ಮಕ್ಕಳಲ್ಲಿ ಹೃದ್ರೋಗದ ಸಂಕೇತಗಳಾಗಿರುತ್ತವೆ ಈ ಲಕ್ಷಣಗಳು

ಮಗುವು ಗರ್ಭದಲ್ಲಿರುವಾಗಲೇ ಮಾಡಿಸುವ ಅಲ್ಟ್ರಾಸೌಂಡ್ ಸಹಾಯದಿಂದ  ಹೆಚ್ಚಿನ ರೋಗಗಳನ್ನು ಪತ್ತೆಹಚ್ಚಲಾಗುತ್ತದೆ. ಜನನದ ನಂತರ, ಅದನ್ನು ಮತ್ತೊಮ್ಮೆ ಅಲ್ಟ್ರಾಸೌಂಡ್ ಮೂಲಕ ಅದನ್ನು ದೃಢೀಕರಿಸಲಾಗುತ್ತದೆ.

ಬೆಂಗಳೂರು : ಹೃದ್ರೋಗಗಳು ವಯಸ್ಕರಲ್ಲಿ ಮಾತ್ರ ಕಂಡುಬರುತ್ತವೆ ಮತ್ತು ಚಿಕ್ಕ ಮಕ್ಕಳಿಗೆ ಅಂಥಹ ಅಪಾಯ ಎದುರಾಗುವುದಿಲ್ಲ ಎಂದು ಕೊಂಡರೆ ಅದು ಸುಳ್ಳು. ಚಿಕ್ಕ ಮಕ್ಕಳನ್ನು ಕೂಡಾ ಹೃದಯದ ಸಮಸ್ಯೆ ಕಾಡುತ್ತವೆ.  ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆಗಳಿರುತ್ತವೆ. ಕೆಲವು ಮಕ್ಕಳ ಹೃದಯದಲ್ಲಿ ರಂಧ್ರ ಇರುತ್ತವೆ. ಅನೇಕ ಶಿಶುಗಳು ಹೃದಯ ವಿರೂಪಗಳೊಂದಿಗೆ ಜನಿಸುತ್ತವೆ. ಇದು ನಂತರ ಹೃದ್ರೋಗಕ್ಕೆ ಕಾರಣವಾಗುತ್ತದೆ. ಮಗುವು ಗರ್ಭದಲ್ಲಿರುವಾಗಲೇ ಮಾಡಿಸುವ ಅಲ್ಟ್ರಾಸೌಂಡ್ ಸಹಾಯದಿಂದ  ಹೆಚ್ಚಿನ ರೋಗಗಳನ್ನು ಪತ್ತೆಹಚ್ಚಲಾಗುತ್ತದೆ. ಜನನದ ನಂತರ, ಅದನ್ನು ಮತ್ತೊಮ್ಮೆ ಅಲ್ಟ್ರಾಸೌಂಡ್ ಮೂಲಕ ಅದನ್ನು ದೃಢೀಕರಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನಿಮ್ಮ ಮಗುವಿಗೆ ಆಗಾಗ್ಗೆ ಉಸಿರಾಟದ ತೊಂದರೆ ಕಾಣಿಸುತ್ತಿದ್ದರೆ, ಒಮ್ಮೆ ಪರೀಕ್ಷಿಸಬೇಕು.  ಉಸಿರಾಟದ ತೊಂದರೆ ಮತ್ತು ಎದೆ ನೋವು ಕೆಲವೊಮ್ಮೆ ಹೃದಯದ ಸಮಸ್ಯೆಯ ಸಂಕೇತವಾಗಿರುತ್ತದೆ

2 /5

ವಯಸ್ಕರಂತೆ, ಚಿಕ್ಕ ಮಕ್ಕಳ ಪಾದಗಳು ಊದಿ ಕೊಂಡಿದ್ದರೆ ಅದು ಸಾಮಾನ್ಯ ಲಕ್ಷಣವಲ್ಲ. ಅದು ಹೃದಯ ಸಮಸ್ಯೆಗಳ ಸಂಕೇತವಾಗಿರಬಹುದು. ಹೃದಯ ಮಾತ್ರವಲ್ಲ, ಮೂತ್ರಪಿಂಡ ಮತ್ತು ಇತರ ಅನೇಕ ರೋಗಗಳ ಸಂಕೇತವೂ ಆಗಿರಬಹುದು.  ಆದ್ದರಿಂದ ಹೀಗಾದಾಗ ವೈದ್ಯರನ್ನು ಸಾಧ್ಯವಾದಷ್ಟು ಬೇಗ ಸಂಪರ್ಕಿಸಬೇಕು.

3 /5

ಹೃದಯದಿಂದ ವಿಚಿತ್ರವಾದ ಶಬ್ದ ಕೇಳಿಸುತ್ತಿದ್ದರೆ ಅದನ್ನು ಮರ್ಮರ್ ಎಂದು ಕರೆಯಲಾಗುತ್ತದೆ ಮತ್ತು ಇದು ಹೃದಯ ಸಮಸ್ಯೆಗಳನ್ನು ಸೂಚಿಸುತ್ತದೆ. ಈ ಸಮಸ್ಯೆಯನ್ನು ಸಾಮಾನ್ಯವಾಗಿ ಸ್ಕೆತೊಸ್ಕೋಪ್ ಮೂಲಕ  ಮಾತ್ರ ಕಂಡುಹಿಡಿಯಲಾಗುತ್ತದೆ.  

4 /5

 ಮಗುವಿಗೆ ಹೃದಯ ಸಂಬಂಧಿ ಸಮಸ್ಯೆ ಇದೆ ಎಂದು ಅನುಮಾನವಿದ್ದರೆ,  ಮಗುವಿನ ಹೃದಯ ಬಡಿತವನ್ನು ಆಲಿಸಬಹುದು. ಹೃದಯ ಬಡಿತವು ತುಂಬಾ ಕಡಿಮೆಯಾಗಿದೆ ಎಂದು ಅನಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

5 /5

ಪೋಷಣೆಯ ಕೊರತೆ ಅಥವಾ ದೌರ್ಬಲ್ಯದಿಂದಾಗಿ ಮಕ್ಕಳಲ್ಲಿ ಆರಂಭಿಕ ಆಯಾಸದ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ. ಮಗುವು ಇದ್ದಕ್ಕಿದ್ದಂತೆ ದಣಿದಿದ್ದರೆ ಮತ್ತು ಮೇಲಿನ ರೋಗಲಕ್ಷಣಗಳನ್ನು ಸಹ ತೋರಿಸುತ್ತಿದ್ದರೆ, ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.