ಬೇಸಿಗೆಯಲ್ಲಿ, ದೇಶ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರು ಉತ್ತರಾಖಂಡ ಮತ್ತು ಹಿಮಾಚಲದಂತಹ ಗುಡ್ಡಗಾಡು ರಾಜ್ಯಗಳ ಕಡೆಗೆ ಬರುತ್ತಾರೆ.
ನವದೆಹಲಿ: ಬೇಸಿಗೆಯಲ್ಲೂ ಚಳಿ ಇರುವಂತಹ ಕೆಲವು ಸ್ಥಳಗಳಿವೆ. ಈ ಕಾರಣದಿಂದಲೇ ಈ ಗಿರಿಧಾಮಗಳು ಪ್ರವಾಸಿಗರ ನೆಚ್ಚಿನ ತಾಣಗಳ ಪಟ್ಟಿಯಲ್ಲಿ ಸೇರಿವೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ, ಜನರು ತಂಪಾದ ಸ್ಥಳಗಳಿಗೆ ಹೋಗಲು ಇಷ್ಟ ಪಡುತ್ತಾರೆ. ಬೇಸಿಗೆಯಲ್ಲಿ, ದೇಶ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರು ಉತ್ತರಾಖಂಡ ಮತ್ತು ಹಿಮಾಚಲದಂತಹ ಗುಡ್ಡಗಾಡು ರಾಜ್ಯಗಳ ಕಡೆಗೆ ಬರುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್ ಭಾರತದ ಅತ್ಯಂತ ಅದ್ಭುತವಾದ ಪ್ಯಾರಾಗ್ಲೈಡಿಂಗ್ ತಾಣಗಳಲ್ಲಿ ಒಂದಾಗಿದೆ. ನೀವು ಸಾಹಸವನ್ನು ಇಷ್ಟಪಡುವವರಾಗಿದ್ದರೆ ಖಂಡಿತವಾಗಿಯೂ ಒಮ್ಮೆ ಬಿರ್ ಬಿಲ್ಲಿಂಗ್‌ಗೆ ಭೇಟಿ ನೀಡಿ.
ಹಿಮಾಚಲ ಪ್ರದೇಶ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಅಲ್ಲಿಗೆ ಪ್ರವಾಸಿಗರು ಹೆಸಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಿಮಾಚಲ ಪ್ರದೇಶವು ಚಳಿಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಪ್ರವಾಸಿಗರಿಂದ ತುಂಬಿರುತ್ತದೆ. ಬೇಸಿಗೆಯಲ್ಲಿ ಇಲ್ಲಿನ ಹವಾಮಾನವು ತುಂಬಾ ಚೆನ್ನಾಗಿರುತ್ತದೆ.
ಧನೌಲ್ಟಿ ಕೂಡ ಒಂದು ಪ್ರಸಿದ್ಧ ಗಿರಿಧಾಮವಾಗಿದೆ. ಈ ಸ್ಥಳದ ಸೌಂದರ್ಯವು ಮನಸ್ಸಿಗೆ ಮುದ ನೀಡುತ್ತದೆ. ಕ್ಯಾಂಪಿಂಗ್ ಮತ್ತು ಇತರ ಸಾಹಸ ಚಟುವಟಿಕೆಗಳಿಗೆ ಧನೌಲ್ಟಿ ಉತ್ತಮ ಸ್ಥಳವಾಗಿದೆ. ಇಲ್ಲಿ ನೀವು ಸುರ್ಕಂದ ದೇವಿ ದೇವಸ್ಥಾನ, ದಶಾವತಾರ ದೇವಸ್ಥಾನ ಮತ್ತು ದಿಯೋಗರ್ ಕೋಟೆಯಂತಹ ಸ್ಥಳಗಳಿಗೆ ಭೇಟಿ ನೀಡಬಹುದು.
ಗುಲ್ಮಾರ್ಗ್ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಅದರ ಸೌಂದರ್ಯದಿಂದಾಗಿ, ಇದನ್ನು ಭೂಮಿಯ ಮೇಲಿನ ಸ್ವರ್ಗ ಎಂದೂ ಕರೆಯುತ್ತಾರೆ. ಮೊಘಲ್ ಚಕ್ರವರ್ತಿ ಜಹಾಂಗೀರ್ ತನ್ನ ರಜಾದಿನಗಳನ್ನು ಕಳೆಯಲು ಗುಲ್ಮಾರ್ಗ್ಗೆ ಆಗಾಗ್ಗೆ ಬರುತ್ತಿದ್ದ ಎನ್ನಲಾಗಿದೆ.
ದೆಹಲಿಯಿಂದ ಕೇವಲ 5 ರಿಂದ 6 ಗಂಟೆಗಳ ಪ್ರಯಾಣದಲ್ಲಿ ನೈನಿತಾಲ್ ತಲುಪಬಹುದು. ಇದು ಉತ್ತರಾಖಂಡದ ಸುಂದರವಾದ ಗಿರಿಧಾಮವಾಗಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.