Russia Ukraine War: ಸ್ಯಾಟಲೈಟ್‌ನಲ್ಲಿ ಸೇರೆಯಾದ ಉಕ್ರೇನ್‌ನ ಭಯಾನಕ ದೃಶ್ಯಗಳು

ಉಪಗ್ರಹದಲ್ಲಿ ಸೆರೆಯಾದ ಯುದ್ಧಪೀಡಿತ ಉಕ್ರೇನ್ ನಲ್ಲಿನ ಭಯಾನಕ ಸ್ಥಿತಿಯ ದೃಶ್ಯಗಳು ಇಲ್ಲಿವೆ ನೋಡಿ.

ರಷ್ಯಾದ ಆಕ್ರಮಣದ ನಂತರ ಒಂದೇ ವಾರದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ನಿರಾಶ್ರಿತರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಸಂಘರ್ಷವನ್ನು ತಕ್ಷಣವೇ ಕೊನೆಗೊಳಿಸದಿದ್ದಲ್ಲಿ ಇನ್ನೂ ಲಕ್ಷಾಂತರ ಜನರು ಪಲಾಯನ ಮಾಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ. ಉಪಗ್ರಹದಲ್ಲಿ ಸೆರೆಯಾದ ಯುದ್ಧಪೀಡಿತ ಉಕ್ರೇನ್ ನಲ್ಲಿನ ಭಯಾನಕ ಸ್ಥಿತಿಯ ದೃಶ್ಯಗಳು ಇಲ್ಲಿವೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿದೆ. ಇಡೀ ಜಗತ್ತೇ ಉಕ್ರೇನ್ ಪರಿಸ್ಥಿತಿಗೆ ಮರುಕ ವ್ಯಕ್ತಪಡಿಸಿದ್ದು, ಯುದ್ಧಪೀಡಿತ ದೇಶದಲ್ಲಿರುವ ಜನರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದಾರೆ. ರಷ್ಯಾ ದಾಳಿನ ನಂತರ ಝೈಟೊಮಿರ್‌ನಲ್ಲಿನ ಕಟ್ಟಟವೊಂದಕ್ಕೆ ಒದಗಿ ಬಂದ ಪರಿಸ್ಥಿತಿ ಇದು. ಅಗ್ನಿಶಾಮಕ ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ದೃಶ್ಯವಿದು.  

2 /5

ಮ್ಯಾಕ್ಸರ್ ಟೆಕ್ನಾಲಜೀಸ್ ಬಿಡುಗಡೆ ಮಾಡಿದ ಈ ಉಪಗ್ರಹ ಚಿತ್ರವು ಫೆಬ್ರವರಿ 28ರಂದು ಉಕ್ರೇನ್‌ನಿಂದ ಸ್ಲೋವಾಕಿಯಾಕ್ಕೆ ವಿಸ್ನೆ ನೆಮೆಕೆ ಗಡಿಯನ್ನು ದಾಡುತ್ತಿರುವ ನಿರಾಶ್ರಿತರ ವಾಹನಗಳನ್ನು ತೋರಿಸುತ್ತದೆ.

3 /5

ಈ ಉಪಗ್ರಹ ಚಿತ್ರವು 28 ಫೆಬ್ರವರಿ 2022ರಂದು ಉಕ್ರೇನ್‌ನ ಚೆರ್ನಿಹಿವ್‌ನ ಪಶ್ಚಿಮ ಹೊರವಲಯದಲ್ಲಿ ನಾಶವಾದ ಕಾರ್ಖಾನೆಯ ಕಟ್ಟಡವನ್ನು ತೋರಿಸುತ್ತದೆ.

4 /5

ಫೆಬ್ರವರಿ 28ರಂದು ತೆಗೆದ ಮತ್ತು ಮಾರ್ಚ್ 2ರಂದು ಬಿಡುಗಡೆಯಾದ ಈ ಉಪಗ್ರಹ ಚಿತ್ರ ಉಕ್ರೇನ್‌ನ ಚೆರ್ನಿಹಿವ್‌ನ ನೈಋತ್ಯ ಭಾಗದಲ್ಲಿ ಮಿಲಿಟರಿ ಬೆಂಗಾವಲು ಪಡೆಯನ್ನು ತೋರಿಸುತ್ತವೆ.

5 /5

ಫೆಬ್ರವರಿ 28ರಂದು ತೆಗೆದ ಮತ್ತು ಮಾರ್ಚ್ 2ರಂದು ಬಿಡುಗಡೆಯಾದ ಈ ಉಪಗ್ರಹ ಚಿತ್ರವು ಉಕ್ರೇನ್‌ನ ಚೆರ್ನಿಹಿವ್‌ನಲ್ಲಿ ರಸ್ತೆ ಮತ್ತು ಪಕ್ಕದ ಮನೆಗಳಲ್ಲಿ ಹಾನಿಗೊಳಗಾದ ಸೇತುವೆಯನ್ನು ತೋರಿಸುತ್ತದೆ.