ಶೀಘ್ರದಲ್ಲೇ 'ವಿಧಿ ಪರಿವರ್ತನೆ ರಾಜಯೋಗ' ನಿರ್ಮಾಣ, ಗುರು-ಶುಕ್ರರ ಅನುಗ್ರಹದಿಂದ 3 ರಾಶಿಗಳ ಜನರಿಗೆ ಅಪಾರ ಧನಲಾಭ!

Niyati Palat Rajyog: ವೈದಿಕ ಜೋತಿಷ್ಯ ಶಾಸ್ತ್ರದ ಶೀಘ್ರದಲ್ಲಿಯೇ ಪ್ರಕಾರ 'ವಿಧಿ ಪರಿವರ್ತನೆ ರಾಜಯೋಗ ಅಥವಾ ನಿಯತಿ ಪಲಟ್ ರಾಜಯೋಗ' ರೂಪುಗೊಳ್ಳುತ್ತಿದೆ. ಇದರಿಂದ ಮೂರು ರಾಶಿಗಳ ಸ್ಥಳೀಯರ ಜೀವನದಲ್ಲಿ ಅಪಾರ ಧನವೃಷ್ಟಿ ಸಂಭವಿಸುವ ಸಾಧ್ಯತೆ ಇದೆ. ಹಾಗಾದರೆ ಬನ್ನಿ ಯಾವ 3 ರಾಶಿಗಳ ಜನರಿಗೆ ವಿಧಿ ಪರಿವರ್ತನೆ ರಾಜಯೋಗ ಅಪಾರ ಧನಲಾಭ ನೀಡಲಿದೆ ಎಂಬುದನ್ನು ತಿಳಿದುಕೊಳ್ಳೋಣ. 
 

Niyati Palat Rajyog 2023: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ತಮ್ಮ ಉತ್ಕೃಷ್ಟ ಸ್ಥಾನಕ್ಕೆ ಸಾಗುತ್ತವೆ ಮತ್ತು ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳು ಕಂಡುಬರಲಿವೆ. ಜನವರಿ 17 ರಂದು ಶನಿದೇವನು ತನ್ನ ರಾಶಿಯನ್ನು ಬದಲಾಯಿಸಿದ್ದಾನೆ ಮತ್ತು ಗುರು ತನ್ನದೇ ಆದ ಮೀನ ರಾಶಿಯಲ್ಲಿ ಸಂಚರಿಸುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ.  ಇದಲ್ಲದೆ, ಫೆಬ್ರವರಿ ಆರಂಭದಲ್ಲಿ, ಶುಕ್ರ ಗ್ರಹ ತನ್ನ ಉತ್ಕೃಷ್ಟ ರಾಶಿಯಾಗಿರುವ ಮೀನ ರಾಶಿಯನ್ನು ಪ್ರವೇಶಿಸಿದೆ. ಇನ್ನೊಂದೆಡೆ, ಮಂಗಳ ಗ್ರಹವು ತನ್ನ ಸ್ನೇಹಿತ ಶುಕ್ರನ ರಾಶಿಯಲ್ಲಿ ಸಂಚರಿಸುತ್ತಿದ್ದು, ಇದರಿಂದ ಹಂಸ ಮತ್ತು ಮಾಲವ್ಯ ರಾಜಯೋಗಗಳು ರೂಪುಗೊಂಡಿವೆ. ಇದರೊಂದಿಗೆ, ಈ ರಾಜಯೋಗಗಳ ಕಾರಣ  ಅತಿ ಮುಖ್ಯವಾದ ವಿಧಿ ಬದಲಾವಣೆ ರಾಜಯೋಗ ರೂಪುಗೊಳ್ಳುತ್ತಿದೆ ಇದನ್ನು ನಿಯತಿ ಪಲಟ್ ರಾಜಯೋಗ ಎಂದೂ ಕೂಡ ಕರೆಯುತ್ತಾರೆ.  ಈ ರಾಜಯೋಗದ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಸ್ಥಳೀಯರ ಮೇಲೆ ಗೋಚರಿಸಲಿದೆ. ಆದರೆ 3 ರಾಶಿಗಳ ಜನರು ಮಾತ್ರ ಈ ಅವಧಿಯಲ್ಲಿ ಹಠಾತ್ ವಿತ್ತೀಯ ಲಾಭ ಮತ್ತು ವೃತ್ತಿ ಪ್ರಗತಿಯನ್ನು ಪಡೆಯುವ ಸಾಧ್ಯತೆ ಇದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Chanakya Niti: ಆರ್ಥಿಕ ಸಂಕಷ್ಟದ ಎಚ್ಚರಿಕೆ ನೀಡುತ್ತವೆ ಈ 5 ಸಂಕೇತಗಳು!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಕರ್ಕ ರಾಶಿ: ವಿಧಿಯ ವಿಪರ್ಯಾಸ ರಾಜಯೋಗದಿಂದ ಕರ್ಕ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಏಕೆಂದರೆ ಶುಕ್ರ ಗ್ರಹವು ನಿಮ್ಮ ಜಾತಕದಲ್ಲಿ  ಉತ್ಕೃಷ್ಟ ಸ್ಥಾನದಲ್ಲಿದ್ದು, ಗುರು ತನ್ನ ಸ್ವರಾಶಿಯಲ್ಲಿ ವಿರಾಜಮಾನನಾಗಿದ್ದಾನೆ.  ಹೀಗಾಗಿ ನೀವು ಈ ಸಮಯದಲ್ಲಿ ವಾಹನ ಮತ್ತು ಆಸ್ತಿಯನ್ನು ಪಡೆಯಬಹುದು. ಇದರೊಂದಿಗೆ, ನಿಮಗೆ ದೈಹಿಕ ಸುಖ ಸಂತೋಷ ಪ್ರಾಪ್ತಿಯಾಗಲಿದೆ. ಪಿತ್ರಾರ್ಜಿತ ಆಸ್ತಿ  ಆಸ್ತಿ ಸಿಗುವ ಸಾಧ್ಯತೆಗಳೂ ಇವೆ. ಇದಲ್ಲದೆ ಗುರುಗ್ರಹದ ಪ್ರಭಾವದಿಂದ ಧಾರ್ಮಿಕ ಹಾಗೂ ಶುಭ ಕಾರ್ಯಕ್ರಮಗಳಲ್ಲಿ ನೀವು ಭಾಗವಹಿಸಬಹುದು ಅಥವಾ ಪ್ರವಾಸಕ್ಕೆ ಹೋಗಬಹುದು. ಇದರೊಂದಿಗೆ ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲೂ ಉತ್ತಮ ಲಾಭ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಅಲ್ಲದೆ, ನಿಮ್ಮ ವ್ಯಾಪಾರವು ಹೋಟೆಲ್, ಆಸ್ತಿ ಮತ್ತು ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ್ದರೆ, ಈ ಅವಧಿಯಲ್ಲಿ ನೀವು ಉತ್ತಮ ಲಾಭವನ್ನು ಪಡೆಯಬಹುದು.

2 /3

ವೃಶ್ಚಿಕ ರಾಶಿ: ವಿಧಿ ಪರಿವರ್ತನೆ ರಾಜಯೋಗ ನಿಮಗೆ ಅನುಕೂಲಕರವೆಂದು ಸಾಬೀತುಪಡಿಸಬಹುದು. ಏಕೆಂದರೆ ಈ ಮೈತ್ರಿಯು ನಿಮ್ಮ ರಾಶಿಯಿಂದ ಪಂಚಮ ಭಾವದಲ್ಲಿ ರೂಪುಗೊಳ್ಳುತ್ತದೆ. ಇದು ಸಂತತಿ, ಪ್ರಗತಿ, ಪ್ರೇಮ ವಿವಾಹ ಮತ್ತು ಆಕಸ್ಮಿಕ ಧನಲಾಭದ ಸ್ಥಳವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಸಂಪತ್ತಿನ ಅಧಿಪತಿ ಗುರು, ನಿಮ್ಮ ರಾಶಿಯಿಂದ ಪಂಚಮ ಭಾವದಲ್ಲಿ ಕುಳಿತಿದ್ದಾನೆ. ಆದ್ದರಿಂದ, ಈ ಸಮಯದಲ್ಲಿ ನೀವು ಪ್ರೇಮ ವ್ಯವಹಾರಗಳಲ್ಲಿ ಯಶಸ್ಸನ್ನು ಪಡೆಯಬಹುದು. ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ಅಲ್ಲದೆ, ಉನ್ನತ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಬಹುದು. ಹಠಾತ್ ವಿತ್ತೀಯ ಲಾಭದ ಸಾಧ್ಯತೆಗಳೂ ಇವೆ. ಆದರೆ ಈ ಅವಧಿಯಲ್ಲಿ ನೀವು ನಿಮ್ಮ ಮಾತಿನ ಮೇಲೆ ಸ್ವಲ್ಪ ಸಂಯಮವನ್ನು ಇಟ್ಟುಕೊಳ್ಳಬೇಕು.  

3 /3

ಮಿಥುನ ರಾಶಿ: ನಿಮ್ಮ ಪಾಲಿಗೆ ನಿಯತಿ ಪಲಟ್ ರಾಜಯೋಗ ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಉತ್ತಮ ಸಾಬೀತಾಗುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಹಂಸ ಮತ್ತು ಮಾಲವ್ಯ ರಾಜಯೋಗಗಳು ದಶಮ ಭಾವದಲ್ಲಿ ರಚನೆಯಾಗುತ್ತಿವೆ. ಇದರೊಂದಿಗೆ ಶನಿದೇವನು ನಿಮ್ಮ ಅದೃಷ್ಟವನ್ನು ಬೆಳಗಲಿದ್ದಾನೆ. ಹೇಗಾಗಿ ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಸಹ ಸುಧಾರಿಸಲಿದೆ.. ಅಲ್ಲದೆ, ವ್ಯಾಪಾರ ಯೋಜನೆಗಳಲ್ಲಿ ನಿಮಗೆ ಲಾಭವಾಗಬಹುದು. ಮತ್ತೊಂದೆಡೆ, ಗುರು ಮತ್ತು ಶುಕ್ರನ ಪ್ರಭಾವದಿಂದ ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಬರಬಹುದು. ಉದ್ಯೋಗ ವೃತ್ತಿಯವರಿಗೆ ಬಡ್ತಿ ಸಿಗಬಹುದು. ಇದಲ್ಲದೆ ಸರ್ಕಾರದಲ್ಲಿ ಕೆಲಸ ಮಾಡುವವರು ಈ ಅವಧಿಯಲ್ಲಿ  ವಿಶೇಷ ಸವಲತ್ತುಗಳನ್ನು ಪಡೆಯಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)