Buddha Purnima 2023: 130 ವರ್ಷಗಳ ಬಳಿಕ ರೂಪುಗೊಳ್ಳಲಿದೆ ಈ ಮಹಾಯೋಗ, ರಾತ್ರೋರಾತ್ರಿ ನಿಮ್ಮ ಮನೆ ಕದ ತಟ್ಟಲಿದ್ದಾಳೆ ತಾಯಿ ಲಕ್ಷ್ಮಿ!

Buddha Purnima 2023: ವೈಶಾಖ ಮಾಸದಲ್ಲಿ ಬರುವ ಹುಣ್ಣಿಮೆಗೆ ವಿಶೇಷ ಮಹತ್ವವಿರುತ್ತದೆ. ಇದನ್ನು ಬುದ್ಧ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಬುದ್ಧ ಪೂರ್ಣಿಮೆಯ ಈ ಶುಭ ಸಂದರ್ಭದಂದು ಒಂದು ಶುಭ ಕಾಕತಾಳೀಯ ರೂಪುಗೊಳ್ಳುತ್ತಿದ್ದು, ಹಲವು ರಾಶಿಗಳ ಜನರ ಅದೃಷ್ಟದ ಬಾಗಿಲನ್ನೇ ಇದು ತೆರೆಯಲಿದೆ.
 

Buddha Purnima 2023 Horoscope: ಪ್ರತಿ ವರ್ಷ ವೈಶಾಖ ಮಾಸದ ಹುಣ್ಣಿಮೆಯಂದು ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಗೌತಮ ಬುದ್ಧನು ಈ ದಿನ ಜನಿಸಿದನು ಮತ್ತು ಈ ದಿನ ಜ್ಞಾನೋದಯವನ್ನು ಪಡೆದನು ಎನ್ನಲಾಗುತ್ತದೆ. ಗೌತಮ ಬುದ್ಧನ ಜೀವನದ ಮೂರು ಪ್ರಮುಖ ಘಟನೆಗಳು, ಅವನ ಜನ್ಮ, ಜ್ಞಾನೋದಯ ಮತ್ತು ಮೋಕ್ಷವು ವರ್ಷದ ಒಂದು ದಿನ ಮಾತ್ರ ಬರುತ್ತದೆ ಎಂದು ಹೇಳಲಾಗುತ್ತದೆ. ಈ ವರ್ಷ, ಮೇ 5, 2023 ರಂದು ಬುದ್ಧ ಪೂರ್ಣಿಮೆಯನ್ನು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

 

ಇದನ್ನೂ ಓದಿ-Budh Vakri 2023: 10 ದಿನಗಳ ಬಳಿಕ ಈ ರಾಶಿಯ ಜನರು ಭಾರಿ ಶ್ರೀಮಂತರಾಗಲಿದ್ದಾರೆ, ವಕ್ರಿ ಬುಧನ ಕಾರಣ ತಿಜೋರಿ ಹಣದಿಂದ ತುಂಬಿ ತುಳುಕಲಿದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಬುದ್ಧ ಪೂರ್ಣಿಮೆಯ ದಿನ ಬಹಳ ವಿಶೇಷವಾಗಿದೆ. ಈ ದಿನ ಅಪರೂಪದ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಇದೆ ವೇಳೆ, ಈ ದಿನದಂದು ವರ್ಷದ ಮೊದಲ ಚಂದ್ರಗ್ರಹಣವೂ ಸಹ ಸಂಭವಿಸಲಿದೆ. ಇದರೊಂದಿಗೆ ಗ್ರಹಗಳು ಮತ್ತು ನಕ್ಷತ್ರಗಳ ಅದ್ಭುತ  ಕಾಕತಾಳೀಯವೂ ರೂಪುತೊಳ್ಳುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 130 ವರ್ಷಗಳ ನಂತರ ಬುದ್ಧ ಪೂರ್ಣಿಮೆಯಂದು ಇಂತಹ ಕಾಕತಾಳೀಯ ನಿರ್ಮಾಣಗೊಳ್ಳುತ್ತಲಿದೆ. ಈ ಸಂಯೋಜನೆಯ ಬಗ್ಗೆ ಮತ್ತು ಈ ಅವಧಿಯಲ್ಲಿ ಯಾವ ರಾಶಿಗಳಿಗೆ ಇದರ ಸಂಪೂರ್ಣ ಪ್ರಯೋಜನ ಪಡೆಯಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

2 /5

2. ಈ ಅಪರೂಪದ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೈಶಾಖ ಪೂರ್ಣಿಮಾ ಅಥವಾ ಬುದ್ಧ ಪೂರ್ಣಿಮೆಯ ದಿನದಂದು ಚಂದ್ರಗ್ರಹಣ ಸಂಭವಿಸಲಿದೆ. ಈ ದಿನ ರಾತ್ರಿ 8.45 ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಗ್ರಹಣ ಇರಲಿದೆ. ಈ ದಿನ ಸೂರ್ಯೋದಯದಿಂದ ಬೆಳಗ್ಗೆ 9.17ರವರೆಗೆ ಸಿದ್ಧಿ ಯೋಗವಿರುತ್ತದೆ. ಇದರೊಂದಿಗೆ ಈ ದಿನ ಸ್ವಾತಿ ನಕ್ಷತ್ರವೂ ಇರುತ್ತದೆ. ಶಾಸ್ತ್ರಗಳ ಪ್ರಕಾರ ಬುದ್ಧ ಪೂರ್ಣಿಮೆಯ ದಿನದಂದು 130 ವರ್ಷಗಳ ನಂತರ ಇಂತಹ ಯೋಗವು ರೂಪುಗೊಳ್ಳಲಿದೆ. ಸ್ವಾತಿ ನಕ್ಷತ್ರವು ಬೆಳಗ್ಗೆಯಿಂದ ರಾತ್ರಿ 9:40 ರವರೆಗೆ ಇರಲಿದೆ.

3 /5

3. ಮೇಷ ರಾಶಿ - ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಏಪ್ರಿಲ್ 14 ರಂದು, ಸಂಕ್ರಮಿಸುವ ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ ಮತ್ತು ಬುಧನೊಂದಿಗೆ ಆತನ ಮೈತ್ರಿ ನೆರವೇರಲಿದ್ದು, ಇದರಿಂದ ಮೇಷ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ, ಇದು ಈ ರಾಶಿಯ ಸ್ಥಳೀಯರಿಗೆ ತುಂಬಾ ಮಂಗಳಕರ ಮತ್ತು ಫಲಪ್ರದವಾಗಿದೆ. ಈ ಅವಧಿಯಲ್ಲಿ ವ್ಯಕ್ತಿಯು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾನೆ. ಉದ್ಯೋಗದಲ್ಲಿ ಬದಲಾವಣೆಯಾಗುವ ಎಲ್ಲಾ ಸಾಧ್ಯತೆಗಳಿವೆ.  

4 /5

4. ಕರ್ಕ ರಾಶಿ- ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಬುಧಾದಿತ್ಯ ರಾಜಯೋಗವು ಕರ್ಕ ರಾಶಿಯವರಿಗೆ ಭಾಗ್ಯವನ್ನೇ ಪ್ರಜ್ವಲಿಸಲಿದೆ. . ಈ ಸಮಯದಲ್ಲಿ ವ್ಯಕ್ತಿಯು ತನ್ನ ವೃತ್ತಿಜೀವನದಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಾನೆ. ಬಯಸಿದ ಸ್ಥಳದಲ್ಲಿ ವರ್ಗಾವಣೆ ಲಭ್ಯವಾಗುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯುತ್ತಾನೆ. ಅಷ್ಟೇ ಅಲ್ಲ ಈ ರಾಶಿಯವರಿಗೆ ಅದೃಷ್ಟದ ಭಾರಿ ಬೆಂಬಲ ಕೂಡಿಬರಲಿದೆ.

5 /5

5. ಸಿಂಹ ರಾಶಿ- ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧಾದಿತ್ಯ ಯೋಗವು ಈ ಸಿಂಹ ರಾಶಿಯ ಜಾತಕದವರ ಪಾಲಿಗೆ ತುಂಬಾ ಅನುಕೂಲಕರ ಫಲಿತಾಂಶಗಳನ್ನು ತರಲಿದೆ. ವೃತ್ತಿಯಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಈ ಅವಧಿಯಲ್ಲಿ ಸ್ಥಗಿತಗೊಂಡಿರುವ ಕಾಮಗಾರಿ ಪೂರ್ಣಗೊಳ್ಳಲಿದೆ. ಸೂರ್ಯನ ಸಂಚಾರವು ಈ ರಾಶಿಯ ಸ್ಥಳೀಯರ ಜೀವನದಲ್ಲಿ ಅನೇಕ ಸಂತೋಷವನ್ನು ತರಲಿದೆ. ಬಡ್ತಿಯ ಅವಕಾಶಗಳು ದೊರೆಯಲಿವೆ. ಸಂಬಳದಲ್ಲಿ ಹೆಚ್ಚಳ ಹಾಗೂ ಐಷಾರಾಮಿ ಕೆಲಸ ಕಾರ್ಯಗಳಿಗೆ ಹಣ ವ್ಯಯವಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ )