ಈ ರಾಶಿಯ ಹೆಣ್ಣು ಮಕ್ಕಳು ಪತಿಯ ಪಾಲಿಗೆ ಅದೃಷ್ಟ ಲಕ್ಷ್ಮಿ ಯರಂತೆ

ತನ್ನ ಸುಖ ದುಃಖದಲ್ಲಿ ಸದಾ ತನ್ನ ಜೊತೆಗಿರುವ ಪತ್ನಿ ತನಗೆ ಸಿಗಲಿಎಂದು ಎಲ್ಲಾ ಹಡುಗರು ಬಯಸುತ್ತಾರೆ. ಅಲ್ಲದೆ ತನ್ನ ಬಾಳಿನಲ್ಲಿ ಬರುವ ಹುಡುಗಿ ತನ್ನ ಪಾಲಿಗೆ ಅದೃಷ್ಟ ಹೊತ್ತು ತರಲಿ ಎಂದೇ ಆಶಿಸುತ್ತಾರೆ. 

ನವದೆಹಲಿ : ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಗಳಿವೆ. ಪ್ರತಿ ಒಂದು ರಾಶಿಯು ಕೂಡ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.  ರಾಶಿಗನುಗುಣವಾಗಿ ಅವರವರ ಗುಣ ಸ್ವಭಾವವನ್ನು ತಿಳಿದುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಜ್ಯೋತಿಷ್ಯದ ಪ್ರಕಾರ, ಪ್ರತಿ ರಾಶಿಗೆ ಅಧಿಪತಿ ಗ್ರಹವಿರುತ್ತದೆ. ಈ ಗ್ರಹದ ಪರಿಣಾಮವು ಸಂಬಂಧಪಟ್ಟ ವ್ಯಕ್ತಿಯ ಮೇಲೆ ಬೀಳುತ್ತದೆ.  ಧರ್ಮಗ್ರಂಥಗಳಲ್ಲಿ ನಾಲ್ಕು ರಾಶಿಗಳ ಬಗ್ಗೆ ವಿವರಿಸಲಾಗಿದೆ.  ಈ ರಾಶಿಯವರು ಪತಿಯ ಪಾಲಿಗೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಈ ರಾಶಿ ಚಿಹ್ನೆಯ ಹುಡುಗಿಯರು, ಯಾರ ಜೀವನದಲ್ಲಿ ಬರುತ್ತಾರೆಯೋ, ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಯಾವುದೇ  ಕೊರತೆಯಿರುವುದಿಲ್ಲ.   

2 /5

ಕುಂಭ ರಾಶಿಯ ಹುಡುಗಿಯರು, ಗಂಡಂದಿರ ಪಾಲಿಗೆ ಅದೃಷ್ಟಶಾಲಿ ಎನ್ನಲಾಗಿದೆ.  ಈ ರಾಶಿಚಕ್ರದ ಹುಡುಗಿಯರು ಅತ್ಯಂತ ಕಾಳಜಿ ಪ್ರವೃತಿಯುಳ್ಳವರು. ಆತ್ಮವಿಶ್ವಾಸ ಮತ್ತು ಸ್ವತಂತ್ರ ಮನಸ್ಥಿತಿಯವರು.  ಈ ರಾಶಿಯ ಹುಡುಗಿಯರು, ಯಾರ ಜೀವನದಲ್ಲಿ ಬರುತ್ತಾರೆಯೋ, ಅವರು ಪತಿಯ ಸರ್ವ ಕಷ್ಟದಲ್ಲಿ ಭಾಗಿಯಾಗುತ್ತಾರೆಯಂತೆ. 

3 /5

ಕರ್ಕ ರಾಶಿ : ಜ್ಯೋತಿಷ್ಯ ಪ್ರಕಾರ, ಕರ್ಕ ರಾಶಿಚಕ್ರದ ಹುಡುಗಿಯರು ತಮ್ಮ ಗಂಡಂದಿರ ಪಾಲಿಗೆ  ಸಮೃದ್ಧಿಯ ಗಣಿಯಾಗಿ ಸಾಬೀತಾಗುತ್ತಾರಂತೆ. ಅವರು ಹೋಗುವ ಮನೆಯಲ್ಲಿ ಸಂಪತ್ತಿನ ಕೊರತೆಯಿರುವುದಿಲ್ಲ. ಈ ರಾಶಿಚಕ್ರದ ಹುಡುಗಿಯರು ಸಂಬಂಧದಲ್ಲಿ ಪ್ರಾಮಾಣಿಕರಾಗಿರುತ್ತಾರೆ.   

4 /5

ಮೀನ ರಾಶಿ :  ಧರ್ಮಗ್ರಂಥಗಳ ಪ್ರಕಾರ, ಈ ರಾಶಿಯ ಹುಡುಗಿಯರು ಭಾವುಕರು ಮತ್ತು ಕಾಳಜಿ ಪ್ರವೃತಿಯವರಾಗಿರುತ್ತಾರೆ. ತನ್ನ ಗಂಡನ ಸಂತೋಷವನ್ನೇ ಸದಾ ಬಯಸುತ್ತಾಳೆ. ಈ ರಾಶಿಯವರು ಯಾರ ಜೀವನದಲ್ಲಿ ಪ್ರವೇಶಿಸುತ್ತಾರೋ ಅವರು ಪ್ರಗತಿಯನ್ನು ಸಾಧಿಸುತ್ತಾರೆ ಎಂದು ಹೇಳಲಾಗಿದೆ.    

5 /5

ಮಕರ ರಾಶಿ :  ಈ ರಾಶಿಯ ಹುಡುಗಿಯರು ಗಂಡಂದಿರ ಪಾಲಿಗೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಈ ರಾಶಿಯ ಹುಡುಗಿಯರು ತನ್ನ ಬುದ್ಧಿವನ್ತಿಕೆಯಿಂದ  ಇಡೀ ಕುಟುಂಬವನ್ನು ಒಂದುಗೂಡಿಸಿ ನಡೆಸುತ್ತಾಳೆ. ಈ ರಾಶಿಯ ಹೆಣ್ಣು ಮಕ್ಕಳು ಹಿತ ಮಿತವಾಗಿ ಖರ್ಚು ಮಾಡುತ್ತಾರೆ.