Building Demolitions : ಈ ಅವಳಿ ಗೋಪುರಕ್ಕಿಂತ ಮೊದಲು ನೆಲಕ್ಕುರುಳಿದ ವಿಶ್ವದ ಬೃಹತ್ ಕಟ್ಟಡಗಳು ಇಲ್ಲಿವೆ!

ಹೌದು, ಈ ಹಿಂದೆಯೂ ಜಗತ್ತಿನಲ್ಲಿ ಬಹುಮಹಡಿ ಕಟ್ಟಡಗಳನ್ನು ನೆಲಸಮ  ಮಾಡಲಾಗಿದೆ. ಪ್ರಪಂಚದ ಕೆಲವು ದೊಡ್ಡ ದೊಡ್ಡ ಕಟ್ಟಗಳನ್ನು ಡೆಮಾಲಿಷ್ ಮಾಡಲಾಗಿದೆ.

Twin Tower Demolition : ಇಂದು ಉತ್ತರ ಪ್ರದೇಶದ ನೋಯಿಡಾದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 32 ಅಂತಸ್ತಿನ ಟ್ವಿನ್ ಟವರ್ಸ್ ಕಟ್ಟಡವನ್ನು ಕೇವಲ 9 ಸೆಕೆಂಡುಗಳಲ್ಲಿ ನೆಲಸಮ ಮಾಡಲಾಯಿತು. ಈ ಕಟ್ಟಡ ಕುಸಿದ ಬಳಿಕ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಆದರೆ ಈ ರೀತಿಯ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಹೌದು, ಈ ಹಿಂದೆಯೂ ಜಗತ್ತಿನಲ್ಲಿ ಬಹುಮಹಡಿ ಕಟ್ಟಡಗಳನ್ನು ನೆಲಸಮ  ಮಾಡಲಾಗಿದೆ. ಪ್ರಪಂಚದ ಕೆಲವು ದೊಡ್ಡ ದೊಡ್ಡ ಕಟ್ಟಗಳನ್ನು ಡೆಮಾಲಿಷ್ ಮಾಡಲಾಗಿದೆ.

1 /5

ಚಿಕಾಗೋದಲ್ಲಿ 1925 ರಲ್ಲಿ ನಿರ್ಮಿಸಲಾದ 160 ಮೀಟರ್ ಎತ್ತರದ ಮಾರಿಸನ್ ಹೋಟೆಲ್ ಅನ್ನು ಕೂಡ ನೆಲಸಮ ಮಾಡಲಾಗಿದೆ. ಈ ಕಟ್ಟಡವು 45 ಮಹಡಿಗಳನ್ನು ಹೊಂದಿತ್ತು. ಆದರೆ ಅದರ ಜಾಗದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು 1965 ರಲ್ಲಿ ಅದನ್ನು ಕೆಡವಲಾಯಿತು. ಸಧ್ಯ ಬ್ಯಾಂಕ್ ಒನ್ ಪ್ಲಾಜಾವನ್ನು ಅದರ ಸ್ಥಳದಲ್ಲಿ ನಿರ್ಮಿಸಲಾಗಿದೆ.

2 /5

ಭಾರತದ ಸೂಪರ್‌ಟೆಕ್ ಟ್ವಿನ್ ಟವರ್ ಕೂಡ ಈಗ ಈ ಪಟ್ಟಿಗೆ ಸೇರಿಕೊಂಡಿದೆ. 32 ಮತ್ತು 31 ಮಹಡಿಗಳನ್ನು ಹೊಂದಿರುವ ಈ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ನೆಲಕ್ಕೆ ಉರುಳಿಸಲಾಗಿದೆ. ಅದನ್ನು ಕೆಡವುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಗೋಪುರ ಕೆಡವಿದ ನಂತರ ಸುತ್ತಲೂ ದಟ್ಟ ಹೊಗೆ ಆವರಿಸಿತ್ತು.

3 /5

234 ಮೀಟರ್ ಎತ್ತರದ AXA ಟವರ್ ನೆಲಸಮಗೊಂಡ ವಿಶ್ವದ ಅತಿ ಎತ್ತರದ ಕಟ್ಟಡವಾಗಿದೆ. AXA ಟವರ್ ಕೆಡವಿ 305 ಮೀಟರ್ ಎತ್ತರದ ಕಟ್ಟಡಕ್ಕೆ ದಾರಿ ಮಾಡಿಕೊಡಲಾಯಿತು. ಈ ಕಟ್ಟಡವನ್ನು ಟೆಕ್ ದೈತ್ಯ ಅಲಿಬಾಬಾ ಇತರ ಪಾಲುದಾರರೊಂದಿಗೆ ಅಭಿವೃದ್ಧಿಪಡಿಸಲಿದೆ ಎಂದು ಹೇಳಲಾಗುತ್ತಿದೆ.

4 /5

ಅಬುಧಾಬಿಯ ಮಿನಾ ಪ್ಲಾಜಾ 2014 ರಲ್ಲಿ ಪೂರ್ಣಗೊಂಡಿತು. ಅದರ ಎತ್ತರ 168.5 ಮೀಟರ್. ಈ ಕಟ್ಟಡವನ್ನು 2020 ರಲ್ಲಿ ಕೆಡವಲಾಯಿತು. ಮೀನಾ ಪ್ಲಾಜಾವನ್ನು ಕೆಡವಲು ಸ್ಫೋಟ ತಂತ್ರವನ್ನು ಬಳಸಲಾಯಿತು.

5 /5

ನ್ಯೂಯಾರ್ಕ್‌ನ ಜೆಪಿ ಮೋರ್ಗಾನ್ ಚೇಸ್ ಟವರ್ ಅನ್ನು 270 ಪಾರ್ಕ್ ಅವೆನ್ಯೂ ಎಂದೂ ಕರೆಯಲಾಗುತ್ತದೆ. ಈ ಕಟ್ಟಡವು 205 ಮೀಟರ್ ಎತ್ತರದಲ್ಲಿದೆ ಮತ್ತು ಇದನ್ನು 2021 ರಲ್ಲಿ ಕೆಡವಲಾಯಿತು. ಬದಲಾಗಿ 423 ಮೀಟರ್ ಎತ್ತರದ ಕಟ್ಟಡ ನಿರ್ಮಿಸಲಾಗುತ್ತಿದೆ.