ಮಲಬದ್ದತೆಯಿಂದ ತಕ್ಷಣ ಪರಿಹಾರ ನೀಡುತ್ತದೆ ಈ ನಾಲ್ಕು ವಸ್ತುಗಳು

ಬೇಕಾ ಬಿಟ್ಟಿ ತಿನ್ನುವುದು,  ಫೈಬರ್ ಆಧಾರಿತ ಆಹಾರಗಳನ್ನು ಸೇರಿಸದಿದ್ದರೆ, ಮಲಬದ್ಧತೆ ಸಂಭವಿಸುತ್ತದೆ.  ಕೆಲವು ಆಹಾರಗಳನು ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. 

Constipation Relief Tips: ಪ್ರಸ್ತುತ ಯುಗದಲ್ಲಿ ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಮಯಕ್ಕೆ ಸರಿಯಾಗಿ ಊಟ ಮಾಡದಿರುವ ಅಭ್ಯಾಸ ಮತ್ತು ಎಣ್ಣೆಯುಕ್ತ ಆಹಾರ ಸೇವನೆಯಿಂದ ಉದರದ ಸಮಸ್ಯೆ ಹೆಚ್ಚಾಗುತ್ತಿದೆ. ಬೇಕಾ ಬಿಟ್ಟಿ ತಿನ್ನುವುದು,  ಫೈಬರ್ ಆಧಾರಿತ ಆಹಾರಗಳನ್ನು ಸೇರಿಸದಿದ್ದರೆ, ಮಲಬದ್ಧತೆ ಸಂಭವಿಸುತ್ತದೆ.  ಕೆಲವು ಆಹಾರಗಳನು ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

 ಗೋಧಿ ಕಡಿ : ಇದು ಫೈಬರ್‌ನ ಸಮೃದ್ಧ ಮೂಲವಾಗಿದೆ. ಇದರಲ್ಲಿ ಅನೇಕ ಪ್ರಮುಖ ವಿಟಮಿನ್‌ಗಳು ಕಂಡುಬರುತ್ತವೆ. ಇದರ ಸಹಾಯದಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆಯು ಹಗುರವಾಗಿರುತ್ತದೆ ಮತ್ತು ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.  

2 /4

ನೀರು: ಮಲಬದ್ಧತೆ ಸಮಸ್ಯೆ ಬಾರದಂತೆ ತಡೆಯಬೇಕಾದರೆ ನಿಯಮಿತವಾಗಿ ನೀರನ್ನು ಕುಡಿಯುವುದು ಅವಶ್ಯಕ. ನಿರ್ಜಲೀಕರಣವು ಮಲಬದ್ಧತೆಗೆ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ.   

3 /4

ಅಂಜೂರ : ಮಲಬದ್ದತೆಯ ಸಮಸ್ಯೆಗೆ ಇದನ್ನು ಮಾಂತ್ರಿಕ ಹಣ್ಣು ಎಂದು ಕರೆದರೆ  ತಪ್ಪಾಗುವುದಿಲ್ಲ, ಏಕೆಂದರೆ ಇದು ಮಲಬದ್ಧತೆಯಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಅಂಜೂರದ ಹಣ್ಣುಗಳನ್ನು ಬಿಸಿ ನೀರಿನಲ್ಲಿ ನೆನೆಸಿ ನಂತರ ತಿನ್ನಬೇಕು. ಇದು ಬಹಳಷ್ಟು ಫೈಬರ್ ಅನ್ನು ಹೊಂದಿರುವುದರಿಂದ, ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

4 /4

ಹಾಲು ಮತ್ತು ತುಪ್ಪ: ಹಾಲು ಮತ್ತು ತುಪ್ಪದ ಸಹಾಯದಿಂದ ಮಲಬದ್ಧತೆಯನ್ನು ಹೋಗಲಾಡಿಸಬಹುದು. ಒಂದು ಲೋಟ ಬಿಸಿ ಹಾಲಿಗೆ 2 ಚಮಚ ತುಪ್ಪ ಹಾಕಿ ರಾತ್ರಿ ಮಲಗುವಾಗ ಕುಡಿದರೆ ಮಲಬದ್ದತೆ ಸಮಸ್ಯೆ ನಿವಾರಣೆಯಾಗುತ್ತದೆ.  (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)