ಕೇವಲ ಕರೆ ಮಾಡಲು, ಸಂದೇಶ ಕಳುಹಿಸಲು ಮತ್ತು ಫೋಟೋ ತೆಗೆಯಲು ಬೇಕಾದ ಉತ್ತಮ ಫೀಚರ್ ಫೋನ್ ಖರೀದಿಸಲು ಬಯಸಿದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತವೆ.
ಇಂದಿನ ಕಾಲದಲ್ಲಿ ಉತ್ತಮ ಸ್ಮಾರ್ಟ್ ಫೋನ್ ಖರೀದಿಸುವುದು ತುಂಬಾ ದುಬಾರಿ ಕೆಲಸ. ನೀವು ಸೋಶಿಯಲ್ ಮೀಡಿಯಾ ಆಪ್‌ಗಳನ್ನು ಬಳಸದಿದ್ದರೆ, ಕೇವಲ ಕರೆ ಮಾಡಲು, ಸಂದೇಶ ಕಳುಹಿಸಲು ಮತ್ತು ಫೋಟೋ ತೆಗೆಯಲು ಬೇಕಾದ ಉತ್ತಮ ಫೀಚರ್ ಫೋನ್ ಖರೀದಿಸಲು ಬಯಸಿದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. 1,500 ರೂ.ಕ್ಕಿಂತಲೂ ಕಡಿಮೆ ಬೆಲೆಗೆ ಸಿಗುವ ಈ ಫೋನ್ ಗಳಲ್ಲಿ ಹಲವಾರು ವೈಶಿಷ್ಟ್ಯಗಳು ನಿಮಗೆ ಲಭ್ಯವಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
I call K 54: ಕೇವಲ 669 ರೂ.ಗಳ ಈ ಫೀಚರ್ ಫೋನ್ 32MB RAM ಮತ್ತು 32MB ROM ಜೊತೆಗೆ 0.3MP ಕ್ಯಾಮೆರಾ, 1.8 ಇಂಚಿನ ಡಿಸ್ಪ್ಲೇ ಮತ್ತು 800mAh ಬ್ಯಾಟರಿಯೊಂದಿಗೆ ಬರುತ್ತದೆ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಅಲ್ಲಿ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ನಿಮಗೆ ಶೇ.5ರಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್ ಸಹ ಸಿಗುತ್ತದೆ.
itel IT2163: 4GB RAM ಮತ್ತು 32GB ವರೆಗೂ ವಿಸ್ತರಿಸಬಹುದಾದ RAM ಹೊಂದಿರುವ ಈ ಫೀಚರ್ ಫೋನ್ 1.8 ಇಂಚಿನ ಡಿಸ್ಪ್ಲೇ, 1000mAh ಬ್ಯಾಟರಿ ಮತ್ತು ಡ್ಯುಯಲ್ ಸಿಮ್ ಸೌಲಭ್ಯವನ್ನು ಹೊಂದಿದೆ. 925 ರೂ. ಬೆಲೆಯ ಈ ಫೋನ್ ಅನ್ನು ನೀವು ಫ್ಲಿಪ್‌ಕಾರ್ಟ್‌ನಿಂದ ಕೇವಲ 825 ರೂ.ಗೆ ಖರೀದಿಸಬಹುದು. ಅಲ್ಲದೆ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ಶೇ.5ರಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯುತ್ತೀರಿ.
Lava A1200: ಈ ಫೀಚರ್ ಫೋನ್ ನಲ್ಲಿ 1.8 ಇಂಚಿನ ಡಿಸ್ಪ್ಲೇ, 0.3MP ಕ್ಯಾಮೆರಾ, ಮೈಕ್ರೋ SD ಕಾರ್ಡ್ ಸೌಲಭ್ಯ ಮತ್ತು 1750mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಿಂದ 1,242 ರೂ.ಗಳಿಗೆ ಖರೀದಿಸಬಹುದು.
Nokia TA-1010/105: ಈ ನೋಕಿಯಾ ಫೀಚರ್ ಫೋನ್ 4MB RAM ಮತ್ತು 4MB ROM, 1.77-inch ಕ್ವಾರ್ಟರ್ QVGA ಡಿಸ್ಪ್ಲೇ ಮತ್ತು 800mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 1,323 ರೂ. ಲಭ್ಯವಿದೆ.
Samsung Guru 1200: ಈ ಸ್ಯಾಮ್‌ಸಂಗ್ ಫೋನಿನ ಬೆಲೆ 1,410 ರೂ. ಮತ್ತು ಇದರ ಡಿಸ್‌ಪ್ಲೇ 1.5 ಇಂಚು ಇದೆ. ಇದರಲ್ಲಿ ಗ್ರಾಹಕರು ಅಂತರ್ನಿರ್ಮಿತ ಫ್ಲ್ಯಾಷ್‌ಲೈಟ್ ಮತ್ತು MP3 ರಿಂಗ್‌ಟೋನ್ ಸೌಲಭ್ಯವನ್ನು ಸಹ ಪಡೆಯುತ್ತಾರೆ. ಇದರ ಬ್ಯಾಟರಿ 800mAh ಮತ್ತು ಇದು 4 ಬಣ್ಣಗಳಲ್ಲಿ ಲಭ್ಯವಿದೆ.