ಭಾರತ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಇತ್ತೀಚೆಗೆಯಷ್ಟೇ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಿಂದ ನಿವೃತ್ತಿ ಪಡೆದಿದ್ದಾರೆ.
ಟೀಂ ಇಂಡಿಯಾ ಸುಮಾರು 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದ್ದು, ಈ ವಿಜಯದ ಬಳಿಕ ಬಹಿರಂಗವಾಗಿ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ.
ಅಂದಹಾಗೆ ಟೀಂ ಇಂಡಿಯಾದಲ್ಲಿ ಫಿಟ್ನೆಸ್’ಗೆ ರೋಲ್ ಮಾಡೆಲ್ ರೀತಿ ಇರುವ ಕೊಹ್ಲಿ ತಮ್ಮ ಆಹಾರದ ಬಗ್ಗೆ ಕಟ್ಟುನಿಟ್ಟಿನ ಡಯೆಟ್ ಫಾಲೋ ಮಾಡುತ್ತಾರೆ.
ಇನ್ನು ವಿರಾಟ್ ನಾನ್ ವೆಜ್ ತಿನ್ನಲ್ಲ. ಇದಕ್ಕೆ ಕಾರಣ ಅವರಿಗಿರುವ ಆರೋಗ್ಯ ಸಮಸ್ಯೆ. ಈ ಬಗ್ಗೆ ವಿರಾಟ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಮಾಂಸಾಹಾರ ತ್ಯಜಿಸುವುದು ಫಿಟ್‌ನೆಸ್ ಸುಧಾರಿಸಲು ಹೇಗೆ ಸಹಾಯ ಮಾಡಿದೆ ಎಂದು ಸ್ವತಃ ವಿರಾಟ್ ಹಲವು ಬಾರಿ ಮಾತನಾಡಿದ್ದಾರೆ.
“ನನಗೆ ಗರ್ಭಕಂಠದ ಬೆನ್ನೆಲುಬಿನ ಸಮಸ್ಯೆಯಿದೆ. ಇದೇ ಕಾರಣಕ್ಕೆ ನಾನ್ ವೆಜ್ ತ್ಯಜಿಸಿರುವೆ” ಎಂದು ಕೆಲ ವರ್ಷಗಳ ಹಿಂದೆ ವಿರಾಟ್ ಬಹಿರಂಗಪಡಿಸಿದ್ದರು. “ದೇಹವು ಹೆಚ್ಚು ಯೂರಿಕ್ ಆಮ್ಲವನ್ನು ಉತ್ಪಾದಿಸುತ್ತಿದ್ದರಿಂದ, ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿತ್ತು. ಅದರಲ್ಲಿ ಇದು ದೊಡ್ಡ ಬದಲಾವಣೆ” ಎಂದು ಹೇಳಿಕೊಂಡಿದ್ದಾರೆ.
Next Gallery