ಮೂರು ವರ್ಷದೊಳಗಿನ ಮಕ್ಕಳಿಗೆ ಈ ಐದು ವಿಷಯಗಳ ಬಗ್ಗೆ ತಿಳುವಳಿಕೆ ಇರಲಿ

2.5 ರಿಂದ 3 ವರ್ಷಗಳ ಒಳಗಿನ ಮಗುವಿಗೆ ಕಲಿಸಬೇಕಾದ ಉತ್ತಮ ನಡವಳಿಕೆ ಮತ್ತು ನಡವಳಿಕೆಗೆ ಸಂಬಂಧಿಸಿದ 5 ವಿಷಯಗಳು ಬಹು ಮುಖ್ಯವಾಗಿರುತ್ತದೆ. 
 

ಬೆಂಗಳೂರು : ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಮಕ್ಕಳ ಪಾಲನೆ ವೇಳೆ ಪೋಷಕರು ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ. ಎಷ್ಟೋ ಮಕ್ಕಳು ತಮ್ಮ ಹಿರಿಯರ ಜೊತೆ ಅಸಭ್ಯವಾಗಿ ಮಾತನಾಡಿ ಗೌರವ ಕೊಡದೇ ಇರುವುದನ್ನು ನೋಡಿರಬಹುದು. ಮಕ್ಕಳ ಇ ನಡವಳಿಕೆ ಹಿಂದೆ ಪೋಷಕರೇ ಎಡವಿರುವ ಕುರುಹು ಕಾಣುತ್ತದೆ. ಹೌದು, ಉತ್ತಮ ಸಂಸ್ಕಾರವನ್ನು ಕಲಿಸದ ಕಾರಣ ಮಕ್ಕಳಲ್ಲಿ ಈ ವರ್ತನೆ ಕಂಡು ಬರುತ್ತದೆ. ಮಕ್ಕಳಿಗೆ ಶಿಷ್ಟಾಚಾರ ಎಷ್ಟು ಮುಖ್ಯವೋ, ಸಮಾಜದಲ್ಲಿ ಪೋಷಕರು ತಲೆ ತಗ್ಗಿಸದಂತ ಕೆಲಸ ಮಾಡುವಂತೆ ಮಕ್ಕಳಿಗೆ ಮೌಲ್ಯವನ್ನು ಕಲಿಸುವುದು ಕೂಡಾ ಮುಖ್ಯವಾಗಿರುತ್ತದೆ. 2.5 ರಿಂದ 3 ವರ್ಷಗಳ ಒಳಗಿನ ಮಗುವಿಗೆ ಕಲಿಸಬೇಕಾದ ಉತ್ತಮ ನಡವಳಿಕೆ ಮತ್ತು ನಡವಳಿಕೆಗೆ ಸಂಬಂಧಿಸಿದ 5 ವಿಷಯಗಳು ಬಹು ಮುಖ್ಯವಾಗಿರುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮಗುವಿಗೆ 3 ವರ್ಷ ವಯಸ್ಸಾದ ತಕ್ಷಣ, ಸರಿಯಾದ ನಡವಳಿಕೆಯನ್ನು ಕಲಿಸಬೇಕು. ಇತರರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಮಕ್ಕಳಿಗೆ ಕಲಿಸಬೇಕು.  ಇದರಿಂದ ಮಗು ತನ್ನ ಹಿರಿಯರನ್ನು ಗೌರವಿಸುತ್ತಾನೆ ಮತ್ತು ಕಿರಿಯರನ್ನು ಪ್ರೀತಿಸುತ್ತಾನೆ. ಈ ಶಿಕ್ಷಣವು ಅವನ ಜೀವನದುದ್ದಕ್ಕೂ ಮುಂದುವರಿಯಲು ಸಹಾಯ ಮಾಡುತ್ತದೆ.

2 /5

ಮಕ್ಕಳಿಗೆ ಕೆಲವು ವಿಷಯಗಳನ್ನು ಕಲಿಸುವುದು ಬಹಳ ಮುಖ್ಯ. ತನಗಿಂತ ಹಿರಿಯರನ್ನು ಭೇಟಿಯಾದಾಗ, ಅವರೊಂದಿಗೆ ಹೇಗೆ ಮಾತನಾಡಬೇಕು ಎನ್ನುವುದನ್ನು ಕಲಿಸಿ.  ವಯಸ್ಸಾದವರನ್ನು ಭೇಟಿಯಾಗುವಾಗ ಹಲೋ, ಗುಡ್ ಮಾರ್ನಿಂಗ್, ಗುಡ್ ಈವ್ನಿಂಗ್ ಎಂಬ ಪದಗಳನ್ನು ಬಳಸುವುದನ್ನು ಮಕ್ಕಳಿಗೆ ಕಲಿಸಿ.

3 /5

ಉತ್ತಮ ನಡವಳಿಕೆಯ ವಿಷಯಕ್ಕೆ ಬಂದಾಗ, ಮಕ್ಕಳಿಗೆ ಪ್ಲೀಸ್ ಥ್ಯಾಂಕ್ಯು ಹೇಳುವುದನ್ನು ಕಲಿಸಿ.  ಈ ಪದಗಳನ್ನು ಬಳಸುವುದರಿಂದ ನಿಮ್ಮ ಮಕ್ಕಳಲ್ಲಿ  ಸೌಜನ್ಯ ಹೆಚ್ಚುತ್ತದೆ.

4 /5

ಮಕ್ಕಳಲ್ಲಿ ಶಿಷ್ಟಾಚಾರವನ್ನು ಬೆಳೆಸುವ ಇನ್ನೊಂದು ವಿಧಾನವೆಂದರೆ ಯಾವಾಗಲೂ ಬಡವರನ್ನು ಅಥವಾ ತಮಗಿಂತ ದುರ್ಬಲರನ್ನು ಗೇಲಿ ಮಾಡದಂತೆ ಅವರಿಗೆ ಕಲಿಸುವುದು. ಒಬ್ಬರ ಉಡುಗೆ, ಆಹಾರ, ಬಣ್ಣ ಅಥವಾ ಭಾಷೆಯನ್ನು ಗೇಲಿ ಮಾಡಬಾರದು. ಇದರ ಹೊರತಾಗಿ ಮಕ್ಕಳು ಯಾರ ದೈಹಿಕ ಅಥವಾ ಮಾನಸಿಕ ಸ್ಥಿತಿಯನ್ನು ಕೂಡಾ ಗೇಲಿ ಮಾಡಬಾರದು.

5 /5

ಪ್ರಸ್ತುತ, ಪ್ರತಿ ಮಗುವೂ ಫೋನ್ ಆಪರೇಟ್ ಮಾಡಲು ಬಯಸುತ್ತದೆ . ಆದರೆ ಫೋನ್‌ನಲ್ಲಿ ಹೇಗೆ ಮಾತನಾಡಬೇಕು ಮತ್ತು ಯಾವ ವ್ಯಕ್ತಿಯೊಂದಿಗೆ ಹೇಗೆ ಮತ್ತು ಯಾವ ಧ್ವನಿಯಲ್ಲಿ ಮಾತನಾಡಬೇಕು ಎಂಬುದನ್ನು ಮಗುವಿಗೆ ಕಲಿಸಬೇಕು.