Googleನ ಈ ಫೀಚರ್ ಮೂಲಕ ವೆಬ್ ಸೈಟ್ ಅಸಲಿಯೋ ನಕಲಿಯೋ ಪತ್ತೆಹಚ್ಚಿ

Google search ಮಾಡುವ ವೇಳೆ ನಿಮ್ಮ ಎದುಉ ಅನೇಕ  ಆಯ್ಕೆಗಳು ಬರುತ್ತವೆ. ಹೀಗಿರುವಾಗ ಯಾವ ವೆಬ್ ಸೈಟ್ ಅಸಲಿ ಯಾವುದು ನಕಲಿ ಎಂದು ಕಂಡುಹಿಡಿಯುವುದು ಬಹಳ ಕಷ್ಟ.

ನವದೆಹಲಿ :  Google search ಮಾಡುವ ವೇಳೆ ನಿಮ್ಮ ಎದುಉ ಅನೇಕ  ಆಯ್ಕೆಗಳು ಬರುತ್ತವೆ. ಹೀಗಿರುವಾಗ ಯಾವ ವೆಬ್ ಸೈಟ್ ಅಸಲಿ ಯಾವುದು ನಕಲಿ ಎಂದು ಕಂಡುಹಿಡಿಯುವುದು ಬಹಳ ಕಷ್ಟ. ಈ ಸಮಸ್ಯೆಯನ್ನು ಬಗೆಹರಿಸಲು, ಗೂಗಲ್ ನಲ್ಲಿ ಈಗ “About this result” ಎಂಬ ಫೀಚರ್ ಇದೆ. ಗೂಗಲ್ ಈ ಫೀಚರ್ ಅನ್ನು 2021ರಲ್ಲಿ ಅಮೆರಿಕಾದಲ್ಲಿ ಪರಿಚಯಿಸಲಾಯಿತು. ಇದೀಗ ವಿಶ್ವಾದ್ಯಂತ ಇಂಗ್ಲೀಷ್ ನಲ್ಲಿ ಸರ್ಚ್ ಮಾಡಲಾದ ಎಲ್ಲಾ ಫಲಿತಾಂಶಗಳಿಗೂ ಈ About this result ಅನ್ವಯವಾಗಲಿದೆ ಎಂದು ಕಂಪನಿ Google I/O ಇವೆಂಟ್ ನಲ್ಲಿ ಹೇಳಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನೀವು Google ನಲ್ಲಿ ಸರ್ಚ್ ಮಾಡಿದಾಗ, ಸರ್ಚ್ ರಿಸಲ್ಟ್ ನಲ್ಲಿ ಮೂರು ಡಾಟ್ ಬಟನ್ ಕಾಣಿಸುತ್ತದೆ. ಇದನ್ನು ಕ್ಲಿಕ್ ಮಾಡಿದರೆ, About this result ಕಾರ್ಡ್ ತೆರೆಯುತ್ತದೆ. ಇದರಲ್ಲಿ ಮಾಹಿತಿಯನ್ನು ಒದಗಿಸುವ ವೆಬ್‌ಸೈಟಿನ ಸಂಪೂರ್ಣ ಮಾಹಿತಿ ಸಿಗಲಿದೆ. ಈ ಮಾಹಿತಿಯ ಮೂಲ Wikipedia ಆಗಿರುತ್ತದೆ.

2 /5

ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಸೈಟ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಇದಕ್ಕಾಗಿ ವಿಕಿಪೀಡಿಯಾ ಪೇಜ್ ನ ಲಿಂಕ್ ಕೂಡಾ ನೀಡಲಾಗಿರುತ್ತದೆ. ಇದಕ್ಕಾಗಿ ಕಂಪನಿಯು ವಿಕಿಪೀಡಿಯಾದೊಂದಿಗೆ ಕೆಲಸ ಮಾಡುತ್ತಿದೆ. ಅದರಲ್ಲಿ ನೀಡಲಾದ ಮಾಹಿತಿಯ Up to date ವೆರಿಫಿಕೆಶನ್ ಮತ್ತು  ಮೂಲ ಮಾಹಿತಿಯಾಗಿರುತ್ತದೆ.

3 /5

ಈ ವೆಬ್‌ಸೈಟ್ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು Google ತಿಳಿಸುತ್ತದೆ. ಅಲ್ಲದೆ, ನೀವು ಓದಲು ಬಯಸುವ ಲಿಂಕ್ ಗೆ ಹಣ ಪಾವತಿಸಬೇಕೆ ಇಲ್ಲವೇ ಎಂಬುದ ನ್ನು ಕೂಡಾ ತಿಳಿಸುತ್ತದೆ. 

4 /5

ವಿಕಿಪೀಡಿಯಾದಲ್ಲಿ ಯಾವ ವೆಬ್ ಸೈಟ್ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲವೋ, ಗೂಗಲ್ ಇದರ ಬಗ್ಗೆ ಬೇರೆ ಮಾಹಿತಿಯನ್ನು ಒದಗಿಸುತ್ತದೆ. ಗೂಗಲ್ ಮೊದಲು ಈ ವೆಬ್‌ಸೈಟ್ ಅನ್ನು ಯಾವಾಗ ಸೂಚಿಸಿತ್ತು. ಈ ವೆಬ್‌ಸೈಟ್ ಹೇಗೆ ಡಿಸ್ಕ್ರೈಬ್ ಮಾಡಿಕೊಳ್ಳುತ್ತದೆ.  ಈ ವೆಬ್‌ಸೈಟ್ ಬಗ್ಗೆ ಇತರ ಮೂಲಗಳು ಏನು ಹೇಳುತ್ತವೆ ಎನ್ನುವುದನ್ನು ತಿಳಿಸುತ್ತದೆ.

5 /5

ನೀವು ಆರೋಗ್ಯ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುತ್ತಿದ್ದರೆ, ಅದು ನಿಮಗೆ ತುಂಬಾ ಉಪಯುಕ್ತವಾಗಿದೆ.