ಚಂದ್ರ-ಶನಿ ಸಂಯೋಗದಿಂದ ವಿಷ ಯೋಗ ಸೃಷ್ಟಿ: ಈ ಮೂರು ರಾಶಿಯವರು ಜಾಗರೂಕರಗಿರಿ

                       

Visha Yoga: ಮೂರು ದಶಕಗಳ ಬಳಿಕ ಶನಿ ಮಹಾತ್ಮ ಈ ವರ್ಷ ಜನವರಿ ತಿಂಗಳಿನಲ್ಲಿ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇದೀಗ 15 ಏಪ್ರಿಲ್ 2023 ರಂದು ಚಂದ್ರನು ಕುಂಭ ರಾಶಿಯಲ್ಲಿ ಸಾಗುವುದರಿಂದ ಕುಂಭ ರಾಶಿಯಲ್ಲಿ ವಿಷ ಯೋಗವು ರೂಪುಗೊಳ್ಳುತ್ತದೆ. ಚಂದ್ರನು ಒಂದು ರಾಶಿಯಲ್ಲಿ ಎರಡೂವರೆ ದಿನಗಳ ಕಾಲ ಇದ್ದು ನಂತರ ಇನ್ನೊಂದು ರಾಶಿಗೆ ಸಾಗುತ್ತಾನೆ. ಹಾಗಾಗಿ, ಕುಂಭ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ವಿಷ ಯೋಗವು ಎರಡೂವರೆ ದಿನಗಳವರೆ ಕೆಲವು ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಶನಿಯು 2023 ರ ಜನವರಿ 17 ರಿಂದ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದೀಗ 15 ಏಪ್ರಿಲ್ 2023 ರಂದು ಚಂದ್ರನು ಸಹ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದಾಗಿ ಕುಂಭ ರಾಶಿಯಲ್ಲಿ ಚಂದ್ರ-ಶನಿ ಯುತಿಯಿಂದ ವಿಷ ಯೋಗ ನಿರ್ಮಾಣಗೊಳ್ಳಲಿದೆ. ಈ ಸಮಯದಲ್ಲಿ ಮೂರು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ... 

2 /4

ಕುಂಭ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ವಿಷ ಯೋಗವು ಕರ್ಕಾಟಕ ರಾಶಿಯವರಿಗೆ ನಾನಾ ರೀತಿಯ ತೊಂದರೆಗಳನ್ನು ನೀಡಬಹುದು. ಈ ಸಮಯದಲ್ಲಿ ಈ ರಾಶಿಯವರ ಕುಟುಂಬ ಸದಸ್ಯರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಹೂಡಿಕೆಗೆ ಇದು ಸೂಕ್ತ ಸಮಯವಲ್ಲ.

3 /4

ಚಂದ್ರ-ಶನಿ ಯುತಿಯಿಂದ ನಿರ್ಮಾಣಗೊಳ್ಳಲಿರುವ ವಿಷ ಯೋಗವು ಕನ್ಯಾ ರಾಶಿಯವರಿಗೆ ಕೋರ್ಟು-ಕಚೇರಿ ಕೆಲಸಗಳಲ್ಲಿ ಹಿನ್ನಡೆಯನ್ನು ಉಂಟು ಮಾಡಲಿದೆ. ಮಾತ್ರವಲ್ಲ, ಈ ಸಮಯದಲ್ಲಿ ದಾಂಪತ್ಯ ಜೀವನದಲ್ಲಿಯೂ ಬಿರುಕು ಮೂಡಬಹುದು ಎಚ್ಚರ. 

4 /4

ಮೊದಲೇ ಶನಿ ಧೈಯಾ ಪ್ರಭಾವದಿಂದ ಬಳಲುತ್ತಿರುವ ವೃಶ್ಚಿಕ ರಾಶಿಯವರಿಗೆ ಈ ವಿಷ ಯೋಗವು ಮಾನಸಿಕ ಒತ್ತಡವನ್ನು ಹೆಚ್ಚಿಸಲಿದೆ. ಈ ಎರಡೂವರೆ ದಿನಗಳಲ್ಲಿ ನೀವು ಕೆಲವು ಅಶುಭ ಸುದ್ದಿಗಳನ್ನು ಸಹ ಕೇಳಬಹುದು. ಇದಲ್ಲದೆ, ಈ ಸಮಯದಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಅಷ್ಟು ಉತ್ತಮವಾಗಿರುವುದಿಲ್ಲ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.