ಕಾಂತಿಯುತ ತ್ವಚೆಗಾಗಿ ಅಡುಗೆ ಮನೆಯಲ್ಲಿಯೇ ಸಿಗುವ ಈ ಐದು ವಸ್ತುಗಳನ್ನು ಬಳಸಿ ನೋಡಿ

ಮನೆಯಲ್ಲಿ ಅದು ಕೂಡಾ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಬಳಸುವಂತಹ ವಸ್ತುಗಳನ್ನು ಲೇಪಿಸಿಕೊಳ್ಳುವ ಕೊಳ್ಳುವ ಮೂಲಕ ತ್ವಚೆಯ ಅಂದ ಹೆಚ್ಚಿಕೊಳ್ಳುವುದು ಸಾಧ್ಯವಾಗುತ್ತದೆ. 

ಬೆಂಗಳೂರು : ಸೂರ್ಯನ ಬೆಳಕು, ಮತ್ತು ಮಾಲಿನ್ಯಕ್ಕೆ ಹೆಚ್ಚು ತ್ವಚೆ ಒಡ್ಡುತ್ತಿದ್ದರೆ ಚರ್ಮದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.  ಒಣ ಚರ್ಮ, ತ್ವಚೆ ಕಪ್ಪಾಗುವುದು ಮತ್ತುನಿರ್ಜೀವ ತ್ವಚೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ತ್ವಚೆಯ ಸೌಂದರ್ಯವರ್ಧಕ ಉತ್ಪನ್ನಗಳಿಗೇನು ಕೊರತೆಯಿಲ್ಲ. ಆದರೆ ಈ ಉತ್ಪನ್ನಗಳಲ್ಲಿ ಬಹಳಷ್ಟು ರಾಸಾಯನಿಕಗಳನ್ನು ಬಳಸುತ್ತಾರೆ.  ಇದು ಬೇರೆ ಬೇರೆ ರೀತಿಯಲ್ಲಿ ಅಡ್ಡ ಪರಿಣಾಮಗಳನ್ನು ಬೀರುವ ಸಾಧ್ಯತೆ ಹೆಚ್ಚಿರುತ್ತದೆ.  ಆದರೆ ಮನೆಯಲ್ಲಿ ಅದು ಕೂಡಾ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಬಳಸುವಂತಹ ವಸ್ತುಗಳನ್ನು ಲೇಪಿಸಿಕೊಳ್ಳುವ ಕೊಳ್ಳುವ ಮೂಲಕ ತ್ವಚೆಯ ಅಂದ ಹೆಚ್ಚಿಕೊಳ್ಳುವುದು ಸಾಧ್ಯವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕಡಲೆ ಹಿಟ್ಟು ಚರ್ಮವನ್ನು ಸುಂದರವಾಗಿ ಮತ್ತು ಮೃದುವಾಗಿ ಮಾಡುತ್ತದೆ.   ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳು ಕಡಲೆ ಹಿತ್ತಿನಲ್ಲ್ಲಿ ಅಡಗಿರುತ್ತದೆ. ಇದರ ಪೇಸ್ಟ್ ಅನ್ನು ನಿಯಮಿತವಾಗಿ ಮುಖದ ಮೇಲೆ  ಹಚ್ಚುತ್ತಾ ಬಂದರೆ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ. 

2 /5

ಮೊಸರು ದೈಹಿಕ ಆರೋಗ್ಯದ ಜೊತೆಗೆ ತ್ವಚೆಯ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಬ್ಲೀಚಿಂಗ್ ಮತ್ತು   ಮಾಯಿಶ್ಚರೈಸಿಂಗ್ ಅಂಶಗಳು ಮೊಸರಿನಲ್ಲಿರುತ್ತವೆ. ಅದರಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಮೇಲಿನ ನಸುಕಂದು ಮಚ್ಚೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. 

3 /5

ಜೇನುತುಪ್ಪವು ಚರ್ಮವನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದು ಬ್ಲೀಚಿಂಗ್ ಮತ್ತು ಮಾಯಿಶ್ಚರೈಸಿಂಗ್   ಗುಣಲಕ್ಷಣಗಳನ್ನು ಹೊಂದಿದೆ. ಇದು ಕಲೆಗಳು, ಮೊಡವೆಗಳನ್ನು ಕಡಿಮೆ ಮಾಡುತ್ತದೆ. 

4 /5

ನಿಂಬೆಯು ಆಮ್ಲೀಯ ಗುಣಗಳನ್ನು ಹೊಂದಿದ್ದು ಅದು ಚರ್ಮವನ್ನು ಬ್ಲೀಚ್ ಮಾಡುತ್ತದೆ. ನಿಂಬೆ ಹಣ್ಣು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ.  ಇದು ಹೊಸ ಸೆಲ್ ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.  

5 /5

ಕಿತ್ತಳೆ ಹಣ್ಣಿನಲ್ಲಿ ಕೂಡಾ ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಇದು ಚರ್ಮದ ಆರೈಕೆಗೆ ಪ್ರಮುಖ ಪೋಷಕಾಂಶವಾಗಿದೆ. ಬ್ಲೀಚಿಂಗ್ ಗುಣಲಕ್ಷಣಗಳು ಈ ಹಣ್ಣಿನಲ್ಲಿ ಕಂಡುಬರುತ್ತವೆ. ನಿಯಮಿತವಾಗಿ ಕಿತ್ತಳೆ ತಿನ್ನುತ್ತಿದ್ದರೆ ಚರ್ಮವು ಮೃದುವಾಗಿ ಹೊಳೆಯುತ್ತದೆ.