Changes From 1st August: ನಾಳೆಯಿಂದ ಬದಲಾಗಲಿವೆ ಈ 5 ನಿಯಮಗಳು, ನೀವೂ ತಿಳಿದುಕೊಳ್ಳಿ

Changes From 1st August: ಇನ್ನೇನು ಕೆಲವೇ ಗಂಟೆಗಳಲ್ಲಿ ಆಗಸ್ಟ್ 1 ರಿಂದ ಹೊಸ ತಿಂಗಳು ಆರಂಭಗೊಳ್ಳಲಿದೆ. ಪ್ರತಿ ತಿಂಗಳಿನಂತೆ ಆಗಸ್ಟ್ ತಿಂಗಳಿನಲ್ಲಿಯೂ ಕೂಡ ಕೆಲ ಮಹತ್ವದ ಬದಲಾವಣೆಗಳು ಸಂಭವಿಸಲಿವೆ. 

Changes From 1st August: ಇನ್ನೇನು ಕೆಲವೇ ಗಂಟೆಗಳಲ್ಲಿ ಆಗಸ್ಟ್ 1 ರಿಂದ ಹೊಸ ತಿಂಗಳು ಆರಂಭಗೊಳ್ಳಲಿದೆ. ಪ್ರತಿ ತಿಂಗಳಿನಂತೆ ಆಗಸ್ಟ್ ತಿಂಗಳಿನಲ್ಲಿಯೂ ಕೂಡ ಕೆಲ ಮಹತ್ವದ ಬದಲಾವಣೆಗಳು ಸಂಭವಿಸಲಿವೆ. ಇವುಗಳಲ್ಲಿ ಬ್ಯಾಂಕಿಂಗ್ ಸಿಸ್ಟಂ, ಎಲ್ಪಿಜಿ ಬೆಲೆ ಪರಿಷ್ಕರಣೆ, ಐಟಿಆರ್ ರಿಟರ್ನ್ಗೆ ಸಂಬಂಧಿಸಿದ ಅಪ್ಡೇಟ್ ಗಳು ಶಾಮೀಲಾಗಿವೆ. ಈ ನಿಯಮಗಳಲ್ಲಿ ಆಗುವ ಬದಲಾವಣೆಯಿಂದ ನಮ್ಮ ಜೇಬಿನ ಮೇಲೆ ನೇರ ಪ್ರಭಾವ ಉಂಟಾಗಲಿದೆ.

 

ಇದನ್ನೂ ಓದಿ-Positive Pay System : ನಾಳೆಯಿಂದ ಬದಲಾಗಲಿವೆ ಈ ಸರ್ಕಾರಿ ಬ್ಯಾಂಕ್‌ ವಹಿವಾಟ ನಿಯಮಗಳು!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

1. ಜುಲೈ 31 ರೊಳಗೆ ನಿಮ್ಮ ರಿಟರ್ನ್ ಅನ್ನು ನೀವು ಸಲ್ಲಿಸದಿದ್ದರೆ, ಆಗಸ್ಟ್ 1 ರಿಂದ, ನೀವು ದಂಡದೊಂದಿಗೆ ITR ಅನ್ನು ಸಲ್ಲಿಸಬೇಕಾಗಲಿದೆ. ಆದಾಯ ತೆರಿಗೆ ಪಾವತಿದಾರರ ತೆರಿಗೆಗೆ ಒಳಪಡುವ ಆದಾಯವು 5 ಲಕ್ಷ ರೂ.ಗಿಂತ ಕಡಿಮೆಯಿದ್ದರೆ, ನಂತರ ಅವರು 1,000 ರೂಪಾಯಿಗಳ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದೆ ವೇಳೆ, ತೆರಿಗೆಗೆ ಒಳಪಡುವ ಆದಾಯವು 5 ಲಕ್ಷಕ್ಕಿಂತ ಹೆಚ್ಚಿದ್ದರೆ, ಅವರು 5 ಸಾವಿರ ರೂಪಾಯಿಗಳ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

2 /6

2. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ ಕಿಸಾನ್) ಇ-ಕೆವೈಸಿ ಸಲ್ಲಿಸಲು ಕೊನೆಯ ದಿನಾಂಕವು ಜುಲೈ 31 ರವರೆಗೆ ಮಾತ್ರ ಇದೆ. ಆಗಸ್ಟ್ 1 ರಿಂದ ರೈತರು ಕೆವೈಸಿ ಮಾಡಲು ಸಾಧ್ಯವಿಲ್ಲ. ನೀವು 31 ರೊಳಗೆ ಇ-ಕೆವೈಸಿ ಮಾಡದಿದ್ದರೆ 12 ನೇ ಕಂತಿನ ಹಣವನ್ನು ನಿಮ್ಮ ಖಾತೆಗೆ ಬರುವುದಿಲ್ಲ. ಇದಕ್ಕಾಗಿ, ನೀವು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡುವ ಮೂಲಕ ekyc ಅನ್ನು ಸಹ ಮಾಡಿಸಬಹುದಾಗಿದೆ.

3 /6

3. ನಿಮ್ಮ ಖಾತೆಯು ಬ್ಯಾಂಕ್ ಆಫ್ ಬರೋಡಾ (BOB) ನಲ್ಲಿದ್ದರೆ, ಆಗಸ್ಟ್ 1 ರಿಂದ ಚೆಕ್ ಮೂಲಕ ಪಾವತಿಯ ನಿಯಮಗಳು ಬದಲಾಗಲಿವೆ. ಹೌದು ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗಾಗಿ ಆಗಸ್ಟ್ 1 ರಿಂದ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳಿಗೆ ಧನಾತ್ಮಕ ಪಾವತಿ ವ್ಯವಸ್ಥೆ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ, ಬ್ಯಾಂಕ್ ಗೆ ಗ್ರಾಹಕರು ಎಸ್‌ಎಂಎಸ್, ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಚೆಕ್‌ಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಬೇಕಾಗಲಿದೆ.

4 /6

4. ಪ್ರತಿ ತಿಂಗಳ ಮೊದಲನೆಯ ದಿನಾಂಕದಂತೆ ಈ ಬಾರಿಯೂ ಆಗಸ್ಟ್ 1 ರಿಂದ ಗ್ಯಾಸ್ ಸಿಲಿಂಡರ್ ದರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಈ ಬಾರಿ ಕಂಪನಿಗಳು ಗೃಹೋಪಯೋಗಿ ಮತ್ತು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಬದಲಾಯಿಸಬಹುದು. ಈ ಬಾರಿ ಒಂದು ಸಿಲಿಂಡರ್ ದರ 20ರಿಂದ 30 ರೂ.ಗಳಷ್ಟು ಬದಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ. ಕಳೆದ ಬಾರಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗಿದ್ದು, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲಾಗಿದೆ.

5 /6

5. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ (PMFBY) ಪ್ರಯೋಜನವನ್ನು ಪಡೆಯಲು, ನೀವು ಯೋಜನೆಯಲ್ಲಿ ನಿಮ್ಮ ಬೆಳೆಯ ವಿಮೆ ಮಾಡಿಸಬೇಕಾಗಲಿದೆ. ಅದರ ನೋಂದಣಿಗೆ ಕೊನೆಯ ದಿನಾಂಕ ಜುಲೈ 31 ಆಗಿದೆ. ಇದರ ನಂತರ ಯಾರೂ ನೋಂದಣಿ ಮಾಡುವ ಹಾಕಿಲ್ಲ ಮತ್ತು ನೀವು ಯೋಜನೆಯಿಂದ ವಂಚಿತರಾಗಬಹುದು. ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

6 /6

6. ಈ ಬಾರಿ ಆಗಸ್ಟ್‌ನಲ್ಲಿ ಮೊಹರಂ, ರಕ್ಷಾ ಬಂಧನ, ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿಯಂತಹ ಅನೇಕ ಹಬ್ಬಗಳು ಬರಲಿವೆ. ಈ ಕಾರಣದಿಂದಈ ಬಾರಿ ವಿವಿಧ ರಾಜ್ಯಗಳು ಸೇರಿದಂತೆ ಒಟ್ಟು 18 ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಪಟ್ಟಿಯಲ್ಲಿ ಆಗಸ್ಟ್‌ನಲ್ಲಿ ಹಲವಾರು ದಿನಗಳವರೆಗೆ ಬ್ಯಾಂಕುಗಳು ಬಂದ್ ಇರಲಿವೆ ಎಂದು ಪ್ರಕಟಿಸಿದೆ. ಈ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಒಟ್ಟು ನಾಲ್ಕು ಭಾನುವಾರಗಳಂದು 18 ದಿನಗಳ ಕಾಲ ಬ್ಯಾಂಕ್‌ಗಳು ಬಂದ ಇರಲಿವೆ