Upcoming Smartphones In July: ಜುಲೈ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಿಡುಗಡೆಯಾಗುತ್ತಿವೆ 5 ಹೊಸ ಸ್ಮಾರ್ಟ್ ಫೋನ್ ಗಳು

Upcoming Smartphones In India In July 2022 - ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್ ನ ಹೊಸ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಲೇಟೆಸ್ಟ್ ವೈಶಿಷ್ಟ್ಯ ಗಳನ್ನು ಹೊಂದಿರುವ ತಮ್ಮ ನೆಚ್ಚಿನ ಬ್ರಾಂಡ್ ನ ಫೋನ್ ಬಿಡುಗಡೆಗೆ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿರುತ್ತಾರೆ. 

Upcoming Smartphones In India In July 2022 - ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್ ನ ಹೊಸ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಲೇಟೆಸ್ಟ್ ವೈಶಿಷ್ಟ್ಯ ಗಳನ್ನು ಹೊಂದಿರುವ ತಮ್ಮ ನೆಚ್ಚಿನ ಬ್ರಾಂಡ್ ನ ಫೋನ್ ಬಿಡುಗಡೆಗೆ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿರುತ್ತಾರೆ. ಇದೇ ಸರಣಿಯಲ್ಲಿ ಇಂದು ನಾವು ನಿಮಗೆ ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿರುವ ಹೊಚ್ಚ ಸ್ಮಾರ್ಟ್ ಫೋನ್ ಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. 

 

ಇದನ್ನೂ ಓದಿ-Oukitel WP19- ಫುಲ್ ಚಾರ್ಜ್‌ನಲ್ಲಿ 7 ದಿನಗಳವರೆಗೆ ಕಾರ್ಯನಿರ್ವಹಿಸುತ್ತಂತೆ ಈ ಸ್ಮಾರ್ಟ್‌ಫೋನ್

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /5

1. ನಥಿಂಗ್ ಫೋನ್ (1)- ನಥಿಂಗ್ ಫೋನ್ ತನ್ನ ಈ ಮೊಟ್ಟಮೊದಲ ಫೋನ್ ಅನ್ನು ಜುಲೈ 12ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಫೋನ್ ಅನ್ನು ನೀವು ಫ್ಲಿಪ್ ಕಾರ್ಟ್ ಮೂಲಕ ಖರೀದಿಸಬಹುದು. ಪಾರದರ್ಶಕವಾಗಿ ಕಾಣಿಸಿಕೊಳ್ಳುವ ಈ ಫೋನ್ ಸ್ನಾಪ್ ಡ್ರ್ಯಾಗನ್ 778+ ಪ್ರೊಸೆಸರ್ ಒಳಗೊಂಡಿದೆ. ಇದು ಡ್ಯೂಯೆಲ್ ರಿಯರ್ ಕ್ಯಾಮ್ ಸೆಟಪ್ ನೊಂದಿಗೆ ಬಿಡುಗಡೆಯಾಗಲಿದೆ. ಆದರೆ, ಈ ಫೋನ್ ಬೆಲೆಯನ್ನು ಇದುವರೆಗೆ ಪ್ರಕಟಿಸಲಾಗಿಲ್ಲ.

2 /5

2. ಶಾವೊಮಿ 12 ಅಲ್ಟ್ರಾ - ಶಾವೊಮಿ ಕಂಪನಿಯ ಈ ಲೇಟೆಸ್ಟ್ ಸ್ಮಾರ್ಟ್ ಫೋನ್ 120 W ವೇಗದ ಚಾರ್ಜಿಂಗ್ ಸಪೋರ್ಟ್ ಹಾಗೂ 5000mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಲಿದೆ. ಈ ಫೋನ್ ಬಿಡುಗಡೆಯ ಅಧಿಕೃತ ದಿನಾಂಕ ಇನ್ನು ಪ್ರಕಟಿಸಲಾಗಿಲ್ಲ. ಆದರೆ, ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿನ ವರದಿಗಳ ಪ್ರಕಾರ ಈ ಫೋನ್ ಜುಲೈ 5ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ Qualcomm Snapdragon 8+ Gen 1 ಆಧಾರಿತವಾಗಿರಲಿದೆ.

3 /5

3. ಒನ್ ಪ್ಲಸ್ ನೋರ್ಡ್-2ಟಿ: Mediatek Dimensity 1300 ಚಿಪ್ ಸೆಟ್ ಮೊಲಕ ಚಾಲಿತ ಈ 5ಜಿ ಸ್ಮಾರ್ಟ್ ಫೋನ್ 6.43 ಇಂಚಿನ ಎಮೊಲೆಡ್ ಡಿಸ್ಪ್ಲೇ, 50ಎಂಪಿ ಪ್ರೈಮರಿ ಸೆನ್ಸರ್ ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮ್ ಸೆಟಪ್ ಹಾಗೂ 4500 mAh ಬ್ಯಾಟರಿ ಮತ್ತು 80 W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸ್ಮಾರ್ಟ್ ಫೋನ್ ಕುರಿತು ಸೋರಿಕೆಯಾದ ಮಾಹಿತಿ ಪ್ರಕಾರ, ಜುಲೈ 1 ರಂದು ಈ ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. 

4 /5

4. ರಿಯಲ್ ಮೀ ಜಿಟಿ 2 ಮಾಸ್ತರ್ ಎಡಿಶನ್: 12ಜಿಬಿ RAM ಹೊಂದಿರುವ ಮತ್ತು 5000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯದ ಈ ಸ್ಮಾರ್ಟ್ ಫೋನ್ 150W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. Qualcomm Snapdragon 8+ Gen 1 ಚಿಪ್ ಸೆಟ್ ಮೇಲೆ ಕಾರ್ಯನಿರ್ವಹಿಸುವ ಈ ಫೋನ್ ನಲ್ಲಿ  50ಎಂಪಿ ಮೇನ್ ಸೆನ್ಸರ್ ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮರಾ ಸೆಟಪ್ ಇರುವ ಸಾಧ್ಯತೆ ಇದೆ. ಈ ಫೋನ್ ಲಾಂಚ್ ಡೇಟ್ ಕುರಿತು ಇದುವರೆಗೆ ಅಧಿಕೃತ ಮಾಹಿತಿ ಪ್ರಕಟಗೊಂಡಿಲ್ಲ. 

5 /5

5. ಆಸೂಸ್ ರೆಗ್ ಫೋನ್ 6: Qualcomm Snapdragon 8+ Gen 1 ಆಧಾರದ ಮೇಲೆ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ ಫೋನ್ ಡ್ಯುಯೆಲ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬಿಡುಗಡೆಯಾಗಲಿದೆ. ಪವರ್ಫುಲ್ ಪ್ರೋಸೆಸರ್ ಹೊಂದಿರುವ ಈ ಅದ್ಭುತ ಫೋನ್ ಹಲವು ಗೇಮಿಂಗ್ ಎಕ್ಸಸರೀಸ್ ನೊಂದಿಗೆ ಮಾರುಕಟ್ಟೆಯೇ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ. ಜುಲೈ 5 ರಂದು ಇದು ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.