Spiritual News: ಶನಿಯ ಕ್ರೋಧಕ್ಕೆ ಗುರಿಯಾಗುವ ವ್ಯಕ್ತಿ ತನ್ನ ಜೀವನದುದ್ದಕ್ಕೂ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ, ಶನಿಯ ದೃಷ್ಟಿ ಕೆಟ್ಟ ದೃಷ್ಟಿ ಎಂದು ಪರಿಗಣಿಸಲಾಗಿದೆ.
Spiritual News: ಶನಿಯ ಕ್ರೋಧಕ್ಕೆ ಗುರಿಯಾಗುವ ವ್ಯಕ್ತಿ ತನ್ನ ಜೀವನದುದ್ದಕ್ಕೂ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ, ಶನಿಯ ದೃಷ್ಟಿ ಕೆಟ್ಟ ದೃಷ್ಟಿ ಎಂದು ಪರಿಗಣಿಸಲಾಗಿದೆ. ಆದರೂ ಕೂಡ ಶನಿ ಮಹಾರಾಜ ಕೆಲ ದೇವ-ದೇವತೆಗಳಿಗೆ ಹೆದರುತ್ತಾರೆ ಎಂದೂ ಕೂಡ ಹೇಳಲಾಗುತ್ತದೆ ಮತ್ತು ಅವರ ಭಕ್ತರನ್ನು ಶನಿ ಎಂದಿಗೂ ಸತಾಯಿಸುವುದಿಲ್ಲ. ಯಾವ ದೇವ-ದೇವತೆಗಳನ್ನು ಪೂಜಿಸುವ ಮೂಲಕ ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಬಹುದು ತಿಳಿದುಕೊಳ್ಳೋಣ ಬನ್ನಿ,
ಇದನ್ನೂ ಓದಿ-Behavioural Tips: ನಿಮ್ಮ ಈ ರೀತಿಯ ವರ್ತನೆ ಇಡೀ ನಿಮ್ಮ ಜೀವನವನ್ನೇ ಹಾಳು ಮಾಡುತ್ತದೆ ನೆನಪಿರಲಿ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1. ದೇವಾಧಿದೇವ ಮಹಾದೇವನನ್ನು ಶನಿಯ ಗುರು ಎಂದು ಭಾವಿಸಲಾಗುತ್ತದೆ. ತನ್ನ ಭಕ್ತಾದಿಗಳ ಮೇಲೆ ಕುದೃಷ್ಟಿ ಬೀರಬಾರದು ಎಂದು ಮಹಾದೇವ ಶನಿಗೆ ವಿನಂತಿಸಿದ್ದರು ಎಂದು ಪೌರಾಣಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಶಿವನ ಕೃಪೆಗೆ ಪಾತ್ರರಾದವರ ಮೇಲೆ ಶನಿ ತನ್ನ ಕೆಟ್ಟ ದೃಷ್ಟಿ ಬೀರುವುದಿಲ್ಲ ಎನ್ನಲಾಗುತ್ತದೆ.
2. ಶ್ರೀಕೃಷ್ಣನನ್ನು ಶನಿಯ ಇಷ್ಟದ ದೇವರು ಎಂದು ಪರಿಗಣಿಸಲಾಗುತ್ತದೆ. ಶ್ರೀಕೃಷ್ಣನ ದರ್ಶನ ಪಡೆಯಲು ಶನಿಯು ಕೋಕಿಲ ವನದಲ್ಲಿ ತಪಸ್ಸು ಮಾಡಿದನೆಂಬ ಪ್ರತೀತಿ ಇದೆ. ಇದಾದ ಬಳಿಕ ಶ್ರೀಕೃಷ್ಣನು ಕೋಕಿಲ ವನದಲ್ಲಿ ಕೋಗಿಲೆಯ ರೂಪದಲ್ಲಿ ಶನಿದೇವನಿಗೆ ದರ್ಶನ ನೀಡಿದ ಎಂಬುದು ಪುರಾಣಗಳಲ್ಲಿ ಉಲ್ಲೇಖಿತವಾಗಿದೆ.
3. ಶನಿದೇವ ಶ್ರೀಆಂಜನೇಯನಿಗೆ ಯಾವಾಗಲೂ ಹೆದರುತ್ತಾನೆ, ಹೀಗಾಗಿ ಹನುಮನನ್ನು ಪೂಜಿಸುವ ಎಲ್ಲಾ ಭಕ್ತರ ದೋಷಗಳು ಪರಿಹಾರವಾಗುತ್ತವೆ ಮತ್ತು ಶನಿ ಮಹಾರಾಜ ಹನುಮಂತನ ಭಕ್ತರಿಗೆ ಎಂದಿಗೂ ತೊಂದರೆ ಕೊಡುವುದಿಲ್ಲ ಎನ್ನಲಾಗುತ್ತದೆ.
4. ಶನಿ, ಸೂರ್ಯ ಹಾಗೂ ಆತನ ಎರಡನೇ ಪತ್ನಿಯಾದ ಛಾಯಾಳ ಸುಪುತ್ರನಾಗಿದ್ದಾನೆ. ಪೌರಾಣಿಕ ನಂಬಿಕೆಗಳ ಪ್ರಕಾರ ಸೂರ್ಯ ತನ್ನ ಪುತ್ರದಾದ ಶನಿಗೆ ಶಾಪ ಕೊಟ್ಟು ಆತನ ಮನೆಯನ್ನು ಸುಟ್ಟುಹಾಕಿದ್ದ ಎನ್ನಲಾಗುತ್ತದೆ. ಇದಾದ ಬಳಿಕ ಶನಿ ಎಳ್ಳು ಬಳಸಿ ಸೂರ್ಯನನ್ನು ಪೂಜಿಸಿ ಆತನನ್ನು ಪ್ರಸನ್ನಗೊಳಿಸಿದ ಎನ್ನಲಾಗುತ್ತದೆ. ಹೀಗಾಗಿ ಸೂರ್ಯನ ಭಕ್ತರಿಗೆ ಶನಿ ಸತಾಯಿಸುವುದಿಲ್ಲ.
5. ಶನಿ ದೋಷವನ್ನು ತೊಡೆದು ಹಾಕಲು ಅಶ್ವತ್ಥ ಮರವನ್ನು ಪೂಜಿಸಬೇಕು ಮತ್ತು ಅದರ ಕೆಳಗೆ ದೀಪ ಬೆಳಗಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಪಿಲ್ಪದ ಮುನಿಯನ್ನು ಜಪಿಸುವ ಮತ್ತು ಅಶ್ವತ್ಥ ಮರವನ್ನು ಪೂಜಿಸುವ ಭಕ್ತರಿಗೆ ಶನಿ ಎಂದಿಗೂ ತೊಂದರೆ ನೀಡುವುದಿಲ್ಲ ಎಂಬುದು ಧಾರ್ಮಿಕ ನಂಬಿಕೆ. (ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)