Actor Prabhas : ಡಾರ್ಲಿಂಗ್‌ ಪ್ರಭಾಸ್‌ ಬಗ್ಗೆ ನಿಮಗೆ ಗೊತ್ತಿರದ 9 ಇಂಟ್ರಸ್ಟಿಂಗ್‌ ವಿಚಾರಗಳು..!

1 /6

ಪ್ರಭಾಸ್ ನಿಜವಾದ ಹೆಸರು ವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು ಉಪ್ಪಲಪಾಟಿ. ಆದರೆ ಎಲ್ಲರೂ ಅವರನ್ನು ಪ್ರಭಾಸ್ ಅಂತ ಕರೀತಾರೆ. 44 ವರ್ಷಗಳ ಹಿಂದೆ ಇದೇ ದಿನ ಚಿತ್ರ ನಿರ್ಮಾಪಕ ಯು. ಸೂರ್ಯನಾರಾಯಣ ರಾಜು ಮತ್ತು ಶಿವಕುಮಾರಿ ದಂಪತಿಗೆ ಪ್ರಭಾಸ್ ಜನಿಸಿದರು. ಪ್ರಭಾಸ್‌ ಅವರಿಗೆ ಪ್ರಮೋದ್ ಉಪ್ಪಲಪಾಟಿ ಎಂಬ ಅಣ್ಣ ಮತ್ತು ಪ್ರಗತಿ ಎಂಬ ಅಕ್ಕ ಇದ್ದಾರೆ. ಮೂವರಲ್ಲಿ ಪ್ರಭಾಸ್ ಕಿರಿಯ. ಪ್ರಭಾಸ್ ದೊಡ್ಡಪ್ಪ ತೆಲುಗು ರೆಬೆಲ್ ಸ್ಟಾರ್ ನಟ ಕೃಷ್ಣಂ ರಾಜು ಎಂಬುದು ಎಲ್ಲರಿಗೂ ಗೊತ್ತೇ ಇದೆ. 

2 /6

ಭೀಮಾವರಂನ ಡಿಎನ್‌ಆರ್ ಶಾಲೆಯಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಪ್ರಭಾಸ್ ಹೈದರಾಬಾದ್‌ನ ಶ್ರೀ ಚೈತನ್ಯ ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿಯನ್ನು ಪಡೆದರು. ಬಾಹುಬಲಿ ಚಿತ್ರಕ್ಕಾಗಿ ಪ್ರಭಾಸ್ ಐದು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಸುಮಾರು 600 ದಿನ ಶೂಟಿಂಗ್‌ನಲ್ಲಿ ತೊಡಗಿದ್ದರು. ಪ್ರಭಾಸ್ ಬಗ್ಗೆ ಅನೇಕರಿಗೆ ತಿಳಿದಿಲ್ಲದ ಇನ್ನೊಂದು ವಿಷಯವೆಂದರೆ ಪ್ರಭಾಸ್ ಬಾಲಿವುಡ್ ಚಿತ್ರ 'ಆಕ್ಷನ್ ಜಾಕ್ಸನ್' ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

3 /6

ಪ್ರಭಾಸ್‌ಗೆ ಹೀರೋ ಆಗುವ ಯೋಚನೆ ಇರಲಿಲ್ಲ. ಕೇಟರಿಂಗ್ ವ್ಯವಹಾರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರಿಂದ ಹೊಟೇಲ್ ನಡೆಸಲು ಬಯಸಿದ್ದರು. ಈ ಕುರಿತು ಸ್ವತಃ ಅವರೇ ಹೇಳಿಕೊಂಡಿದ್ದರು. ಆಹಾರಪ್ರಿಯರಾಗಿರುವ ನಟ ಚಿಕನ್ ಬಿರಿಯಾನಿ ವೆರೈಟಿಗಳಿರುವ ಹೋಟೆಲ್ ತೆರೆಯಲು ಬಯಸಿದ್ದರು. ಏಕೆಂದರೆ ಪ್ರಭಾಸ್ ಅವರ ನೆಚ್ಚಿನ ಆಹಾರವೆಂದರೆ ಚಿಕನ್ ಬಿರಿಯಾನಿ ಮತ್ತು ಸಿಗಡಿ.  

4 /6

ಬಾಲಿವುಡ್ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರನ್ನು ಪ್ರಭಾಸ್ ತುಂಬಾ ಇಷ್ಟಪಡುತ್ತಾರೆ. ಅದಕ್ಕಾಗಿಯೇ ತ್ರೀ ಈಡಿಯಟ್ಸ್, ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾವನ್ನು ಸುಮಾರು 20 ಬಾರಿ ನೋಡಿದ್ದೇನೆ ಎಂದು ಪ್ರಭಾಸ್ ಹೇಳಿದ್ದಾರೆ.   

5 /6

ಪ್ರಭಾಸ್‌ಗೆ ವಾಲಿಬಾಲ್ ಆಟ ಅಂದ್ರೆ ತುಂಬಾ ಇಷ್ಟ. ಅದಕ್ಕಾಗಿಯೇ ಡಾರ್ಲಿಂಗ್‌ ತಮ್ಮ ಮನೆಯಲ್ಲಿ ವಾಲಿಬಾಲ್ ಅಂಕಣವನ್ನೂ ಸ್ಥಾಪಿಸಿದ್ದಾರೆ. ಪ್ರಭಾಸ್ ಅವರ ನೆಚ್ಚಿನ ತಾಣ ಯುರೋಪ್. ಚಿತ್ರದ ಶೂಟಿಂಗ್ ನಡುವೆ ಗ್ಯಾಪ್ ಇದ್ದರೆ ಪ್ರಭಾಸ್ ಯುರೋಪ್ ಗೆ ಹೋಗಲು ಇಷ್ಟಪಡುತ್ತಾರೆ.  

6 /6

ವರ್ಷಂ ಎಂಬ ಸೂಪರ್ ಹಿಟ್ ಚಿತ್ರ ನೀಡಿದ ನಿರ್ದೇಶಕ ಶೋಭನ್ ಹಠಾತ್ ನಿಧನರಾದಾಗ ಪ್ರಭಾಸ್ ಅವರ ಮಗನ ಜವಾಬ್ದಾರಿಯನ್ನು ಹೊತ್ತುಕೊಂಡರು. ಸಂತೋಷ್ ಶೋಭನ್ ಅವರ ಸಿನಿಮಾ ವೃತ್ತಿಜೀವನಕ್ಕೆ ಪ್ರಭಾಸ್ ಸಹಾಯ ಮಾಡುತ್ತಲೇ ಇದ್ದಾರೆ. ತಮ್ಮ ಸ್ನೇಹಿತರ ಜೊತೆಗೂಡಿ ಯುವಿ ಕ್ರಿಯೇಷನ್ ​​ಸಂಸ್ಥೆ ಸ್ಥಾಪಿಸಿ ಹಲವು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.