ದೇಶದ ಅಗ್ಗದ 6 ಎಲೆಕ್ಟ್ರಿಕ್ ಸ್ಕೂಟರ್‌ಗಳು, ನೀಡುತ್ತೆ 107km ವರೆಗೆ ಮೈಲೇಜ್

           

  • Oct 28, 2020, 22:04 PM IST

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಖರೀದಿದಾರರಿಂದ ಹಿಡಿದು ತಯಾರಕರವರೆಗಿನ ಕಂಪನಿಗಳ ಗಮನ  ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿಯೇ ದೇಶದ ವಾಹನ ಕಂಪನಿಗಳು ಈಗಾಗಲೇ ವಿದ್ಯುತ್ ಉತ್ಪನ್ನಗಳತ್ತ ಹೆಚ್ಚಿನ ಗಮನ ಹರಿಸುತ್ತಿವೆ ಎಂದು ಹೇಳಲಾಗುತ್ತಿದೆ.

1 /6

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಖರೀದಿದಾರರಿಂದ ಹಿಡಿದು ತಯಾರಕರವರೆಗಿನ ಕಂಪನಿಗಳ ಗಮನ  ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿಯೇ ದೇಶದ ವಾಹನ ಕಂಪನಿಗಳು ಈಗಾಗಲೇ ವಿದ್ಯುತ್ ಉತ್ಪನ್ನಗಳತ್ತ ಹೆಚ್ಚಿನ ಗಮನ ಹರಿಸುತ್ತಿವೆ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ ಕೆಲವು ಸ್ಟಾರ್ಟ್ ಅಪ್‌ಗಳು ಸಹ ಈ ಓಟದಲ್ಲಿವೆ. ಒಂದೊಮ್ಮೆ ನೀವೂ ಕೂಡ ಸ್ಕೂಟರ್ ಖರೀದಿಸುವ ಬಗ್ಗೆ ಚಿಂತಿಸುತ್ತಿದ್ದರೆ  ಎಲೆಕ್ಟ್ರಿಕ್ ಸ್ಕೂಟರ್‌ಗಳು ಉತ್ತಮ ಆಯ್ಕೆ ಎಂಬುದು ತಜ್ಞರ ಸಲಹೆಯಾಗಿದೆ. ದೇಶದಲ್ಲಿ ಈಗಾಗಲೇ ಅನೇಕ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಆಯ್ಕೆಯೊಂದಿಗೆ ನಮ್ಮ ಜೇಬನ್ನು ನೋಡಿಕೊಳ್ಳುವುದು ಅಷ್ಟೇ ಅಗತ್ಯ. ಬನ್ನಿ ಹಬ್ಬದ ಸೀಸನ್ ನಲ್ಲಿ ಕೈಗೆಟುವ ದರದಲ್ಲಿ ಲಭ್ಯವಾಗುವ ಜೊತೆಗೆ ಉತ್ತಮ ವೈಶಿಷ್ಟ್ಯಗಳನ್ನೂ ಹೊಂದಿರುವ ಸ್ಕೂಟರ್‌ಗಳ ಬಗ್ಗೆ ತಿಳಿಯೋಣ... Ampere V48 LA Ampere V48 LA ಸ್ಕೂಟರ್‌ನಲ್ಲಿ 48 V-24Ah ಲೀಡ್ ಆಸಿಡ್ ಬ್ಯಾಟರಿಯನ್ನು ಬಳಸಲಾಗಿದೆ. ಈ ಸ್ಕೂಟರ್ ಚಾರ್ಜ್ ಮಾಡಲು ಸುಮಾರು 8 ರಿಂದ 10 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇದರೊಂದಿಗೆ ಈ ಸ್ಕೂಟರ್ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸಬಹುದು. ನೀವು ಅದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ್ದರೆ, ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದ ಬಳಿಕ 45 ರಿಂದ 50 ಕಿ.ಮೀ. ವರೆಗೆ ಚಲಿಸಬಹುದು ಎಂದು ಕಂಪನಿ ತಿಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 28,900 ರಿಂದ 37,488 ರೂಪಾಯಿಗಳವರೆಗೆ ಇರುತ್ತದೆ. ಇದು ಕಪ್ಪು, ಕೆಂಪು ಮತ್ತು ಬೂದು ಮೂರು ಬಣ್ಣಗಳಲ್ಲಿ ಲಭ್ಯವಿದೆ.

2 /6

ಹೀರೋ ಆಪ್ಟಿಮಾ (Hero Optima) ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನು ಪೂರ್ಣ ಚಾರ್ಜಿಂಗ್ ಮಾಡಲು 8 ರಿಂದ 10 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇದರ ವೇಗ ಗಂಟೆಗೆ 25 ಕಿ.ಮೀ. ಈ ಸ್ಕೂಟರ್ ಒಮ್ಮೆ ಪೂರ್ತಿಯಾಗಿ ಚಾರ್ಜ್ ಆದ ನಂತರ 50 ಕಿ.ಮೀ ದೂರವನ್ನು ಕ್ರಮಿಸಬಲ್ಲದು ಎಂದು ಕಂಪನಿ ಮಾಹಿತಿ ನೀಡಿದೆ. ಈ ಸ್ಕೂಟರ್ ಮ್ಯಾಟ್ ಕೆಂಪು, ಸಯಾನ್ ಮತ್ತು ಮ್ಯಾಟ್ ಬೂದು ಬಣ್ಣಗಳಲ್ಲಿ ಲಭ್ಯವಿದೆ. ಇದರಲ್ಲಿ 250W ಸಾಮರ್ಥ್ಯದ BLDC ಎಲೆಕ್ಟ್ರಿಕ್ ಮೋಟರ್ ಅನ್ನು ಬಳಸಲಾಗಿದ್ದು ಇದರ ಬೆಲೆಯನ್ನು 41,770 ರೂ. ಆಗಿದೆ.

3 /6

ಎಲೆಕ್ಟ್ರಿಕ್ ಸ್ಕೂಟರ್ ವ್ಯಾಪ್ತಿಯಲ್ಲಿ Okinawa Ridge ಉತ್ತಮ ಆಯ್ಕೆಯಾಗಿದೆ. ಒಕಿನಾವಾ ಕಂಪನಿಯು ಪರಿಚಯಿಸಿದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು ಇದರ ವೇಗ ಗಂಟೆಗೆ 60 ಕಿ.ಮೀ. ಇದರ ಬೆಲೆ ಮಾರುಕಟ್ಟೆಯಲ್ಲಿ 44,990 ರೂಪಾಯಿ. ಸ್ಕೂಟರ್‌ನ ತೂಕ 96 ಕೆ.ಜಿ.  

4 /6

ಬಜಾಜ್ ಅವರ ರೆಟ್ರೊ ಸ್ಕೂಟರ್ ಈ ವರ್ಷದ ಆರಂಭದಲ್ಲಿ ಚೇತಕ್ ಎಲೆಕ್ಟ್ರಿಕ್ ಅವತಾರದಲ್ಲಿ ಬಂದಿತು. ಆದಾಗ್ಯೂ ಇದು ಪ್ರಸ್ತುತ ಆಯ್ದ ನಗರಗಳಲ್ಲಿ ಮಾತ್ರ ಮಾರಾಟಕ್ಕಿದೆ. ಆದರೆ ಕಂಪನಿ ವತಿಯಿಂದ ಶೀಘ್ರದಲ್ಲೇ ಇದನ್ನು ದೇಶದ ಇತರ ನಗರಗಳಲ್ಲಿ ಪ್ರಾರಂಭಿಸಲು ಸಿದ್ಧತೆಗಳು ನಡೆಯುತ್ತಿವೆ. ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ 3 ಕಿ.ವ್ಯಾ, ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಬಳಸಲಾಗಿದೆ. ಈ ಸ್ಕೂಟರ್ ಪೂರ್ಣ ಚಾರ್ಜ್ ಆದ ಬಳಿಕ 95 ಕಿ.ಮೀ ವರೆಗೆ ಚಲಿಸಬಲ್ಲದು ಎಂದು ಕಂಪನಿ ತಿಳಿಸಿದೆ. ಇದರ ಬೆಲೆ 1 ಲಕ್ಷ ರೂ.

5 /6

ಟಿವಿಎಸ್ ಐಕ್ಯೂಬ್ (TVS iQube) ಸ್ಕೂಟರ್ ಅನ್ನು 2020ರ ಆರಂಭದಲ್ಲಿ ಪರಿಚಯಿಸಲಾಯಿತು. ಟಿವಿಎಸ್‌ನಿಂದ ಬಂದ ಈ ಎಲೆಕ್ಟ್ರಿಕ್ ಸ್ಕೂಟರ್ ತುಂಬಾ ಚೆನ್ನಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ನೀವು 4.4 ಕಿ.ವ್ಯಾ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್ ಪಡೆಯುತ್ತೀರಿ. ಇದಲ್ಲದೆ ಈ ಸ್ಕೂಟರ್ ಒಂದೇ ಸಮಯದಲ್ಲಿ ಪೂರ್ಣ ಚಾರ್ಜಿಂಗ್‌ನಲ್ಲಿ ಸುಮಾರು 75 ಕಿ.ಮೀ. ವರೆಗೆ ಚಲಿಸಲಿದೆ ಎಂದು ಕಂಪನಿ ಮಾಹಿತಿ ಒದಗಿಸಿದೆ. ಅದರ ವೇಗದ ಬಗ್ಗೆ ಮಾತನಾಡುವುದಾದರೆ ಇದು ಗಂಟೆಗೆ 78 ಕಿ.ಮೀ ವೇಗವನ್ನು ಹೊಂದಿದೆ. ಇದಲ್ಲದೆ ಇದು 6 ಬಿಎಚ್‌ಪಿ ಶಕ್ತಿಯನ್ನು ಮತ್ತು 140 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 1.15 ಲಕ್ಷ ರೂಪಾಯಿಗಳು. 

6 /6

ಅಥರ್ ಎನರ್ಜಿ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಇವಿ ಸ್ಟಾರ್ಟ್ಅಪ್ಗಳಲ್ಲಿ ಒಂದಾಗಿದೆ. ಬ್ರ್ಯಾಂಡ್ ತನ್ನ ಸ್ಕೂಟರ್‌ಗಳನ್ನು ದಕ್ಷಿಣ ಭಾರತದ ನಗರಗಳಾದ ಬೆಂಗಳೂರು ಮತ್ತು ಚೆನ್ನೈಗಳಲ್ಲಿ ಮಾತ್ರ ಬಿಡುಗಡೆ ಮಾಡಿದೆ. ಆದರೆ ಶೀಘ್ರದಲ್ಲೇ ತನ್ನ ವಾಹನಗಳನ್ನು ದೆಹಲಿ ಮತ್ತು ಮುಂಬೈ ಸೇರಿದಂತೆ ಹಲವಾರು ನಗರಗಳಲ್ಲಿ ಬಿಡುಗಡೆ ಮಾಡಲು ಕಂಪನಿ ಯೋಜಿಸಿದೆ. ಅಥರ್ 450 ಎಕ್ಸ್ (Ather 450X) ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಕಂಪನಿ ಇತ್ತೀಚೆಗೆ 450 ಎಕ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಸಿಂಗಲ್ ಚಾರ್ಜ್‌ನಲ್ಲಿ 107 ಕಿ.ಮೀ ಚಾಲನಾ ಶ್ರೇಣಿಯನ್ನು ನೀಡುವ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರ್‌ನ ಬೆಲೆ 1 ಲಕ್ಷದಿಂದ ಪ್ರಾರಂಭವಾಗುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.

You May Like

Sponsored by Taboola