ಜ್ಯೋತಿಷ್ಯದ ಪ್ರಕಾರ ಈ ರಾಶಿಯ ಹೆಣ್ಣು ಮಕ್ಕಳಿಗೆ ಬಹಳ ಕೋಪ ಬರುತ್ತದೆಯಂತೆ. ಇವರ ತಮ್ಮ ಕೋಪದ ಸಹಾಯದಿಂದಲೇ ತಮ್ಮ ಕೆಲಸವನ್ನು ಸಾಧಿಸಿಕೊಂಡು ಬಿಡುತ್ತಾರೆ.
ನವದೆಹಲಿ : ಹೊಸಬರನ್ನು ಭೇಟಿ ಮಾಡುವಾಗ, ಅವರ ಸ್ವಭಾವವು ಶೀಘ್ರದಲ್ಲೇ ಅರಿವಾಗುತ್ತದೆ. ಒಬ್ಬರ ಸ್ವಭಾವ ಅರ್ಥವಾದರೆ ಅವರನ್ನು ನಿಭಾಯಿಸುವುದು ಕೂಡಾ ಸಾಧ್ಯವಾಗುತ್ತದೆ. ಇದಲ್ಲದೆ, ಅವರು ಇಷ್ಟಪಡದ ಕೆಲಸಗಳನ್ನು ಮಾಡುವುದನ್ನು ಸಹ ಇದರಿಂದ ತಪ್ಪಿಸಬಹುದು. ಹಾಗಾದಾಗ ಸಂಬಂಧವು ಚೆನ್ನಾಗಿರುತ್ತದೆ. ಜ್ಯೋತಿಷ್ಯದ ಪ್ರಕಾರ ಈ ರಾಶಿಯ ಹೆಣ್ಣು ಮಕ್ಕಳಿಗೆ ಬಹಳ ಕೋಪ ಬರುತ್ತದೆಯಂತೆ. ಇವರ ತಮ್ಮ ಕೋಪದ ಸಹಾಯದಿಂದಲೇ ತಮ್ಮ ಕೆಲಸವನ್ನು ಸಾಧಿಸಿಕೊಂಡು ಬಿಡುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಮೇಷ ರಾಶಿಯ ಹುಡುಗಿಯರು ತುಂಬಾ ಧೈರ್ಯಶಾಲಿಗಳು.. ಆದರೆ ಮಹಾ ಕೋಪವುಳ್ಳವರು. ಈ ಹುಡುಗಿಯರು ಸಣ್ಣ ಸಣ್ಣ ವಿಷಯಗಳಿಗೂ ಕೋಪಗೊಳ್ಳುತ್ತಾರೆ. ಇದಲ್ಲದೆ, ತಮ್ಮ ಹಟವನ್ನು ಸಾಧಿಸುವುದರಲ್ಲಿಯೂ ಇವರು ಎತ್ತಿದ ಕೈ. ಏನಾದರು ಕೆಲಸ ಮಾಡಲು ನಿರ್ಧರಿಸಿದರೆ ಅದನ್ನು ಮಾಡಿಯೇ ಮುಗಿಸುತ್ತಾರೆ.
ವೃಷಭ ರಾಶಿಯ ಹುಡುಗಿಯರು ಹುಟ್ಟಿನಿಂದಲೂ ಹಠಮಾರಿ ಮತ್ತು ಕೋಪಡ ಸ್ವಭಾವದವರಾಗಿರುತ್ತಾರೆ. ಇವರು ಸುಳ್ಳನ್ನು ಎಂದಿಗೂ ಸಹಿಸುವುದಿಲ್ಲ. ಇವರಿಗೆ ಯಾರಾದರು ಮೋಸ ಮಾಡಿದರೆ, ಆ ವ್ಯಕ್ತಿಯನ್ನು ತನ್ನ ಜೀವನದಿಂದ ತೆಗೆದುಹಾಕಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಒಂದೊಂದು ಸಲ ಇವರ ಮೊಂಡುತನ ವಿಪರೀತಕ್ಕೆ ಹೋಗುತ್ತದೆ.
ಮಿಥುನ ರಾಶಿಯ ಜನರು ರಾಜತಾಂತ್ರಿಕರು. ಆದ್ದರಿಂದ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂದು ಅವರಿಗೆ ತಿಳಿದಿದೆ ಮತ್ತು ಅವರು ವಿರಳವಾಗಿ ಕೋಪಗೊಳ್ಳುತ್ತಾರೆ, ಆದರೆ ಕೋಪಗೊಂಡಾಗ ಅದನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಈ ರಾಶಿಚಕ್ರದ ಹುಡುಗಿಯರು ಕೆಟ್ಟ ವರ್ತನೆಗಳನ್ನು ಸಹಿಸುವುದಿಲ್ಲ
ಸಿಂಹ ರಾಶಿಯ ಹುಡುಗಿಯರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ, ಆದರೆ ಸಂಗಾತಿ ಮೋಸ ಮಾಡಲು ಪ್ರಯತ್ನಿಸಿದರೆ, ಸರಿಯಾಗಿಯೇ ಪಾಠ ಕಲಿಸುತ್ತಾರೆ. ಈ ಹುಡುಗಿಯರು ಸ್ವಾವಲಂಬಿಗಳಾಗಿರುತ್ತಾರೆ. ಅವರ ಹಠದಿಂದಲೇ ಜೀವನದಲ್ಲಿ ಉತ್ತಮ ಸ್ಥಾನವನ್ನು ಪಡೆಯುತ್ತಾರೆ.
ವೃಶ್ಚಿಕ ರಾಶಿಯ ಹುಡುಗಿಯರು ಕೋಪದಲ್ಲಿ ತಮ್ಮ ಸ್ಥಿಮಿತವನ್ನೇ ಕಳೆದುಕೊಳ್ಳುತ್ತಾರೆ. ಇವರಿಗೆ ಎಷ್ಟು ಬೇಗ ಕೋಪ ಬರುತ್ತದೆಯೋಅಷ್ಟೇ ಬೇಗ ಶಾಂತರಾಗುತ್ತಾರೆ.