Eating Habits : ತಪ್ಪಿಯೂ ಈ ವಸ್ತುಗಳ ಸೇವನೆ ಬೇಡ, ಮೆದುಳಿನ ಮೇಲೆ ಬೀರುತ್ತದೆ ಕೆಟ್ಟ ಪರಿಣಾಮ

ಇದರಲ್ಲಿ ನೀವು ತಪ್ಪಿಸಬೇಕಾದ ಮೊದಲ ವಿಷಯವೆಂದರೆ ಪ್ಯಾಕ್ ಮಾಡಿದ ಆಹಾರ ಮತ್ತು ತಂಪು ಪಾನೀಯಗಳು. 

ನವದೆಹಲಿ : ಕೆಲವರಿಗೆ ಇದ್ದಕ್ಕಿದಂತೆ ಮರೆವಿನ ಸಮಸ್ಯೆ ಕಾಡಲು ಆರಂಭವಾಗುತ್ತದೆ. ಕೆಲವೊಮ್ಮೆ ಈ ಸಮಸ್ಯೆ ಬಹಳಷ್ಟು ಹೆಚ್ಚಾಗುತ್ತದೆ ಮರೆವಿನ ಈ ಸಮಸ್ಯೆ ಕೇವಲ ಹೆಚ್ಚುತ್ತಿರುವ ವಯಸ್ಸಿನ ಕಾರಣದಿಂದ ಬರುವುದಿಲ್ಲ. ಪೌಷ್ಟಿಕ ತಜ್ಞರ ಪ್ರಕಾರ, ನಾವು ತಿನ್ನುವ ಆಹಾರ ಕೂಡಾ ನೆನಪಿನ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ನೆನೆಪಿನ ಶಕ್ತಿಯನ್ನು ದುರ್ಬಲಗೊಳಿಸುವ ಅನೇಕ ಆಹಾರ ಮತ್ತು ಪಾನೀಯಗಳಿವೆ. ಅವುಗಳಿಂದ ದೂರವಿದ್ದಷ್ಟು ಈ ಸಮಸ್ಯೆಯಿಂದಲೂ ದೂರ ಉಳಿಯಬಹುದು.   
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಇದರಲ್ಲಿ ನೀವು ತಪ್ಪಿಸಬೇಕಾದ ಮೊದಲ ವಿಷಯವೆಂದರೆ ಪ್ಯಾಕ್ ಮಾಡಿದ ಆಹಾರ ಮತ್ತು ತಂಪು ಪಾನೀಯಗಳು. ತಜ್ಞರ ಪ್ರಕಾರ, ಕಾರ್ನ್  ಸಿರಪ್ ಮತ್ತು ಸಿಹಿ ಪಾನೀಯಗಳಲ್ಲಿರುವ ಹೆಚ್ಚಿನ ಪ್ರಮಾಣದ ಫ್ರಕ್ಟೋಸ್ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.  ಇದು ಬ್ರೈನ್ ಇನ್ ಫ್ಲಮೆಶನ್ ಗೆ ಕಾರಣವಾಗಬಹುದು.  ಅದು  ಸ್ಮರಣೆ ಶಕ್ತಿ, ಕಲಿಯುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಡಯಟ್ ಸೋಡಾದಲ್ಲಿಯೂ ಸ್ಮರಣ ಶಕ್ತಿಯ ಮೇಲೆ ಪರಿಣಾಮ ಬೀರುವ ಅಂಶಗಳಿವೆ.   

2 /4

ಪ್ಯಾಕ್ ಮಾಡಿದ ಜಂಕ್ ಫುಡ್ ಮೂಲಕ, ದೊಡ್ಡ ಪ್ರಮಾಣದ ಟ್ರಾನ್ಸ್ ಫ್ಯಾಟ್  ನಮ್ಮ  ದೇಹ ಸೇರುತ್ತದೆ. ಇದು ಆಲ್ ಜೈಮರ್ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಇನ್ಸ್ಟಂಟ್ ನೂಡಲ್ಸ್ ನಂತಹ ಜಂಕ್ ಫುಡ್ ಗಳು ನಿಮ್ಮ ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದು Brain-Derived Neurotrophic Factor  ಮಾಲೆಕ್ಯುವೆಲ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ. 

3 /4

ಆಲ್ಕೊಹಾಲ್ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದು ವಿಟಮಿನ್ ಬಿ 1 ಅನ್ನು ಕಡಿಮೆ ಮಾಡುತ್ತದೆ, ಇದು ಸ್ಮರಣೆಯನ್ನು ದುರ್ಬಲಗೊಳಿಸುತ್ತದೆ.

4 /4

ಸ್ಮರಣ ಶಕ್ತಿಯನ್ನು ಚುರುಕುಗೊಳಿಸಲು ನೀವು ತಿನ್ನಬೇಕಾದ ಆಹಾರ ವಸ್ತುಗಳಲ್ಲಿ ಒಮೆಗಾ 3 ಸಮೃದ್ಧವಾಗಿರುವ  ಚಿಯಾ ಬೀಜಗಳು, ಅಗಸೆ ಬೀಜಗಳು ಮತ್ತು ವಾಲ್ನಟ್ಸ್ ಸೇರಿವೆ. ಅವರು ಮೆದುಳನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ.