ಕೇಂದ್ರ ಸಚಿವ ಅನಂತ್ ಕುಮಾರ್ ಬಾಲ್ಯದಲ್ಲಿ ಹೇಗಿದ್ದರು ಗೊತ್ತಾ? In Pics...

ಕೇಂದ್ರ ಸಚಿವ ಹೆಚ್.ಎನ್.ಅನಂತ್ ಕುಮಾರ್ ಬಿಜೆಪಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕರ್ನಾಟಕದ ನಾಯಕರಲ್ಲಿ ಪ್ರಮುಖರು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಇವರು, ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದರು. ಆದರೆ ಅನಾರೋಗ್ಯದ ಕಾರಣದಿಂದಾಗಿ ನವೆಂಬರ್ 12, 2018ರಂದು ಕೊನೆಯುಸಿರೆಳೆದರು.

  • Nov 12, 2018, 18:54 PM IST

ಜುಲೈ 22, 1959ರಂದು ಹುಬ್ಬಳ್ಳಿಯ ರೈಲ್ವೆ ಕಾಲೋನಿಯಲ್ಲಿ ತಂದೆ ನಾರಾಯಣ ಶಾಸ್ತ್ರಿ, ತಾಯಿ ಗಿರಿಜಾ ಶಾಸ್ತ್ರಿಗೆ ಜನಿಸಿದ ಅನಂತಕುಮಾರ್ ಬಾಲ್ಯದಿಂದಲ್ಲೇ ಚೂಟಿಯ ಹುಡುಗನಾಗಿದ್ದವರು. ತಮ್ಮ ಹೈಸ್ಕೂಲ್ ಅಭ್ಯಾಸವನ್ನು ಲ್ಯಾಮಿಂಗಟನ್ ಸ್ಕೂಲ್ ನಲ್ಲಿ ಮುಗಿಸಿ ಮುಂದೆ ಪಿ.ಸಿ ಜಾಬಿನ್ ಕಾಲೇಜಿನಲ್ಲಿ ಪಿಯುಸಿ ಅಧ್ಯಯನ ಮಾಡಿದರು. ಬಳಿಕ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಲಾ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ, ಜೆಎಸ್ಎಸ್ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಮುಂದೆ ರಾಜಕಾರಣದಲ್ಲಿ ಆಸಕ್ತಿ ಹೊಂದಿ ರಾಜಕೀಯಕ್ಕೆ ಧುಮುಕಿದ ಅನಂತ್ ಕುಮಾರ್ ರಾಜ್ಯ, ರಾಷ್ಟ್ರ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದರು. ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರಲ್ಲಿ  ಒಬ್ಬರಾಗಿ ಪಕ್ಷ ಸಂಘಟನೆಗೆ ದುಡಿದವರು. ಬಡಜನರ ಏಳಿಗೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದು ಜನಮಾನಸದಲ್ಲಿ ಅಚ್ಚಳಿಯದೇ ಉಳಿದವರು ಅನಂತ್ ಕುಮಾರ್....
 

1 /7

ಬಾಲ್ಯದಲ್ಲಿ ಅನಂತ್ ಕುಮಾರ್

2 /7

ಶಾಲಾ ಬಾಲಕನಾಗಿ ಕಾರ್ಯಕ್ರಮದಲ್ಲಿ ಅನಂತ್ ಕುಮಾರ್

3 /7

ಕಾಲೇಜು ವಿದ್ಯಾರ್ಥಿಯಾಗಿ ಅನಂತ್ ಕುಮಾರ್

4 /7

ಬಿಜೆಪಿ ಪಕ್ಷ ಸಂಘಟನೆಯಲ್ಲಿ ನಿರತರಾಗಿರುವ ಅನಂತ್ ಕುಮಾರ್

5 /7

ಬಿಜೆಪಿ ಪಕ್ಷ ಸಂಘಟನೆಯಲ್ಲಿ ನಿರತರಾಗಿರುವ ಅನಂತ್ ಕುಮಾರ್

6 /7

ಹುಬ್ಬಳ್ಳಿಯ ರೈಲ್ವೆ ಕಾಲೋನಿಯಲ್ಲಿದ್ದ ಅನಂತ್ ಕುಮಾರ್ ಅವರ ಮನೆ.

7 /7

ಹುಬ್ಬಳ್ಳಿಯ ರೈಲ್ವೆ ಕಾಲೋನಿಯಲ್ಲಿ ತಾವು ಆಡಿ ಬೆಳೆದ ಮನೆಯ ಮುಂದೆ ಅನಂತ್ ಕುಮಾರ್. (ಎಲ್ಲಾ ಫೋಟೊಗಳನ್ನು ananth.org ವೆಬ್ಸೈಟ್ ನಿಂದ ತೆಗೆದುಕೊಳ್ಳಲಾಗಿದೆ).