Cars Offers: ಈ ಕಾರುಗಳ ಮೇಲೆ ಸಿಗಲಿದೆ 54,000 ರೂ. ಗಳ ರಿಯಾಯಿತಿ

Discount On Cars: ನೀವು ಕಾರು ಖರೀದಿಸುವ ಯೋಚನೆಯಲ್ಲಿದ್ದರೆ, ಜುಲೈ ಅಂದರೆ ಈ ತಿಂಗಳಲ್ಲಿ ಭಾರಿ ಲಾಭವಾಗಲಿದೆ. ಜುಲೈ ತಿಂಗಳಲ್ಲಿ ಮಾರುತಿ ಮತ್ತು ಹ್ಯುಂಡೈ ಸೇರಿದಂತೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳು ಸಹ ಭಾರಿ ರಿಯಾಯಿತಿಯನ್ನು ನೀಡುತ್ತಿವೆ. 

ನವದೆಹಲಿ : Discount On Cars: ನೀವು ಕಾರು ಖರೀದಿಸುವ ಯೋಚನೆಯಲ್ಲಿದ್ದರೆ, ಜುಲೈ ಅಂದರೆ ಈ ತಿಂಗಳಲ್ಲಿ ಭಾರಿ ಲಾಭವಾಗಲಿದೆ. ಜುಲೈ ತಿಂಗಳಲ್ಲಿ ಮಾರುತಿ ಮತ್ತು ಹ್ಯುಂಡೈ ಸೇರಿದಂತೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳು ಸಹ ಭಾರಿ ರಿಯಾಯಿತಿಯನ್ನು ನೀಡುತ್ತಿವೆ.  ಈ ತಿಂಗಳಲ್ಲಿ ಕಾರು ಖರೀದಿಸಿದರೆ ಸ್ವಿಫ್ಟ್‌ನಲ್ಲಿ ಗರಿಷ್ಠ 54,000 ರೂ.ಗಳಷ್ಟು  ಉಳಿತಾಯ ಮಾಡಬಹುದಾಗಿದೆ. ಇದಲ್ಲದೆ, ಆಲ್ಟೋ ಮತ್ತು ಎಸ್-ಪ್ರೆಸ್ಸೊದಲ್ಲಿ ಮಾರುತಿ ವ್ಯಾಗನ್ ಆರ್ ನಲ್ಲಿ 33,000 ರೂ.ಗಳವರೆಗೆ ರಿಯಾಯಿತಿ ಲಭ್ಯವಿದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

 ಈ  ಆಫರ್ ಅಡಿಯಲ್ಲಿ ಮಾರುತಿ ಆಲ್ಟೊದಲ್ಲಿ 25 ಸಾವಿರ ರೂ.ಗಳ ಆಫರ್ ನೀಡಲಾಗುತ್ತಿದೆ. ಎಕ್ಸ್ಚೇಂಜ್ ಬೋನಸ್  15,000 ರೂಗಳನ್ನು ನೀಡಲಾಗುತ್ತಿದೆ. ಇದಲ್ಲದೆ 3,000 ರೂ.ವರೆಗೆ ಕಾರ್ಪೊರೇಟ್ ರಿಯಾಯಿತಿ ಸಿಗಲಿದೆ. ಅಂದರೆ ಒಟ್ಟು 43,000 ರೂ.ಗಳವರೆಗೆ ಲಾಭವನ್ನು ಪಡೆಯಬಹುದು. ಈ ಪ್ರಯೋಜನಗಳು, ಆಲ್ಟೊದ ಎಲ್ಲಾ ಪೆಟ್ರೋಲ್ ವೆರಿಯೇಂಟ್ ಮೇಲೆ ಅನ್ವಯವಾಗಲಿದೆ.   

2 /4

ಕಾರು ಆಫರ್ ಅಡಿಯಲ್ಲಿ, ಮಾರುತಿ ಬಾಲೆನೊದಲ್ಲಿ (Maruti Baleno) 25 ಸಾವಿರ ರೂ.ಗಳ ರಿಯಾಯಿತಿ ಪಡೆಯಬಹುದು. ಇನ್ನು ಎಕ್ಸ್ಚೇಂಜ್ ಬೋನಸ್ ಆಗಿ 10,000 ರೂ.ಗಳ ರಿಯಾಯಿತಿ ಲಭ್ಯವಿರುತ್ತದೆ. ಈ  ಆಫರ್ ಅಡಿಯಲ್ಲಿ, ರೂ .5,000 ಕಾರ್ಪೊರೇಟ್ ರಿಯಾಯಿತಿ ಸಹ ಲಭ್ಯವಿರುತ್ತದೆ. ಅಂದರೆ, ಕಾರು ಖರೀದಿ ಮೇಲೆ 40,000 ರೂ.ಗಳ ಬಂಪರ್ ಲಾಭ ಸಿಗಲಿದೆ. 

3 /4

ಮಾರುತಿಯ ಎಸ್-ಪ್ರೆಸ್ಸೊದ ಮೇಲೆ ಕೂಡಾ ಈ ಆಫರ್‌ಗಳು ಲಭ್ಯವಿದೆ. ಇದರ ಮೇಲೆ ನಿಮಗೆ 25 ಸಾವಿರ ರೂ.ಗಳ ಕನ್ಸೂಮರ್ ಆಫರ್ ಜೊತೆಗೆ 15 ಸಾವಿರ ರೂ.ಗಳ ಎಕ್ಸ್ಚೇಂಜ್ ಬೋನಸ್ ಸಿಗುತ್ತದೆ. ಇದರೊಂದಿಗೆ 3,000 ರೂ. ಕಾರ್ಪೊರೇಟ್ ರಿಯಾಯಿತಿ  ಸಿಗಲಿದೆ. ಅಂದರೆ, ಒಟ್ಟು 43,000 ರೂ.ಗಳ ರಿಯಾಯಿತಿ.  ಈ ಆಫರ್ ಕೂಡಾ ಎಸ್-ಪ್ರೆಸ್ಸೊದ ಪೆಟ್ರೋಲ್  ವೆರಿಯೇಂಟ್  ಮೇಲೆ ಸಿಗಲಿದೆ. 

4 /4

ಮಾರುತಿಯ ಜೊತೆಗೆ, Hyundai i20 ಮೇಲೆ ಕೂಡ ರಿಯಾಯಿತಿ ಸಿಗಲಿದೆ. ಹ್ಯುಂಡೈ ಐ 20 ಮೇಲೆ  25 ಸಾವಿರ ರೂ.ಗಳ ಕ್ಯಾಶ್ ಆಫರ್ ಸಿಗಲಿದೆ.  10,000 ರೂ ವರೆಗೆ ಎಕ್ಸ್ಚೇಂಜ್ ಬೋನಸ್ ಕೂಡಾ. ಇದರೊಂದಿಗೆ 5 ಸಾವಿರ ರೂ. ಕಾರ್ಪೊರೇಟ್ ರಿಯಾಯಿತಿ ಸಿಗಲಿದೆ. ಈ ಕೊಡುಗೆ ಐಎಂಟಿ ಟರ್ಬೊ ರೂಪಾಂತರಗಳಲ್ಲಿ ಲಭ್ಯವಿದೆ. ಅದರ ಡೀಸೆಲ್ ರೂಪಾಂತರದಲ್ಲಿ ಎಕ್ಸ್ಚೇಂಜ್ ಆಫರ್ 10,000 ರೂ, ಕಾರ್ಪೊರೇಟ್ ಆಫರ್ 5,000 ರೂ.ಅಂದರೆ ಒಟ್ಟು 15 ಸಾವಿರ ರೂ.ಗಳ ರಿಯಾಯಿತಿ ಸಿಗಲಿದೆ.

You May Like

Sponsored by Taboola