ಶನಿಯ ರಾಶಿಯಲ್ಲಿ ಸೂರ್ಯನ ಗೋಚರ, ಈ ಐದು ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲೂ ಸಿಗಲಿದೆ ಪ್ರಗತಿ

 ಈ ಬದಲಾವಣೆಯು ಗ್ರಹಗಳ ರಾಜನಾದ ಸೂರ್ಯನ ಸ್ಥಾನದಲ್ಲಿದ್ದರೆ, ಅದರ ಪರಿಣಾಮವು ಅನೇಕ ಪಟ್ಟು ಹೆಚ್ಚಾಗುತ್ತದೆ. 

ನವದೆಹಲಿ : ಗ್ರಹಗಳ ರಾಶಿಚಕ್ರದ ಬದಲಾವಣೆಯು ನಮ್ಮ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಬದಲಾವಣೆಯು ಗ್ರಹಗಳ ರಾಜನಾದ ಸೂರ್ಯನ ಸ್ಥಾನದಲ್ಲಿದ್ದರೆ, ಅದರ ಪರಿಣಾಮವು ಅನೇಕ ಪಟ್ಟು ಹೆಚ್ಚಾಗುತ್ತದೆ. ಯಶಸ್ಸು, ಕೀರ್ತಿ, ಆರೋಗ್ಯ, ನಾಯಕತ್ವ ಇತ್ಯಾದಿಗಳಿಗೆ ಸೂರ್ಯನೇ ಕಾರಣ. ಜನವರಿ 14 ರಂದು, ಸೂರ್ಯ ಮಕರ ರಾಶಿಗೆ ಪ್ರವೆಶಿಸಲಿದ್ದಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಬದಲಾವಣೆಯು 5 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇಷ ರಾಶಿಯವರಿಗೆ ಸೂರ್ಯನ ಸಂಚಾರವು ತುಂಬಾ ಮಂಗಳಕರವಾಗಿರುತ್ತದೆ. ವೃತ್ತಿ ಜೀವನದಲ್ಲಿ ಮಹತ್ತರವಾದ ಪ್ರಗತಿ ಕಂಡುಬರಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಸರ್ಕಾರಿ ಕ್ಷೇತ್ರ ಅಥವಾ ರಾಜಕೀಯಕ್ಕೆ ಸಂಬಂಧಿಸಿದ ಜನರ ವೃತ್ತಿಜೀವನವು ಪ್ರಕಾಶಮಾನವಾಗಿರುತ್ತದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. 

2 /5

ವೃಷಭ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹೆಚ್ಚಿದ ಆದಾಯವು ದೊಡ್ಡ ಉಳಿತಾಯಕ್ಕೆ ಕಾರಣವಾಗುತ್ತದೆ. ಹಳೆಯ ಸಮಸ್ಯೆಗಳು ಮುಗಿದು ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ಅತ್ಯುತ್ತಮವಾಗಿರುತ್ತದೆ. ಕೆಲವು ಒಳ್ಳೆಯ ಸುದ್ದಿಗಳಿಂದ ಸಂತೋಷ ಸಿಗುತ್ತದೆ. 

3 /5

ಸೂರ್ಯನು ಸಿಂಹ ರಾಶಿಯ ಅಧಿಪತಿ. ಆದ್ದರಿಂದ ಸೂರ್ಯನ ಸಂಚಾರವು ಈ ರಾಶಿಯ ಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಬಡ್ತಿ ಪಡೆಯುವ ಬಲವಾದ ಅವಕಾಶಗಳಿವೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ನಿಮ್ಮ ಕೆಲಸದಿಂದ ಎಲ್ಲರ ಮನ ಗೆಲ್ಲುವಿರಿ. ಬಹುದಿನಗಳಿಂದ ನಿಮ್ಮ ಮನಸ್ಸಿನಲ್ಲಿದ್ದ ಆಸೆ ಈಗ ಈಡೇರಲಿದೆ.   

4 /5

ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಉತ್ತಮ ಯಶಸ್ಸನ್ನು ಪಡೆಯಬಹುದು. ಹಣವು ಪ್ರಯೋಜನಕಾರಿಯಾಗಲಿದೆ. ಒಟ್ಟಾರೆಯಾಗಿ, ಈ ಸಮಯ ಅದ್ಭುತವಾಗಿರುತ್ತದೆ. 

5 /5

ಮೀನ ರಾಶಿಯ ಜನರು ವೃತ್ತಿಯಲ್ಲಿ ಹಣದ ಜೊತೆಗೆ ಖ್ಯಾತಿಯನ್ನು ಪಡೆಯುತ್ತಾರೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಬಹಳ ಎತ್ತರಕ್ಕೆ  ಏರುತ್ತೀರಿ. ರಾಜಕೀಯದಲ್ಲಿ ಸಕ್ರಿಯರಾಗಿರುವವರು ದೊಡ್ಡ ಹುದ್ದೆ ಪಡೆಯಬಹುದು.