How to turn grey Hair into black : ನಾವು ಇಂದು ಇಲ್ಲಿ ಹೇಳುವ ಉಪಾಯ ಬಹಳ ಸರಳವಾಗಿದೆ. ಖರ್ಚು ಕೂಡಾ ಕಡಿಮೆ. ಆದರೆ ಬಿಳಿ ಕೂದಲಿಗೆ ಗಾಢವಾದ ಕಪ್ಪು ಬನ್ನ ಸಿಗುವುದು ಮಾತ್ರ ಗ್ಯಾರಂಟಿ.
How to turn grey Hair into black : ಉದ್ದನೆಯ, ದಪ್ಪ ನುಣುಪಾದ ಕೂದಳು ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದರ ಜೊತೆ ಕೂದಲ ಬಣ್ಣವೂ ಗಾಢವಾಗಿದ್ದರೆ ಆ ಸೌಂದರ್ಯವನ್ನು ಕೇಳುವುದೇ ಬೇಡ. ಹೀಗೆ ಆರೋಗ್ಯವಂತ ಕಪ್ಪು ಕೂದಲು ಬೇಕು ಎಂದು ಬಯಸುವವರೇ ಎಲ್ಲಾ. ಆದರೆ ಎಷ್ಟು ಜನ ತಮ್ಮ ಆಸೆಯಂತೆ ಕೂದಲು ಹೊಂದಿರುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಳನಳಿಸುವ ಕಪ್ಪು ಕೂದಲು ಬೇಕು ಎನ್ನುವ ಕಾರಣಕ್ಕೆ ಎಲ್ಲ ರೀತಿಯ ಪ್ರಯೋಗಕ್ಕೂ ಇಳಿದು ಬಿಡುತ್ತೇವೆ. ವಿವಿಧ ರೀತಿಯ ಎಣ್ಣೆ, ಹೇರ್ ಮಾಸ್ಕ್, ಶಾಂಪೂ, ಕಂಡಿಶನರ್ ಹೀಗೆ ಜಾಹಿರಾತಿನಲ್ಲಿ ಬರುವ ಎಲ್ಲಾ ಉತ್ಪನ್ನಗಳ ಮೇಲೆ ಹಣ ಸುರಿದಾಗುತ್ತದೆ. ಆದರೆ ನಾವು ಬಯಸುವ ಫಲಿತಾಂಶ ಮಾತ್ರ ಸಿಗುವುದಿಲ್ಲ. ಆದರೆ ನಾವು ಇಂದು ಇಲ್ಲಿ ಹೇಳುವ ಉಪಾಯ ಬಹಳ ಸರಳವಾಗಿದೆ. ಖರ್ಚು ಕೂಡಾ ಕಡಿಮೆ.
ಪೇರಳೆ ಹಣ್ಣು ತಿನ್ನಲು ರುಚಿ, ಆರೋಗ್ಯಕ್ಕೂ ಹಿತ. ಪೇರಳೆ ಹಣ್ಣಿನ ಹಾಗೆ ಅದರ ಎಲೆಗಳಲ್ಲಿ ಕೂಡಾ ಅಪಾರ ಪ್ರಮಾಣದ ಪೋಷಕಾಂಶಗಳಿರುತ್ತವೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ.ಇದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
ಪೇರಳೆ ಎಲೆಗಳನ್ನು ಈ ರೀತಿ ಬಳಸುವ ಮೂಲಕ ಬಿಳಿ ಕೂದಲನ್ನು ಶಾಶ್ವತವಾಗಿ ಗಾಢ ಕಪ್ಪು ಬಣ್ಣಕ್ಕೆ ತಿರುಗಿಸಬಹುದು. ಮೊದಲೇ ಹೇಳಿದ ಹಾಗೆ ಇದಕ್ಕೆ ತಗಲುವ ಖರ್ಚೂ ಕಡಿಮೆ. ಅಡ್ಡ ಪರಿಣಾಮ ಬೀರುತ್ತದೆ ಎನ್ನುವ ಭಯವೂ ಇರುವುದಿಲ್ಲ.
ಇದಕ್ಕಾಗಿ 15 ರಿಂದ 20 ಪೇರಳೆ ಎಲೆಗಳನ್ನು ತೊಳೆದು ಒಣಗಿಸಿ. ಮಿಕ್ಸಿಯಲ್ಲಿ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ 30-40 ನಿಮಿಷಗಳ ಕಾಲ ಹಾಗೆ ಬಿಡಿ. ಒಣಗಿದ ಮೇಲ ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿ.
ಪೇರಳೆ ಎಲೆಗಳನ್ನು ತೊಳೆದು ಬ್ಲೆಂಡರ್‌ನಲ್ಲಿ ಹಾಕಿ ದಪ್ಪ ಪೇಸ್ಟ್ ತಯಾರಿಸಿ. ನಂತರ ಚಿಕ್ಕ ಈರುಳ್ಳಿ ರಸವನ್ನು ಪೇಸ್ ಗೆ ಸೇರಿಸಿಕೊಳ್ಳಿ. ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಕೂಡಾ ಹಾಕಿ ಮಿಶ್ರಣ ಮಾಡಿ.ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಕೂದಲನ್ನು ತೊಳೆಯಿರಿ.
ಮೊದಲು ಕೆಲವು ಪೇರಳೆ ಎಲೆಗಳನ್ನು ತೊಳೆಯಿರಿ. ಈಗ ಅವುಗಳನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಕುದಿಸಿ. 15 ರಿಂದ 20 ನಿಮಿಷಗಳ ಕಾಲ ಕುದಿಸಿದ ನಂತರ ಅದನ್ನು ತಣ್ಣಗಾಗಿಸಿ. ಅದು ತಣ್ಣಗಾದ ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಹಾಕಿಡಿ. ಇದನ್ನೂ ಸ್ಪ್ರೇ ಬಾಟಲಿಯ ಸಹಾಯದಿಂದ ಕೂದಲಿನ ಬೇರುಗಳಿಗೆ ಸಿಂಪಡಿಸಿ 10 ನಿಮಿಷಗಳ ಕಾಲ ಮಸಾಜ್ ಮಾಡಿ. ಕೆಲವು ಗಂಟೆಗಳ ನಂತರ ಕೂದಲನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.