ಆನ್ಲೈನ್ ತರಗತಿಗಳಿಗೆ ಅಥವಾ ಮನೆಯಿಂದಲೇ ಕೆಲಸ ಮಾಡಲು ಲ್ಯಾಪ್ಟಾಪ್ಗಾಗಿ ಹುಡುಕುತ್ತಿರುವ ಯಾರಿಗಾದರೂ ಇವು ಉತ್ತಮ ಆಯ್ಕೆ.
ಬಜೆಟ್ ಲ್ಯಾಪ್ಟಾಪ್ಗಾಗಿ ಹುಡುಕುತ್ತಿರುವವರಿಗೆ Chromebook ಉತ್ತಮ ಆಯ್ಕೆಯಾಗಿದೆ. ಇದು Googleನ Chrome OSನಲ್ಲಿ ರನ್ ಆಗುತ್ತದೆ ಮತ್ತು ಹೆಚ್ಚಿನ Android ಅಪ್ಲಿಕೇಶನ್ಗಳನ್ನು ಬೆಂಬಲಿಸುತ್ತದೆ. ಆನ್ಲೈನ್ ತರಗತಿಗಳಿಗೆ ಅಥವಾ ಮನೆಯಿಂದಲೇ ಕೆಲಸ ಮಾಡಲು ಲ್ಯಾಪ್ಟಾಪ್ಗಾಗಿ ಹುಡುಕುತ್ತಿರುವ ಯಾರಿಗಾದರೂ ಇವು ಉತ್ತಮ ಆಯ್ಕೆ. ಹೆಚ್ಚಿನ Chromebooks ಲ್ಯಾಪ್ಟಾಪ್ಗಳು ಉನ್ನತ-ಮಟ್ಟದ ಗೇಮಿಂಗ್ ಮತ್ತು ಗ್ರಾಫಿಕ್ಸ್-ತೀವ್ರವಾದ ಕೆಲಸ(Graphics-Intensive Work)ಕ್ಕೆ ಸೂಕ್ತವಲ್ಲ, ಸಾಮಾನ್ಯ ಕೆಲಸಗಳಿಗೆ ಉತ್ತಮ ಆಯ್ಕೆಯಾಗಿದೆ. HP, Lenovo ಮತ್ತು Asus ಸೇರಿದಂತೆ 5 ಬ್ರ್ಯಾಂಡ್ಗಳ Chromebooks ಅನ್ನು ನೀವು 30 ಸಾವಿರ ರೂ. ಅಡಿ ಖರೀದಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Lenovoನ Chromebook ಮಿಲಿಟರಿ ದರ್ಜೆಯ ಪ್ರಮಾಣೀಕರಣ(Military Grade Certification)ದೊಂದಿಗೆ ಬರುತ್ತದೆ. ಇದು ನೀರು ನಿರೋಧಕ(Water-Resistant) ಕೀಬೋರ್ಡ್ ಅನ್ನು ಹೊಂದಿದೆ. Lenovo Chromebook 14e 14 ಇಂಚಿನ FHD ಡಿಸ್ಪ್ಲೇಯನ್ನು ಹೊಂದಿದ್ದು, 4GB RAM ಮತ್ತು 64GB ಆಂತರಿಕ ಸ್ಟೋರೇಜ್ ನೀಡುತ್ತದೆ. ಈ ಸಾಧನವು G-Suite integrationದೊಂದಿಗೆ ಬರುತ್ತದೆ ಮತ್ತು ಒಂದೇ ಚಾರ್ಜ್ನಲ್ಲಿ 10 ಗಂಟೆಗಳ ಬ್ಯಾಟರಿ ಬ್ಯಾಕಪ್ ಭರವಸೆ ನೀಡುತ್ತದೆ. Lenovo Chromebook 14e ಬೆಲೆ 24,990 ರೂ. ಇದೆ.
Asus Chromebook Flip 360-ಡಿಗ್ರಿ ಕನ್ವರ್ಟಿಬಲ್ ಟಚ್-ಸ್ಕ್ರೀನ್ Displayದೊಂದಿಗೆ ಬರುತ್ತದೆ. ಈ ಲ್ಯಾಪ್ಟಾಪ್ ಮಿಲಿಟರಿ ದರ್ಜೆಯ ಬಾಳಿಕೆ ಪ್ರಮಾಣೀಕರಣದೊಂದಿಗೆ ಬರುತ್ತದೆ. ಇದು 4GB RAM ಮತ್ತು 64GB ಆಂತರಿಕ ಸ್ಟೋರೇಜ್ ಜೊತೆ ಜೋಡಿಸಲಾದ ಇಂಟೆಲ್ ಸೆಲೆರಾನ್ ಪ್ರೊಸೆಸರ್ನಿಂದ ಚಾಲಿತವಾಗಿದೆ. ಈ ಸಾಧನವು Chrome OS ನಲ್ಲಿ ರನ್ ಆಗುತ್ತದೆ ಮತ್ತು 10 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಭರವಸೆ ನೀಡುತ್ತದೆ. Asus Chromebook Flip ಬೆಲೆ 24,999 ರೂ. ಇದೆ.
HPಯ Chromebook MediaTek ಪ್ರೊಸೆಸರ್ನಿಂದ ಚಾಲಿತವಾಗಿದೆ ಮತ್ತು ChromeOS ನಲ್ಲಿ ರನ್ ಆಗುತ್ತದೆ. ಈ ಲ್ಯಾಪ್ಟಾಪ್ 11.6-ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ ಮತ್ತು 4GB RAM ಮತ್ತು 64GB ಆಂತರಿಕ ಸ್ಟೋರೇಜ್ ನೊಂದಿಗೆ ಬರುತ್ತದೆ. ಈ ನಯವಾದ ಮತ್ತು ಸ್ಲಿಮ್ ಲ್ಯಾಪ್ಟಾಪ್ ಒಂದೇ ಚಾರ್ಜ್ನಲ್ಲಿ 12 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ. Google ಸಹಾಯಕ ಬೆಂಬಲದೊಂದಿಗೆ ಬರುವ ಈ HP Chromebook MediaTek MT8183 ಬೆಲೆ 23,490 ರೂ. ಆಗಿದೆ.
Chromebook C223 ಹಗುರವಾದ ಲ್ಯಾಪ್ಟಾಪ್ ಆಗಿದ್ದು, ಇದು ಕೇವಲ 1kg ಗಿಂತ ಕಡಿಮೆಯಿರುತ್ತದೆ. ಇದು 11.6-ಇಂಚಿನ ಡಿಸ್ಪ್ಲೇ ಹೊಂದಿರುವ ಅತ್ಯಂತ ತೆಳುವಾದ ಲ್ಯಾಪ್ಟಾಪ್ ಎಂದು ಆಸುಸ್ ಹೇಳಿಕೊಂಡಿದೆ. ಸಾಧನವು Chrome OS ನಲ್ಲಿ ರನ್ ಆಗುತ್ತದೆ ಮತ್ತು 4GB RAM ಮತ್ತು 32GB ಆಂತರಿಕ ಸ್ಟೋರೇಜ್ ನೊಂದಿಗೆ ಬರುತ್ತದೆ. ಈ ಲ್ಯಾಪ್ಟಾಪ್ ಇಂಟೆಲ್ ಡ್ಯುಯಲ್-ಕೋರ್ ಸೆಲೆರಾನ್ N3350 ಪ್ರೊಸೆಸರ್ನಿಂದ ಚಾಲಿತವಾಗಿದೆ. Asus Chromebook C223 ಬೆಲೆ 23,966 ರೂ. ಇದೆ.
ಈ ಕೈಗೆಟುಕುವ ಲ್ಯಾಪ್ಟಾಪ್ 4GB RAM ಮತ್ತು 32GB ಆಂತರಿಕ ಸ್ಟೋರೇಜ್ ಹೊಂದಿದೆ. ಇದು 11.6-ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, ಗ್ರಾಫಿಕ್ಸ್ ಅನ್ನು ಇಂಟೆಲ್ UHD ಗ್ರಾಫಿಕ್ಸ್ 600 ನಿರ್ವಹಿಸುತ್ತದೆ. ಒಂದೇ ಚಾರ್ಜ್ನಲ್ಲಿ ಈ ಲ್ಯಾಪ್ಟಾಪ್ 12.5 ಗಂಟೆಗಳ ಬ್ಯಾಟರಿ ಅವಧಿಯ ಭರವಸೆ ನೀಡುತ್ತದೆ. Acer Chromebook 311 C733-C5A ಬೆಲೆ 23,990 ರೂ. ಇದೆ.