IPL ಪ್ರಾರಂಭದ ಖುಷಿಯಿದ್ದರೂ… ಕ್ರಿಕೆಟ್ ಅಭಿಮಾನಿಗಳಲ್ಲಿ ಕಣ್ಣೀರು ತರಿಸುತ್ತಿದೆ ಈ ಆಟಗಾರರ ಅನುಪಸ್ಥಿತಿ!

IPL 2023: ಮಾರ್ಚ್ 31ರಿಂದ ಕ್ರಿಕೆಟ್ ಹಬ್ಬ ಐಪಿಎಲ್ ಪ್ರಾರಂಭವಾಗುತ್ತಿದೆ. ಐಪಿಎಲ್ ಆರಂಭದ ಸಂತಸ ಒಂದೆಡೆಯಾದ್ರೆ ಕೆಲ ಕ್ರಿಕೆಟ್ ದಿಗ್ಗಜರ ಅನುಪಸ್ಥಿತಿ ಅಭಿಮಾನಿಗಳ ಮನಹಿಂಡುವಂತೆ ಮಾಡುತ್ತಿದೆ. ಈ ಬಾರಿಯ ಐಪಿಎಲ್’ನಲ್ಲಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರಿಗೂ ಕೊನೆಯ ಪಂದ್ಯಾವಳಿ ಎಂದು ಹೇಳಲಾಗುತ್ತಿದೆ. ಇನ್ನು ಈ 5 ಆಟಗಾರರು ಐಪಿಎಲ್’ನಲ್ಲಿ ಛಾಪು ಮೂಡಿಸಿ, ಈ ಬಾರಿಯ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.  

1 /6

ಮಾರ್ಚ್ 31ರಿಂದ ಕ್ರಿಕೆಟ್ ಹಬ್ಬ ಐಪಿಎಲ್ ಪ್ರಾರಂಭವಾಗುತ್ತಿದೆ. ಐಪಿಎಲ್ ಆರಂಭದ ಸಂತಸ ಒಂದೆಡೆಯಾದ್ರೆ ಕೆಲ ಕ್ರಿಕೆಟ್ ದಿಗ್ಗಜರ ಅನುಪಸ್ಥಿತಿ ಅಭಿಮಾನಿಗಳ ಮನಹಿಂಡುವಂತೆ ಮಾಡುತ್ತಿದೆ. ಈ ಬಾರಿಯ ಐಪಿಎಲ್’ನಲ್ಲಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರಿಗೂ ಕೊನೆಯ ಪಂದ್ಯಾವಳಿ ಎಂದು ಹೇಳಲಾಗುತ್ತಿದೆ. ಇನ್ನು ಈ 5 ಆಟಗಾರರು ಐಪಿಎಲ್’ನಲ್ಲಿ ಛಾಪು ಮೂಡಿಸಿ, ಈ ಬಾರಿಯ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.  

2 /6

ಕೀರಾನ್ ಪೊಲಾರ್ಡ್ ಅವರು ಭಾರತೀಯ ಪ್ರೀಮಿಯರ್ ಲೀಗ್‌ನಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ. ಪೊಲಾರ್ಡ್ 2010 ರಲ್ಲಿ ಮುಂಬೈ ಇಂಡಿಯನ್ಸ್’ಗಾಗಿ ಚೊಚ್ಚಲ ಪ್ರವೇಶವನ್ನು ಮಾಡಿದ್ದಾರೆ. 2022 ರವರೆಗೆ ಅದೇ ಫ್ರ್ಯಾಂಚೈಸ್’ನಲ್ಲಿ ಕಾಣಿಸಿಕೊಂಡಿದ್ದಾರೆ.

3 /6

ವೆಸ್ಟ್ ಇಂಡೀಸ್ ದಂತಕಥೆ ಡ್ವೇನ್ ಬ್ರಾವೋ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌’ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕಳಪೆ ಆಟದ ಕಾರಣ ಅವರನ್ನು ಸಿಎಸ್‌ಕೆ ಫ್ರ್ಯಾಂಚೈಸ್ ರಿಲೀಸ್ ಮಾಡಿದೆ. ಬ್ರಾವೋ 2008 ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್’ಗೆ ಪಾದಾರ್ಪಣೆ ಮಾಡಿದರು. 2010ರವರೆಗೆ ಅದೇ ತಂಡದಲ್ಲಿ ಕಾಣಿಸಿಕೊಂಡರು. ಬಳಿಕ 2011 ರಿಂದ 2015 ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಸಿಎಸ್’ಕೆಯಿಂದ 2 ವರ್ಷಗಳ ನಿಷೇಧದ ನಂತರ, ಬ್ರಾವೋ 2016-2017ರವರೆಗೆ ಗುಜರಾತ್ ಲಯನ್ಸ್‌’ಗಾಗಿ ತಂಡದಲ್ಲಿ ಕಾಣಿಸಿಕೊಂಡರು. ಬಳಿಕ 2018 ರಲ್ಲಿ ಸಿಎಸ್’ಕೆ ತಂಡಕ್ಕೆ ಮರಳಿ 2022 ರವರೆಗೆ ಆಡಿದರು.

4 /6

ರಾಬಿನ್ ಉತ್ತಪ್ಪಾ ನಿವೃತ್ತಿಯನ್ನು ಘೋಷಿಸಿದ್ದರಿಂದ ಈ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. 2009 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಚೊಚ್ಚಲ ಪ್ರವೇಶಿಸಿದರು. 2010 ರವರೆಗೆ ಅದೇ ತಂಡಕ್ಕಾಗಿ ಆಡಿದರು. ಮುಂದೆ 2011 ರಿಂದ 2013 ರವರೆಗೆ ಪುಣೆ ವಾರಿಯರ್ಸ್ ಇಂಡಿಯಾಗಾಗಿ ಆಟವಾಡಿದರು. 2014 ರಿಂದ 2019 ರವರೆಗೆ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಕಾಣಿಸಿಕೊಂಡರು. ನಂತರ ಉತ್ತಪ್ಪಾ 2020 ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಕಾಣಿಸಿಕೊಂಡರು. ಆ ಬಳಿಕ 2021-22ರವರೆಗೆ ಚೆನ್ನೈ ಸೂಪರ್ ಕಿಂಗ್ಸ್’ಗಾಗಿ ಆಟವಾಡಿದರು.

5 /6

ಆರನ್ ಫಿಂಚ್ ಐಪಿಎಲ್ 2023 ರಲ್ಲಿ ಕಾಣಿಸಿಕೊಳ್ಳದ ಇನ್ನೊಬ್ಬ ಆಟಗಾರ. ನಿರಾಶಾದಾಯಕ 2022 ಪಂದ್ಯಾವಳಿಯ ನಂತರ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರ್ಯಾಂಚೈಸ್ ಬಿಡುಗಡೆ ಮಾಡಿತು. ಫಿಂಚ್ 2010 ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. 2013 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ, 2014 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್, 2015ರಲ್ಲಿ ಮುಂಬೈ ಇಂಡಿಯನ್ಸ್, 2016-2017ರಲ್ಲಿ ಗುಜರಾತ್ ಲಯನ್ಸ್, 2018ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು 2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದರು.

6 /6

ಪ್ಯಾಟ್ ಕಮ್ಮಿನ್ಸ್ ಐಪಿಎಲ್ 2020 ಆವೃತ್ತಿಯಲ್ಲಿ ಐಪಿಎಲ್ 2020 ಆವೃತ್ತಿಯಲ್ಲಿ ಅತ್ಯಂತ ದುಬಾರಿ ಹಣ ವ್ಯಯಿಸಿ ಅವರನ್ನು ಖರೀದಿ ಮಾಡಲಾಗಿತ್ತು. ಕೋಲ್ಕತಾ ನೈಟ್ ರೈಡರ್ಸ್ ಅವರಿಗಾಗಿ 15.50 ಕೋಟಿ ರೂ. ನೀಡಿತ್ತು. 2020 ರ ಆವೃತ್ತಿಯ ಫೈನಲ್‌ ಕೆಕೆಆರ್‌ ತಲುಪಲು ಸಹಾಯ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.