Turmeric Side Effects: ಆಹಾರದಲ್ಲಿ ಅರಿಶಿನವನ್ನು ಹೆಚ್ಚು ಹಾಕಿದರೆ ಎದುರಾಗುತ್ತೆ ನೀವು ಊಹಿಸಿರದ ಈ ಸಮಸ್ಯೆಗಳು!

ಅರಿಶಿನವನ್ನು ಭಾರತೀಯ ಅಡುಗೆಮನೆಯ ನೆಚ್ಚಿನ ಮಸಾಲೆ ಎಂದು ಕರೆದರೆ ಬಹುಶಃ ತಪ್ಪಾಗಲ್ಲ. ಇದನ್ನು ಖಂಡಿತವಾಗಿಯೂ ಹೆಚ್ಚಿನ ತರಕಾರಿ ಮತ್ತು ಮಸಾಲೆ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಅದರ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇದು ನಮ್ಮ ಚರ್ಮಕ್ಕೆ ಪ್ರಯೋಜನವನ್ನು ನೀಡುತ್ತದೆ. ಆದ್ದರಿಂದ ಅರಿಶಿನವನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.

1 /5

ಅರಿಶಿಣವನ್ನು ಆಯುರ್ವೇದ ಔಷಧಕ್ಕಿಂತ ಕಡಿಮೆ ಎಂದು ಪರಿಗಣಿಸಲಾಗುವುದಿಲ್ಲ. ಆಗಾಗ್ಗೆ ನಮಗೆ ಗಾಯಗಳಾದಾಗ ಅಂತಹ ಜಾಗಕ್ಕೆ ಅರಶಿಣ ಪೇಸ್ಟ್ ಅನ್ನು ಹಚ್ಚುತ್ತೇವೆ, ಆದರೆ ನಾವು ಅದನ್ನು ಸೀಮಿತ ಪ್ರಮಾಣದಲ್ಲಿ ಬಳಸದಿದ್ದರೆ ಈ ಔಷಧಿಯು ವಿಷವಾಗಿ ಪರಿಣಮಿಸಬಹುದು.

2 /5

ಅರಿಶಿನವನ್ನು ಎಂದಿಗೂ ಹೆಚ್ಚು ಸೇವಿಸಬೇಡಿ: ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಆಹಾರ ತಜ್ಞ ಡಾ. ಆಯುಷಿ ಯಾದವ್, ಅರಿಶಿನವು ಔಷಧೀಯ ಗುಣಗಳನ್ನು ಹೊಂದಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಯಾವುದನ್ನಾದರೂ ಅತಿಯಾದ ಸೇವನೆ ಮಾಡಬಾರದು ಎಂದು ಎಚ್ಚರಿಸಿದ್ದಾರೆ. ಅರಿಶಿಣವನ್ನು ಏಕೆ ಅತಿಯಾಗಿ ತಿನ್ನಬಾರದು ಎಂದು ತಿಳಿಯೋಣ.

3 /5

ಅರಿಶಿಣದಲ್ಲಿ ಉರಿಯೂತ ನಿವಾರಕ ಮತ್ತು ಆ್ಯಂಟಿ-ಆಕ್ಸಿಡೆಂಟ್ ಗುಣಗಳಿದ್ದು, ಇದರ ಮೂಲಕ ನೀವು ಅನೇಕ ರೋಗಗಳಿಂದ ರಕ್ಷಿಸಲ್ಪಡುತ್ತೀರಿ. ಆದರೆ ನೀವು ಹೆಚ್ಚು ಸೇವಿಸಿದರೆ, ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ತಲೆತಿರುಗುವಿಕೆ ಉಂಟಾಗಬಹುದು. ಆರೋಗ್ಯವಂತ ವಯಸ್ಕನು ದಿನಕ್ಕೆ ಒಂದಕ್ಕಿಂತ ಹೆಚ್ಚು ಟೀ ಚಮಚ ಅರಿಶಿನವನ್ನು ಸೇವಿಸಬಾರದು

4 /5

ಅರಿಶಿಣದ ಅತಿಯಾದ ಸೇವನೆಯು ನಮ್ಮ ಮೂತ್ರಪಿಂಡದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಏಕೆಂದರೆ ಆಕ್ಸಲೇಟ್ ಎಂಬ ವಸ್ತುವು ಈ ಮಸಾಲೆಯಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಕರಗುವಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ ಮತ್ತು ನಂತರ ಅದು ಗಟ್ಟಿಯಾಗುತ್ತದೆ. ಇದು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ.

5 /5

ಅರಿಶಿನವು ಕರ್ಕ್ಯುಮಿನ್ ಎಂಬ ವಸ್ತುವನ್ನು ಹೊಂದಿದ್ದು ಅದು ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೊಟ್ಟೆನೋವು ಇದ್ದಲ್ಲಿ ವಾಂತಿ ಮತ್ತು ಭೇದಿ ಉಂಟಾಗಬಹುದು. ಆದ್ದರಿಂದ ಮಿತಿಯಲ್ಲಿ  ಅರಿಶಿಣ ತಿನ್ನುವುದು ಜಾಣತನ.  (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)