ಕರೆಯಲಾಗುತ್ತದೆ. ಈ ಮೆಟ್ಟಿಲುಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿವೆ. 

Honolulu: Stairway to Heaven - ಹವಾಯಿಯ  (Hawaii)  ಹೊನುಲುಲು (Honolulu)ನಲ್ಲಿರುವ ಹೈಕು ಮೆಟ್ಟಿಲುಗಳನ್ನು (Haiku Stairs) ಸ್ವರ್ಗದ ಮೆಟ್ಟಿಲುಗಳು (Stairway to Heaven) ಎಂದು ಕೂಡ ಕರೆಯಲಾಗುತ್ತದೆ. ಈ ಮೆಟ್ಟಿಲುಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿವೆ. ಆದರೆ, ಇದೀಗ ಈ ಸ್ವರ್ಗದ ಮೆಟ್ಟಿಲುಗಳನ್ನು ತೆಗೆದುಹಾಕಲು ಯೋಜನೆ ರೋಪಿಸಲಾಗಿದೆ. ಈ ಕುರಿತು ಹೊನುಲುಲು ಆಡಳಿತ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಶೀಘ್ರದಲ್ಲಿಯೇ ಅವುಗಳನ್ನು ತೆರವುಗೊಳಿಸಲಾಗುವುದು. ಪ್ರವಾಸಿಗರ ಆಕರ್ಷಣೆಯ (Tourist Attraction Spot) ಕೇಂದ್ರವಾಗಿರುವ ಈ ಮೆಟ್ಟಿಲುಗಳನ್ನು ಯಾಕೆ ತೆರವುಗೊಳಿಸಲಾಗುತ್ತಿದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.

 

ಇದನ್ನೂ ಓದಿ-Pitru Paksha 2021: ಸೆಪ್ಟೆಂಬರ್ 20 ರಿಂದ ಪಿತೃಪಕ್ಷ ಆರಂಭ, ಯಾವ ತಿಥಿಗೆ ಯಾವ ಶ್ರಾದ್ಧ ಬರಲಿದೆ? ಇಲ್ಲಿದೆ ವಿವರ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ಸರ್ವಸಮ್ಮತಿಯಿಂದ ನಡೆದ ಮತದಾನ - ಹೊನೊಲುಲು ಅಧಿಕಾರಿಗಳು ಈ ಜನಪ್ರಿಯ ತಾಣವನ್ನು ತೆರವುಗೊಳಿಸಲು ಯೋಜನೆ ರೂಪಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಸ್ವರ್ಗದ ಮೆಟ್ಟಿಲುಗಳು ಬಹಳ ಅಪಾಯಕಾರಿ ಪ್ರವಾಸಿ ತಾಣ ಎಂದು ಅವರು ಬಣ್ಣಿಸಿದ್ದಾರೆ.  Honolulu City Council  ಕಳೆದ ಬುಧವಾರ ಈ ನಿಟ್ಟಿನಲ್ಲಿ ಸರ್ವಾನುಮತದಿಂದ ಮತ ಚಲಾಯಿಸಿದೆ ಎನ್ನಲಾಗುತ್ತಿದೆ.

2 /6

2. ನಿತ್ಯ 200 ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ - ಎರಡನೇ ಮಹಾಯುದ್ಧದ  (World War II) ವೇಳೆ ಬಳಕೆಯಾದ ರಹಸ್ಯ ಮಿಲಿಟರಿ ರೇಡಿಯೋ ನೆಲೆಯನ್ನು ಪ್ರವೇಶಿಸಲು ಯುಎಸ್ ನೌಕಾಪಡೆಯು  (US Navy) 1940 ರಲ್ಲಿ ಈ ಮೆಟ್ಟಿಲುಗಳನ್ನು ನಿರ್ಮಿಸಿತು ಎಂದು ವರದಿ ಹೇಳುತ್ತದೆ. 1987 ರಲ್ಲಿ, ಕೋಸ್ಟ್ ಗಾರ್ಡ್ ಭದ್ರತಾ ಕಾರಣಗಳಿಗಾಗಿ ಅದನ್ನು ಮುಚ್ಚಿಹಾಕಿತ್ತು. ಆದರೂ ಕೂಡ ಈ ಅಪಾಯಕಾರಿ ತಾಣವು ಪ್ರತಿದಿನ 200 ಕ್ಕೂ ಹೆಚ್ಚು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

3 /6

3. 2480 ಅಡಿ ಎತ್ತರದವರೆಗೆ ಸುಮಾರು 3,922 ಮೆಟ್ಟಿಲುಗಳಿವೆ - ಈ ಮೆಟ್ಟಿಲುಗಳನ್ನು ಏರುವುದು ಕಾನೂನುಬಾಹಿರ, ಆದರೂ ಪ್ರತಿ ವರ್ಷ ಸುಮಾರು 4,000 ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ನಿಯಮವನ್ನು ಉಲ್ಲಂಘಿಸುವವರಿಗೆ $ 1,000 ದಂಡ ವಿಧಿಸಲಾಗುತ್ತದೆ, ಆದರೂ ಕೂಡ ಜನರು ಅದನ್ನು ನಿಯಮಗಳನ್ನು ಪಾಲಿಸುವುದಿಲ್ಲ. ಸ್ವರ್ಗದ ನಿಚ್ಚಣಿಕೆ ಎಂದೇ ಖ್ಯಾತ ಇದು 2,480 ಅಡಿ ಎತ್ತರ ಮತ್ತು 3,922 ಕಿರಿದಾದ ಮೆಟ್ಟಿಲುಗಳನ್ನು ಹೊಂದಿವೆ.

4 /6

4. ಈ ಕಾರಣದಿಂದ ಇವುಗಳನ್ನು ಸ್ವರ್ಗದ ಮೆಟ್ಟಿಲುಗಳು ಎನ್ನಲಾಗುತ್ತದೆ - ಈ ಮೆಟ್ಟಿಲುಗಳನ್ನು ಒವಾಹುದ ಓಹು ಕೂಲೌ ಪರ್ವತ ಶ್ರೇಣಿಯಲ್ಲಿ (Oahu Koolau Mountain Range)ನಿರ್ಮಿಸಲಾಗಿದೆ. ಈ ಮೆಟ್ಟಿಲುಗಳನ್ನು ಏರಿದವರಿಗೆ ತಾವು ಮೋಡಗಳ ನಡುವೆ ತಲುಪಿದಂತೆ ಭಾಸವಾಗುತ್ತದೆ. ಇದೆ ಕಾರಣದಿಂದ ಇದನ್ನು 'ಸ್ವರ್ಗಕ್ಕೆ ಮೆಟ್ಟಿಲು' ಎಂದು ಕರೆಯಲಾಗುತ್ತದೆ.

5 /6

5. ಬಂಧನದ ಭೀತಿ ಕೂಡ ಕೆಲಸಕ್ಕೆ ಬರುತ್ತಿಲ್ಲ - ಈ ವರ್ಷದ ಮಾರ್ಚ್ 14 ಮತ್ತು ಮಾರ್ಚ್ 23 ರ ನಡುವೆ ಹೊನೊಲುಲು ಪೊಲೀಸರು ಮೆಟ್ಟಿಲುಗಳನ್ನು ಏರಿದ ಸುಮಾರು 6 ಪಾದಾಚಾರಿ ಪ್ರವಾಸಿಗರನ್ನು ಬಂಧಿಸಿದ್ದರು. ಅಲ್ಲದೆ, ಪ್ರವಾಸಿಗರು ಕಾನೂನುಬಾಹಿರವಾಗಿ ಏರುವುದನ್ನು ತಡೆಯುವ ಕಾರ್ಯಾಚರಣೆಯಲ್ಲಿ 93 ನೋಟಿಸ್‌ಗಳನ್ನು ಜಾರಿಗೊಳಿಸಿದೆ. ಇದರ ಹೊರತಾಗಿಯೂ ಜನರು ಅಲ್ಲಿಗೆ ಭೇಟಿ ನೀಡುವುದನ್ನು ಬಿಡುತ್ತಿಲ್ಲ. ಈ ಕಾರಣದಿಂದಾಗಿ, ಮೆಟ್ಟಿಲುಗಳನ್ನು ತೆರವುಗೊಳಿಸಲು ಇದೀಗ ಸಿದ್ಧತೆ ನಡೆಸಲಾಗುತ್ತಿದೆ.

6 /6

6. ಇದುವರೆಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ - ಕುಲಾವ್ ಪರ್ವತ ಶ್ರೇಣಿಯಲ್ಲಿ ನಿರ್ಮಿಸಲಾಗಿರುವ ಈ ಮೆಟ್ಟಿಲುಗಳನ್ನು ನಗರಾಡಳಿತ ಅಪಾಯಕಾರಿ ತಾಣವೆಂದು ಪರಿಗಣಿಸಿದ್ದರೂ, ಇದುವರೆಗೆ ಇಲ್ಲಿ ಕೇವಲ ಒಂದು ಸಾವು ದಾಖಲಾಗಿದೆ. ಗಾಯಕ ಮತ್ತು ಹಾಸ್ಯನಟ ಫ್ರಿಟ್ಜ್ ಹಸೆನ್‌ಪುಶ್ (Fritz Hasenpusch) 2012 ರಲ್ಲಿ ಇವುಗಳನ್ನು ಏರುವಾಗ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದರು.