Viral Photo: ಗೊಂಬೆ ಮದುವೆಯಾದ ಮಹಿಳೆಗೆ ಜನಿಸಿತು ಗಂಡುಮಗು..!

ಇತ್ತೀಚೆಗಷ್ಟೇ ಗೊಂಬೆಯೊಂದಿಗೆ ಮದುವೆಯಾಗಿ ಸುದ್ದಿಯಾಗಿದ್ದ ಮಹಿಳೆಗೆ ಇದೀಗ ಈಗ ಮಗುವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನವದೆಹಲಿ: ತನ್ನ ಮಗಳೊಂದಿಗೆ ಯಾರೂ ಡ್ಯಾನ್ಸ್ ಮಾಡಲು ಬರುತ್ತಿಲ್ಲವೆಂದು ತಾಯಿಯೊಬ್ಬಳು ಗೊಂಬೆ ಮಾಡಿಕೊಟ್ಟಿದ್ದಾಳೆ. ಆದರೆ, ಆ ಗೊಂಬೆ ಮೇಲೆ ಆ ಯುವತಿಗೆ ಪ್ರೀತಿಯಾಗಿ ಅದನ್ನೇ ಮದುವೆಯಾಗಿದ್ದಾಳೆ. ಗೊಂಬೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುದ್ದಿಯಾಗಿದ್ದ ಆ ಮಹಿಳೆಗೆ ಇದೀಗ ಮಗುವಾಗಿದೆ. ಅಚ್ಚರಿಯಾದರೂ ಇದು ನಿಜ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

37 ವರ್ಷದ ಮರಿವೊನ್ನೆ ರೋಚಾ ಮೊರೇಸ್ ತನ್ನ ತಾಯಿಗೆ ತಾನು ಒಂಟಿಯಾಗಿದ್ದೇನೆ, ನನ್ನೊಂದಿಗೆ ಯಾರೂ ಡ್ಯಾನ್ಸ್ ಮಾಡಲು ಬರುತ್ತಿಲ್ಲವೆಂದು ದುಃಖ ತೋಡಿಕೊಂಡಿದ್ದಳು. ಮಗಳ ನೋವು ಕಂಡು ಮರುಗಿದ ಆಕೆಯ ತಾಯಿ ಸೂಚಿ ಮತ್ತು ದಾರ ಬಳಸಿ ಒಂದು ಗೊಂಬೆಯನ್ನೇ ಸಿದ್ಧಪಡಿಸಿಬಿಟ್ಟಿದ್ದಾಳೆ. ಅದಕ್ಕೆ ಮಾರ್ಸೆಲ್ಲೊ ಎಂದು ಹೆಸರಿಟ್ಟಿದ್ದಾರೆ. ಗೊಂಬೆ ಜೊತೆ ಆಟವಾಡುತ್ತಿದ್ದ ಮಹಿಳೆಗೆ ಅದರ ಮೇಲೆ ಪ್ರೀತಿ ಉಕ್ಕಿ ಹರಿದಿದ್ದು, ಅದನ್ನೇ ಆಕೆ ಮದುವೆಯಾಗಿದ್ದಾಳೆ.  

2 /7

ಮದುವೆಯಾಗದೆಯೇ ಮಗುವಿಗೆ ಜನ್ಮ ನೀಡಲು ರೋಚಾ ಮೊರೇಸ್ ಬಯಸಿದ್ದರಂತೆ. ಅದರಂತೆ ಅವರು ರಿಯೊ ಡಿ ಜನೈರೊಗೆ ಹನಿಮೂನ್‌ಗೆ ಹೋಗುವ ಮೊದಲು 250 ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ಗೊಂಬೆ ಜೊತೆ ಮದುವೆಯಾಗಿದ್ದಾರೆ. ಈ ಮದುವೆ ಕಾರ್ಯಕ್ರಮದಲ್ಲಿ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ಭಾಗಿಯಾಗಿದ್ದರು.

3 /7

ಗೊಂಬೆಯೊಂದಿಗೆ ಜೀವನ ನಡೆಸತ್ತಿದ್ದ ರೋಚಾ ಮೊರೇಸ್ ಅದರೊಂದಿಗೆ ಸಂಸಾರ ಸಹ ಮಾಡಿದ್ದಾಳಂತೆ. ತಾನು ಗೊಂಬೆ ಜೊತೆಗೆ ಪ್ರೀತಿಯಲ್ಲಿ ಬಿದ್ದು ಗರ್ಭಿಣಿಯಾದೆ ಎಂದು ಹೇಳಿಕೊಂಡಿದ್ದಾರೆ. ಇದಷ್ಟೇ ಅಲ್ಲದೆ ಗರ್ಭಾವಸ್ಥೆಯಲ್ಲಿ ತಾನು ಎಲ್ಲಾ ತೊಂದರೆಗಳನ್ನು ಅನುಭವಿಸಿದ್ದೇನೆ ಎಂದು ಆಕೆ ಹೇಳಿದ್ದಾರೆ.   

4 /7

ಮನೆಯಲ್ಲಿ 35 ನಿಮಿಷಗಳ ಶ್ರಮದ ನಂತರ ವೈದ್ಯರು ಮತ್ತು ನರ್ಸ್‌ಗಳ ಸಹಕಾರದಿಂದ ತಾನು ಹೊಸ ರಾಗ್‌ಡಾಲ್‌ಗೆ ಜನ್ಮ ನೀಡಿದ್ದೇನೆ ಎಂದು ಆಕೆ ಹೇಳಿದ್ದಾರೆ. ಇದನ್ನು 200 ಜನರು ಆನ್‌ಲೈನ್‌ನಲ್ಲಿ ಲೈವ್‌ಸ್ಟ್ರೀಮ್ ಆಗಿ ವೀಕ್ಷಿಸಿದ್ದಾರಂತೆ.

5 /7

ರೋಚಾ ಮೊರೇಸ್ ಹೇಳಿರುವ ಪ್ರಕಾರ ಅವರ ವೈವಾಹಿಕ ಜೀವನ ಅದ್ಭುತವಾಗಿದೆಯಂತೆ. ‘ಇದು ನನಗೆ ಅದ್ಭುತವಾದ ದಿನವಾಗಿದೆ, ಬಹಳ ಮುಖ್ಯ ಮತ್ತು ತುಂಬಾ ಭಾವನಾತ್ಮಕ ದಿನವಿದು. ನನ್ನ ಜೀವನದಲ್ಲಿ ನಾನು ಯಾವಾಗಲೂ ಬಯಸಿದ ಒಬ್ಬ ವ್ಯಕ್ತಿ(ಗೊಂಬೆ)ಯೊಂದಿಗೆ ನಾನು ಮದುವೆಯಾಗಿದ್ದಾನೆ. ಅವರೊಂದಿಗಿನ ನನ್ನ ವೈವಾಹಿಕ ಜೀವನ ಅದ್ಭುತವಾಗಿದೆ. ನನ್ನ ಪತಿ ನನ್ನೊಂದಿಗೆ ಎಂದಿಗೂ ಜಗಳವಾಡುವುದಿಲ್ಲ, ವಾದ ಮಾಡುವುದಿಲ್ಲ ಮತ್ತು ಆತನ ನನ್ನನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಾನೆ’ ಎಂದು ಹೇಳಿಕೊಂಡಿದ್ದಾರೆ.   

6 /7

ತನ್ನ ಪ್ರೇಮ ಜೀವನದ ಬಗ್ಗೆ ಮಾತನಾಡಿದ ರೋಚಾ ಮೊರೇಸ್, ‘ನನ್ನ ತಾಯಿ ಮಾರ್ಸೆಲೊರನ್ನು ಮೊದಲ ಬಾರಿಗೆ ಪರಿಚಯಿಸಿದಾಗ, ನಾನು ಆತನ ಪ್ರೀತಿಯಲ್ಲಿ ಬಲೆಗೆ ಸಿಲುಕಿದೆ. ಇದು ಲವ್‌ @ ಫಸ್ಟ್‌ ಸೈಟ್’ ಅಂತಾ ಅವರು ಹೇಳಿದ್ದಾರೆ.

7 /7

ತಾನು ತಾಯಿಯಾಗಿರುವ ಬಗ್ಗೆ ಮಾತನಾಡಿರುವ ರೋಚಾ ಮೊರೇಸ್, ‘ನಿಜ ನಾನು ಮಾರ್ಸೆಲೋ ಜೊತೆಗೆ ಸಂಸಾರ ನಡೆಸಿ ಗರ್ಭಿಣಿಯಾಗಿದ್ದೇನೆ. ಆತನೊಂದಿಗಿನ ಸುಂದರ ಸಂಸಾರದಿಂದ ನನಗೆ ಸುಂದರ ಗಂಡು ಜನಿಸಿದೆ. ನಾನು ಗರ್ಭಿಣಿಯಾಗಿರುವ ಬಗ್ಗೆ ಸತಃ ನನಗೆ ನಂಬಲಾಗಿರಲಿಲ್ಲ’ವೆಂದು ಹೇಳಿಕೊಂಡಿದ್ದಾರೆ.