ಇದು ವಿಮಾನವನ್ನೂ ಮೀರಿಸುವ ರೈಲು..! ಇದರಲ್ಲಿ ಸ್ಪೆಷಾಲಿಟಿ ಏನು.?

ದೂರದ ರೈಲು ಪಯಣ ಈಗ ಹೆಚ್ಚು ಆರಾಮದಾಯಕವಾಗಿದೆ. ಭಾರತೀಯ ರೈಲು ಇದೀಗ ಬದಲಾಗುತ್ತಿದೆ.

ನವದೆಹಲಿ :  ದೂರದ ರೈಲು ಪಯಣ ಈಗ ಹೆಚ್ಚು ಆರಾಮದಾಯಕವಾಗಿದೆ. ಭಾರತೀಯ ರೈಲು (Indian Railway) ಇದೀಗ ಬದಲಾಗುತ್ತಿದೆ. ತೇಜಸ್ ಸ್ಲೀಪರ್ ನಂತಹ   ರೈಲುಗಳನ್ನು ಭಾರತೀಯ ರೈಲ್ವೆ ಆರಂಭಿಸಿದೆ. ಇಂಡಿಯನ್ ರೈಲ್ವೆ ತೇಜಸ್ ಸ್ಲೀಪರ್ (Tejas Sleeper) ರೈಲಿನ ಕೆಲವು ಫೋಟೋಗಳನ್ನು ರಿಲೀಸ್ ಮಾಡಿದೆ. ಈ ಟ್ರೈನಿನಲ್ಲಿರುವ ಸೌಕರ್ಯಗಳು ವಿಮಾನವನ್ನೂ ಮೀರಿಸುತ್ತಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬೋಗಿ ಹೆಚ್ಚು ಆರಾಮದಾಯಕ :  ಪ್ರಯಾಣಿಕರಿಗೆ ಹೆಚ್ಚು ಆರಾಮ ಒದಗಿಸಲು ತೇಜಸ್ ಬೋಗಿಗಳಲ್ಲಿ ಏರ್ ಸ್ಪ್ರಿಂಗ್ ಸಸ್ಪೆನ್ಸನ್ ಬಳಸಲಾಗುತ್ತದೆ. ಈ ಹೊಸ ತೇಜಸ್ ರೈಲುಗಳು ಫೆ. 15ರಿಂದ ಶುರುವಾಗಿವೆ. ಅಗರ್ತಲ-ಆನಂದ ವಿಹಾರ್ ಟರ್ಮಿನಸ್ ನಡುವೆ ಓಡಾಟ ನಡೆಸುತ್ತಿದೆ. ತೇಜಸ್ ಸ್ಲೀಪರ್ ರೈಲುಗಳಿಗಾಗಿ 500 ವಿಶೇಷ ಕೋಚ್ ಗಳನ್ನು  ಭಾರತೀಯ ರೈಲ್ವೆ ನಿರ್ಮಿಸುತ್ತಿದೆ.   

2 /5

ಹೈಟೆಕ್ ಟಾಯ್ಲೆಟ್ : ಈ ರೈಲುಗಳಲ್ಲಿ ಬಯೋ ವ್ಯಾಕ್ಯೂಮ್ ಟಾಯ್ಲೆಟ್ ಸಿಸ್ಟಮ್ ಬಳಸಲಾಗುತ್ತದೆ. ಇದರಲ್ಲಿ ಸ್ವಚ್ಛತೆ ಜೊತೆಗೆ ನೀರಿನ ಬಳಕೆಯೂ ಕಡಿಮೆ ಆಗುತ್ತದೆ.  ಹೊಸ ವಿನ್ಯಾಸದ ಡಸ್ಟ್ ಬಿನ್, ಜೆಲ್ ಕೋಟೆಡ್ ಶೆಲ್ಫ್, , ಟಚ್ ಲೆಸ್  ಫಿಟ್ಟಿಂಗ್ ಈ ಟಾಯ್ಲೆಟಿನ ವಿಶೇಷತೆಗಳು.  

3 /5

ಕೋಚ್ ಗಳಲ್ಲಿ  ಸ್ಮಾರ್ಟ್ ಫೀಚರ್ಸ್..! ಪ್ರಯಾಣಿಕ ಅನೌನ್ಸ್ ಮೆಂಟ್ ಸಿಸ್ಟಮ್, ಪ್ರಯಾಣಿಕರ ಮಾಹಿತಿ ಸಿಸ್ಟಮ್ ಮುಂತಾದ ಸ್ಮಾರ್ಟ್ ಫೀಚರ್ಸ್ ಈ ಟ್ರೈ ನಿನಲ್ಲಿದೆ. ಡಿಜಿಟಲ್ ಡೆಸ್ಟಿನೇಶನ್ ಬೋರ್ಡ್, ನೈಟ್ ವಿಶನ್ ಇರುವ  ಸಿಸಿಟಿವಿ, ಏರ್ ಕ್ವಾಲಿಟಿ ಮಾಪನ, ಎಮೆರ್ಜೆನ್ಸಿ ಟಾಕ್ ಬ್ಯಾಕ್ ಸ್ಟಿಸ್ಟಮ್ ರೈಲಿನಲ್ಲಿರಲಿದೆ. 

4 /5

 ಅಟೋಮ್ಯಾಟಿಕ್ ಬಾಗಿಲು, ಸೀಟು ಕೂಡಾ ವಿಶೇಷ : ಎಲ್ಲಾ ಕೋಚ್ ಗಳಲ್ಲೂ  ಸ್ವಯಂಚಾಲಿತ ಬಾಗಿಲುಗಳಿರಲಿವೆ. ಎಲ್ಲಾ ಮುಖ್ಯ ಪ್ರವೇಶದ್ವಾರಗಳು ಸೆಂಟ್ರಲೈಸ್ಡ್ ಆಗಿರಲಿದೆ. ಗಾರ್ಡ್ ಕೈಯಲ್ಲಿ ಅದರ ನಿಯಂತ್ರಣ ಇರಲಿದೆ. ಸೀಟಿಗೆ ಪಿಯು ಫೋಮ್ ಬಳಸಲಾಗಿದೆ. ಇದು ಅಧಿಕ ಅರಾಮದಾಯಕ.

5 /5

ಅಟೋಮ್ಯಾಟಿಕ್ ಅಗ್ನಿ ಅಲಾರ್ಮ್ ಸಿಸ್ಟಮ್ : ಕೋಚ್ ಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಪ್ರತಿ ಕೋಚ್ ಗಳಲ್ಲಿ ಅಟೋಮ್ಯಾಟಿಕ್ ಬೆಂಕಿ ಮುನ್ಸೂಚನೆ ನೀಡುವ ವ್ಯವಸ್ಥೆ ಮಾಡಲಾಗಿದೆ.