ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ‘ರಿವಾಲ್ವರ್ ರಾಣಿ’ ಪ್ರಿಯಾಂಕಾ ಮಿಶ್ರಾ..!

ಉತ್ತರ ಪ್ರದೇಶದ ಪೊಲೀಸ್ ಕಾನ್ಸ್‌ ಟೇಬಲ್ ಆಗಿದ್ದ ಪ್ರಿಯಾಂಕಾ ಮಿಶ್ರಾ ‘ರಿವಾಲ್ವರ್ ರಾಣಿ’ ಎಂದೇ ಪ್ರಸಿದ್ಧರಾಗಿದ್ದಾರೆ.

ಉತ್ತರಪ್ರದೇಶದ ಪೊಲೀಸ್ ಕಾನ್ಸ್‌ ಟೇಬಲ್ ಪ್ರಿಯಾಂಕಾ ಮಿಶ್ರಾ ‘ರಿವಾಲ್ವರ್ ರಾಣಿ’ ಎಂದೇ ಪ್ರಸಿದ್ಧರಾಗಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಹೇಳಲಾಗಿದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಅವರ ಬಗೆಗಿನ ಚರ್ಚೆ ಇನ್ನೂ  ನಿಂತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದ ಪ್ರಿಯಾಂಕಾಗೆ 1.52 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಈ ಬಗ್ಗೆ ಪೊಲೀಸರು ಆಕೆಗೆ ನೋಟಿಸ್ ಕೂಡ ಜಾರಿಗೊಳಿಸಿದ್ದರು. ಪ್ರಿಯಾಂಕಾ ತಕ್ಷಣವೇ ದಂಡವನ್ನು ಪಾವತಿಸಿದರು. ಇದರೊಂದಿಗೆ ತಮ್ಮ ಬಳಿ ಇದ್ದ ಪೊಲೀಸ್ ಸಮವಸ್ತ್ರ ಮತ್ತು ಕಿಟ್ ಅನ್ನು ಕೂಡ ವಾಪಸ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೂಲತಃ ಕಾನ್ಪುರದ ನಿವಾಸಿಯಾದ ಪ್ರಿಯಾಂಕಾ ಮಿಶ್ರಾ ಅವರನ್ನು ಎಂಎಂ ಗೇಟ್‌ ಪೊಲೀಸ್ ಠಾಣೆಗೆ ನಿಯೋಜಿಸಲಾಗಿತ್ತು. ಆಗ ಅವರು ವಿಡಿಯೋವೊಂದನ್ನು ಮಾಡಿದ್ದರು. ಇದರಲ್ಲಿ ಅವರು ರಿವಾಲ್ವರ್‌ನೊಂದಿಗೆ ಕಾಣಿಸಿಕೊಂಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಸಾಕಷ್ಟು ಸದ್ದು ಮಾಡಿತ್ತು. ವಿಡಿಯೋ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಆಕೆ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡರು.

2 /5

ಯಾವಾಗ ಪ್ರಿಯಾಂಕಾ ಮಿಶ್ರಾ ಸಾಮಾಜಿಕ ಮಾಧ್ಯಮದಲ್ಲಿ ರಿವಾಲ್ವರ್‌ ಜೊತೆಗೆ ಕಾಣಿಸಿಕೊಂಡರೋ ಜನರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರಿಂದ ಬೇಸರಗೊಂಡ ಪ್ರಿಯಾಂಕಾ ಆಗಸ್ಟ್ 31ರಂದು ಆಗ್ರಾ ಎಸ್‌ಎಸ್‌ಪಿ ಜಿ.ಮುನಿರಾಜ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಕಳೆದ ಭಾನುವಾರ ಎಸ್‌ಎಸ್‌ಪಿ ರಾಜೀನಾಮೆಯನ್ನು ಅಂಗೀಕರಿಸಿದರು ಮತ್ತು ನಂತರ ತರಬೇತಿಗೆ ಖರ್ಚು ಮಾಡಿದ ಹಣವನ್ನು ಮರುಪಾವತಿಸುವಂತೆ ಪ್ರಿಯಾಂಕಾರಿಗೆ ನೋಟಿಸ್ ನೀಡಲಾಯಿತು.

3 /5

ತನಗೆ ನೋಟಿಸ್ ಬಂದ ತಕ್ಷಣ ಪ್ರಿಯಾಂಕಾ ಮಿಶ್ರಾ 1.52 ಲಕ್ಷ ರೂ. ದಂಡ ಮತ್ತು ಕಿಟ್ ಅನ್ನು ಪೊಲೀಸ್ ಇಲಾಖೆಗೆ ವಾಪಸ್ ಮಾಡಿದರು. ಕಾನ್ಸ್ಟೇಬಲ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಪ್ರಿಯಾಂಕಾ ಮಿಶ್ರಾ ಅವರ ಅನುಯಾಯಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ರಿವಾಲ್ವರ್‌ ಹಿಡಿದು ಪ್ರಿಯಾಂಕಾ ವಿಡಿಯೋ ಮಾಡಿದ್ದ ವೇಳೆ ಆಕೆಯ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಗಳ ಸಂಖ್ಯೆ ಕೇವಲ1,500 ಆಗಿತ್ತು. ಆದರೆ ಈಗ ಅವರಿಗೆ ಭಾರೀ ಪ್ರಮಾಣದಲ್ಲಿ ಫಾಲೋವರ್ಸ್ ಇದ್ದಾರೆ.

4 /5

ಈಗ ಪ್ರಿಯಾಂಕಾ ಅನುಯಾಯಿಗಳ ಸಂಖ್ಯೆ 50 ಸಾವಿರಕ್ಕೂ ಹೆಚ್ಚಾಗಿದೆ. ಹೀಗಾಗಿ ಕ್ರಮೇಣ ಪ್ರಿಯಾಂಕಾ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ ಆಗಿ ಬದಲಾಗುತ್ತಿದ್ದಾರೆ. ‘ರಿವಾಲ್ವರ್ ರಾಣಿ’ ತನ್ನ ವೈರಲ್ ವಿಡಿಯೋದಲ್ಲಿ, ‘ಹರಿಯಾಣ ಮತ್ತು ಪಂಜಾಬ್ ಯಾವುದಕ್ಕೂ ಕುಖ್ಯಾತವಲ್ಲ. ಬನ್ನಿ, ಕೆಲವೊಮ್ಮೆ ಉತ್ತರ ಪ್ರದೇಶ, ರಂಗಬಾಜಿ ಎಂದರೇನು, ನಾವು ನಿಮಗೆ ಹೇಳುತ್ತೇವೆ’ ಅಂತಾ ಹೇಳಿದ್ದರು. ಅಲ್ಲದೆ ಗೂಂಡಾಗಿರಿ ಮತ್ತು ಜಾಟ್ ಗುಜ್ಜಾರರ ಬಗ್ಗೆಯೂ ಮಾತನಾಡಿದ್ದರು.

5 /5

ಪ್ರಿಯಾಂಕಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವ ಅವರ ಹಲವಾರು ವಿಡಿಯೋಗಳಿವೆ. ಸಮವಸ್ತ್ರದಲ್ಲಿ ಇಂತಹ ವಿಡಿಯೋ ಮಾಡಿದ್ದರಿಂದಲೇ ಅವರು ಪೊಲೀಸ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರ ನಂತರ ಅವರನ್ನು ಪೊಲೀಸ್ ಇಲಾಖೆ ಬ್ಲಾಕ್ ಲಿಸ್ಟ್ ನಲ್ಲಿರಿಸಿತ್ತು. ನಂತರ ಆಗಸ್ಟ್ 31 ರಂದು ಅವರೇ ತಮ್ಮ ರಾಜೀನಾಮೆಯನ್ನು ಎಸ್‌ಎಸ್‌ಪಿಗೆ ಸಲ್ಲಿಸಿದರು.

You May Like

Sponsored by Taboola