Actresses Abused By Partners: ಸಂಗಾತಿಯಿಂದ ದಾರುಣವಾಗಿ ಹಲ್ಲೆಗೊಳಗಾಗಿದ್ದ ಬಾಲಿವುಡ್ ನ ಈ ಸ್ಟಾರ್ ನಟಿಯರು

Actresses Abused By Partners: ಬಾಲಿವುಡ್ ಜಗತ್ತಿನಲ್ಲಿ ಅದೆಷ್ಟೋ ಪ್ರೇಮ ಪುರಾಣಗಳನ್ನು ಕಾಣಿಸಿಕೊಳ್ಳುತ್ತಿರುತ್ತವೆ. ಅದರಲ್ಲಿ ಕೆಲವೊಂದಿಷ್ಟು ಉತ್ತಮವಾಗಿ ಮುಂದುವರೆದರೆ, ಇನ್ನೂ ಕೆಲವು ಜೋಡಿಗಳು ಕಿತ್ತಾಡಿಕೊಂಡು ದೂರವಾಗಿದ್ದಾರೆ. ಕೆಲವೊಮ್ಮೆ ಈ ನಟಿಯರಿಗೆ ಸಂಗಾತಿ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರು ನೀಡಿ ದೂರವಾಗಿದ್ದೂ ಉಂಟು. ಅಂತಹ ಕೌಟುಂಬಿಕ ಹಿಂಸೆಗೆ ತುತ್ತಾದ ಕೆಲವು ನಟಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ.

1 /5

ಬಾಲಿವುಡ್ ನಟಿ ಕರಿಷ್ಮಾ, ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಆದರೆ ಈ ಮದುವೆಯು 13 ವರ್ಷಗಳಲ್ಲಿ ಮುರಿದುಬಿತ್ತು. ಸಂಜಯ್ ತನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಿದ್ದರು. ಆತನ ತಾಯಿ ಕೂಡ ತನಗೆ ಹಿಂಸೆ ನೀಡುತ್ತಿದ್ದರು ಎಂದು ಕರಿಷ್ಮಾ ಆರೋಪಿಸಿದ್ದರು.

2 /5

ಏಕ್ ದುಜೆ ಲಿಯೆ ಖ್ಯಾತಿಯ ರತಿ ಅನಿಲ್ ವಿರ್ಮಾನಿಯನ್ನು ವಿವಾಹವಾದರು. ಆದರೆ ವರ್ಷಗಳ ನಂತರ ಇಬ್ಬರೂ ವಿಚ್ಛೇದನ ಪಡೆದರು. ಅನಿಲ್ ತನ್ನನ್ನು ಥಳಿಸುತ್ತಿದ್ದ. ದಿನನಿತ್ಯದ ನಿಂದನೆ ಮತ್ತು ಹೊಡೆತಗಳಿಂದ ಬೇಸತ್ತು ಹೋಗಿದ್ದೇನೆ ಎಂದು ರತಿ ಸ್ವತಃ ಹೇಳಿಕೆ ನೀಡಿದ್ದರು.

3 /5

ಸಲ್ಮಾನ್ ಖಾನ್ ಜೊತೆ ಐಶ್ವರ್ಯಾ ರೈ ರಿಲೇಶನ್ ಶಿಪ್ ನಲ್ಲಿದ್ದಾಗ ಅವರೂ ಹಲ್ಲೆ ಮತ್ತು ಕಿರುಕುಳಕ್ಕೆ ತುತ್ತಾಗಿದ್ದರಂತೆ. ಮಾಧ್ಯಮ ವರದಿಗಳ ಪ್ರಕಾರ, ಐಶ್ವರ್ಯಾ ಚಲ್ತೇ ಚಲ್ತೆ ಸಿನಿಮಾದ ಚಿತ್ರೀಕರಣದಲ್ಲಿದ್ದಾಗ, ಸಲ್ಮಾನ್ ಸೆಟ್‌ನಲ್ಲಿ ಗದ್ದಲವನ್ನು ಸೃಷ್ಟಿಸಿದ್ದರು. ಸಲ್ಮಾನ್‌ನ ಪೊಸೆಸಿವ್ ನಡವಳಿಕೆಯಿಂದ ಬೇಸತ್ತ ಐಶ್ವರ್ಯಾ ಸಲ್ಮಾನ್‌ನಿಂದ ಬೇರ್ಪಟ್ಟಿದ್ದರು. ಇದಾದ ನಂತರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಐಶ್ವರ್ಯಾ, ಸಲ್ಮಾನ್ ಅಕ್ರಮ ಸಂಬಂಧ ಹೊಂದಿದ್ದಾರೆ. ಮದ್ಯ ಸೇವಿಸಿದ ಬಳಿಕ ಸಲ್ಮಾನ್ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಹೇಳಿದ್ದರು.

4 /5

ರಾಹುಲ್ ಮಹಾಜನ್ ಅವರು ರಾಹುಲ್ ಕಾ ಸ್ವಯಂವರ್ ಎಂಬ ರಿಯಾಲಿಟಿ ಶೋನಲ್ಲಿ ಡಿಂಪಿ ಗಂಗೂಲಿ ಅವರನ್ನು ವಿವಾಹವಾದರು. ಮದುವೆಯ ನಂತರ ಇಬ್ಬರ ನಡುವೆ ಜಗಳ ಹೆಚ್ಚಾಗತೊಡಗಿತು. ಅಷ್ಟೇ ಅಲ್ಲದೆ, ಡಿಂಪಿ ರಾಹುಲ್ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿ ಹೊಡೆದ ಗಾಯಗಳೊಂದಿಗೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಇಬ್ಬರೂ ವಿಚ್ಛೇದನ ಪಡೆದರು.

5 /5

ಶ್ವೇತಾ ತಿವಾರಿ ಮೊದಲು ರಾಜಾ ಚೌಧರಿ ಎಂಬವರನ್ನು ವಿವಾಹವಾಗಿದ್ದರು. ಆದರೆ ರಾಜಾ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದ ಶ್ವೇತಾ, ಆತ ಕುಡಿದ ಮತ್ತಿನಲ್ಲಿ ತನಗೆ ಥಳಿಸುತ್ತಿದ್ದ ಎಂದು ಹೇಳಿದ್ದರು. ಅಷ್ಟೇ ಅಲ್ಲ ಇದರಿಂದ ನೊಂದಿದ್ದ ಶ್ವೇತಾ ರಾಜಾಗೆ ವಿಚ್ಛೇದನ ನೀಡಿ ಅಭಿನವ್ ಕೊಹ್ಲಿಯನ್ನು ಮರುಮದುವೆ ಮಾಡಿಕೊಂಡಿದ್ದರು. ಆದರೆ ಅಭಿನವ್ ಜೊತೆಗಿನ ಮದುವೆಯಾದ ಕೆಲವು ವರ್ಷಗಳ ನಂತರ, ಶ್ವೇತಾ ಕೂಡ ಆತನ ಮೇಲೆ ಹಲ್ಲೆ ಮತ್ತು ಕೌಟುಂಬಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದರು. ಇದೀಗ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.