ಈ ಸೆಲೆಬ್ರಿಟಿಗಳು ತಮ್ಮ ಪತ್ನಿಯರ ಆಯುಷ್ಯ ವೃದ್ದಿಗಾಗಿ ವೃತ ಆಚರಿಸುತ್ತಾರೆಯಂತೆ .!

ಕೆಲವು ಗಂಡಂದಿರು ಕೂಡಾ ತಮ್ಮ  ಪತ್ನಿಯರಿಗಾಗಿ ಕರ್ವಾ ಚೌತ್ ಉಪವಾಸವನ್ನುಆಚರಿಸುತ್ತಾರೆ.  ಅಂದರೆ  ತಮ್ಮ  ಪತ್ನಿಯರೊಂದಿಗೆ ಅನ್ನ ನೀರು ಬಿಟ್ಟು ವೃತ ಕೈಗೊಳ್ಳುತ್ತಾರೆ.

ಬೆಂಗಳೂರು : ಉತ್ತರಭಾರತದಲ್ಲಿ ಕರ್ವಾ ಚೌತ್ ಹಬ್ಬಕ್ಕೆ ಭಾರೀ ಮನ್ನಣೆ ಇದೆ. ಈ ದಿನದಂದು ಸಾಮಾನ್ಯವಾಗಿ ಮಹಿಳೆಯರು ತಮ್ಮ ಗಂಡಂದಿರ ಆಯುಷ್ಯ ವೃದ್ದಿಗಾಗಿ ಉಪವಾಸ ವೃತವನ್ನು ಆಚರಿಸುತ್ತಾರೆ.  ಬದಲಾಗಿ ಗಂಡಂದಿರು ಕೂಡ ತಮ್ಮ ಹೆಂಡತಿಯನ್ನು ಸಂತೋಷವಾಗಿಡುವ ಬಗ್ಗೆ ಮತ್ತು ಸದಾ ಬೆಂಬಲ ನೀಡುವ ಭರವಸೆ ನೀಡುತ್ತಾರೆ. ಕೆಲವು ಗಂಡಂದಿರು ಕೂಡಾ ತಮ್ಮ  ಪತ್ನಿಯರಿಗಾಗಿ ಕರ್ವಾ ಚೌತ್ ಉಪವಾಸವನ್ನುಆಚರಿಸುತ್ತಾರೆ.  ಅಂದರೆ  ತಮ್ಮ  ಪತ್ನಿಯರೊಂದಿಗೆ ಅನ್ನ ನೀರು ಬಿಟ್ಟು ವೃತ ಕೈಗೊಳ್ಳುತ್ತಾರೆ. ಇನ್ನು ಕೆಲವು ಸೆಲೆಬ್ರಿಟಿಗಳು ಕೂಡಾ ತಮ್ಮ ಪತ್ನಿಯರಿಗಾಗಿ, ವೃತ ಆಚರಿಸುತ್ತಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ 2007 ರಲ್ಲಿ ವಿವಾಹವಾಗಿದ್ದಾರೆ. ಅವರು ಮದುವೆಯಾದ ವರ್ಷದಿಂದ ಪ್ರತಿ ವರ್ಷ ಅಭಿಷೇಕ್ ಬಚ್ಚನ್ ಕೂಡಾ ಐಶ್ವರ್ಯ ಜೊತೆ ವೃತ ಆಚರಿಸುತ್ತಾರೆ. 

2 /5

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ 2017 ರಲ್ಲಿ ಸಪ್ತಪದಿ ತುಳಿದಿದ್ದಾರೆ. ಆ ವರ್ಷದಿಂದ ಪ್ರತಿ ವರ್ಷ ಒಟ್ಟಿಗೆ ಕರ್ವಾ ಚೌತ್ ಆಚರಿಸುತ್ತಿದ್ದಾರೆ. 

3 /5

ಬಾಲಿವುಡ್ ಸ್ಟಾರ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೂಡ ಕಳೆದ 4 ವರ್ಷಗಳಿಂದ ಪ್ರತಿ ವರ್ಷ ಕರ್ವಾ ಚೌತ್ ಅನ್ನು ಒಟ್ಟಿಗೆ ಆಚರಿಸುತ್ತಿದ್ದಾರೆ. 2018 ರಲ್ಲಿ ದೀಪಿಕಾ ಅವರನ್ನು ಮದುವೆಯಾದಾಗಿನಿಂದ,  ಇಬ್ಬರೂ ವೃತ ಆಚರಿಸಿಕೊಂಡು ಬಂದಿದ್ದಾರೆ. 

4 /5

 ನಟ ಆಯುಷ್ಮಾನ್ ಖುರಾನಾ ಕಳೆದ 6 ವರ್ಷಗಳಿಂದ ಕರ್ವಾ ಚೌತ್ ಉಪವಾಸವನ್ನು  ತಮ್ಮ ಪತ್ನಿ ತಾಹಿರಾಗಾಗಿ ಆಚರಿಸುತ್ತಿದ್ದಾರೆ.

5 /5

2009 ರಲ್ಲಿ ರಾಜ್ ಕುಂದ್ರಾ ಜೊತೆ ಮದುವೆಯಾದ ನಂತರ ಶಿಲ್ಪಾ ಪ್ರತಿ ವರ್ಷ ಕರ್ವಾ ಚೌತ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಕೆಲವು ಸಮಯದ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದರು. ಅದರಲ್ಲಿ ರಾಜ್ ಕುಂದ್ರಾ ಮದುವೆಯಾದಾಗಿನಿಂದ ಕರ್ವಾ ಚೌತ್  ಆಚರಿಸಿಕೊಂಡು ಬಂದಿರುವುದಾಗಿ ಹೇಳಿದ್ದಾರೆ.