American Star Cricketer Tara Norris: ಅಮೆರಿಕಾದ ಸ್ಟಾರ್ ಒಬ್ಬರು ಭಾರತದಲ್ಲಿ ಕ್ರಿಕೆಟ್ ಆಡಲು ಬರುತ್ತಿದ್ದಾರೆ. ಕುತೂಹಲಕಾರಿಯಾಗಿ, ಅವರು ಮೊದಲ ಬಾರಿಗೆ ಈ ದೇಶದಲ್ಲಿ ಆಡುತ್ತಿದ್ದಾರೆ. ಈ ತಿಂಗಳು ಮುಂಬೈನಲ್ಲಿ ಮಹಿಳೆಯರಿಗಾಗಿ ನಡೆಯಲಿರುವ T20 ಲೀಗ್ (WPL) ನಲ್ಲಿ ಭಾಗವಹಿಸಲೆಂದು ಆಗಮಿಸುತ್ತಿದ್ದಾರೆ. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 10 ಲಕ್ಷ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದೆ. ಸೌಂದರ್ಯದ ವಿಷಯದಲ್ಲಿ ಚಿತ್ರ ನಟಿಯರನ್ನೂ ಈಕೆ ಮೀರಿಸುತ್ತಾಳೆ.
ಅಮೆರಿಕಾದ ಸ್ಟಾರ್ ಒಬ್ಬರು ಭಾರತದಲ್ಲಿ ಕ್ರಿಕೆಟ್ ಆಡಲು ಬರುತ್ತಿದ್ದಾರೆ. ಕುತೂಹಲಕಾರಿಯಾಗಿ, ಅವರು ಮೊದಲ ಬಾರಿಗೆ ಈ ದೇಶದಲ್ಲಿ ಆಡುತ್ತಿದ್ದಾರೆ. ಈ ತಿಂಗಳು ಮುಂಬೈನಲ್ಲಿ ಮಹಿಳೆಯರಿಗಾಗಿ ನಡೆಯಲಿರುವ T20 ಲೀಗ್ (WPL) ನಲ್ಲಿ ಭಾಗವಹಿಸಲೆಂದು ಆಗಮಿಸುತ್ತಿದ್ದಾರೆ. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 10 ಲಕ್ಷ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದೆ. ಸೌಂದರ್ಯದ ವಿಷಯದಲ್ಲಿ ಚಿತ್ರ ನಟಿಯರನ್ನೂ ಈಕೆ ಮೀರಿಸುತ್ತಾಳೆ.
WPL ಮೊದಲ ಸೀಸನ್ ಮಾರ್ಚ್ 4 ರಿಂದ 26 ರವರೆಗೆ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಾರ್ಚ್ 5 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬ್ರಬೋರ್ನ್ ಸ್ಟೇಡಿಯಂನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.
ಅಮೆರಿಕದ ವೇಗಿ ತಾರಾ ನಾರ್ರಿಸ್ ಅವರು ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಭಾಗವಹಿಸುವ ಅಮೆರಿಕಾದ ಏಕೈಕ ಕ್ರಿಕೆಟಿಗರಾಗಿದ್ದಾರೆ. ಮಾರ್ಚ್ 4 ರಿಂದ ಮುಂಬೈನಲ್ಲಿ T20 ಲೀಗ್ ಪ್ರಾರಂಭವಾಗಲಿದೆ.
ನಾರ್ರಿಸ್ ಇದುವರೆಗೆ ತನ್ನ ವೃತ್ತಿಜೀವನದಲ್ಲಿ ಐದು T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 4 ವಿಕೆಟ್ ಪಡೆದಿದ್ದರು. ಡಬ್ಲ್ಯುಪಿಎಲ್ ನ ಮೊದಲ ಸೀಸನ್‌ಗಾಗಿ ಕಳೆದ ತಿಂಗಳು ನಡೆದ ಹರಾಜಿನಲ್ಲಿ ತಾರಾ ಅವರನ್ನು 10 ಲಕ್ಷ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು.
ದೆಹಲಿ ಫ್ರಾಂಚೈಸಿ ಹೊರಡಿಸಿದ ಹೇಳಿಕೆಯಲ್ಲಿ ತಾರಾ ನಾರ್ರಿಸ್, 'ಈ ಲೀಗ್‌ನಲ್ಲಿ ಕೆಲವು ವಿಶ್ವ ದರ್ಜೆಯ ಆಟಗಾರರಿದ್ದಾರೆ ಅವರೊಂದಿಗೆ ತರಬೇತಿ ಪಡೆಯುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಾನು ಹೆಚ್ಚು ಹೆಚ್ಚು ಕಲಿಯಲು ಪ್ರಯತ್ನಿಸುತ್ತೇನೆ” ಎಂದು ಹೇಳಿದ್ದಾರೆ.
ತಾರಾ ನಾರ್ರಿಸ್, 'ನಾನು ಖಂಡಿತವಾಗಿಯೂ ಎಲ್ಲಾ ಅಸೋಸಿಯೇಟ್ ದೇಶಗಳನ್ನು ಹೆಮ್ಮೆಪಡುವಂತೆ ಮಾಡಲು ಬಯಸುತ್ತೇನೆ. ಈ ಎಲ್ಲಾ ಆಟಗಾರರನ್ನು ಪ್ರತಿನಿಧಿಸುತ್ತಿದ್ದೇನೆ. ಅನೇಕ ಮಹಿಳಾ ಆಟಗಾರರು ಆರ್ಥಿಕ ಸಮಸ್ಯೆಯಿಂದಾಗಿ ಮತ್ತು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ. ನಾನು ಅಂತಹ ದೇಶಗಳಿಗೆ ಜಾಗೃತಿ ಮೂಡಿಸಲು ಬಯಸುತ್ತೇನೆ. ಮುಂದಿನ ವರ್ಷ ಹೆಚ್ಚಿನ ಆಟಗಾರರು ಭಾಗವಹಿಸುತ್ತಾರೆ ಎಂದು ಭಾವಿಸುತ್ತೇನೆ” ಎಂದರು.