ರಾತ್ರಿ ಮಲಗುವ ಮುನ್ನ ಕಾಲು ತೊಳೆಯುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ

                      

Washing feet before bed health benefits: ಬೆಳಿಗ್ಗೆ ಎದ್ದಾಗಿನಿಂದ ರಾತ್ರಿಯವರೆಗೆ ಬಿಡುವಿಲ್ಲದ ಕೆಲಸದಿಂದಾಗಿ ರಾತ್ರಿ ವೇಳೆ ಸದ್ಯ ಮಲಗಿದರೆ ಸಾಕಪ್ಪ ಎಂಬಂತಿರುತ್ತದೆ. ಆದರೆ, ನೀವು ಮಲಗುವ ಮುನ್ನ ಒಂದೆರಡು ನಿಮಿಷ ಸಮಯ ತೆಗೆದುಕೊಂಡು ಕೈ-ಕಾಲುಗಳನ್ನು ತೊಳೆದು ನಂತರ ಮಲಗಿ. ವೈದ್ಯರ ಪ್ರಕಾರ, ನಿತ್ಯ ರಾತ್ರಿ ಮಲಗುವ ಮೊದಲು ಪಾದಗಳನ್ನು ತೊಳೆದುಕೊಂಡು ಶುಚಿಯಾಗಿ ಮಲಗುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳು ಲಭ್ಯವಾಗವಲಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಆರೋಗ್ಯವಂತರಾಗಿರಲು ಉತ್ತಮ ಆಹಾರದ ಜೊತೆಗೆ, ಉತ್ತಮ ನಿದ್ರೆಯೂ ಕೂಡ ಬಹಳ ಮುಖ್ಯ. ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ತೊಳೆದು ನಂತರ ಮಲಗುವುದರಿಂದ ಉತ್ತಮ ನಿದ್ರೆ ಬರುತ್ತದೆ.   

2 /5

ರಾತ್ರಿ ಮಲಗುವ ಮೊದಲು ನಿಮ್ಮ ಪಾದಗಳನ್ನು ತೊಳೆದು ಸ್ವಚ್ಛಗೊಳಿಸುವುದು ನಿಮ್ಮ ಮಾನಸಿಕ ಆರೋಗ್ಯದ ಮೇಲೂ ಒಳ್ಳೆಯ ಪರಿಣಾಮ ಬೀರುತ್ತದೆ. ಇದರಿಂದ ಆತಂಕ, ಖಿನ್ನತೆಯಂತಹ ಸಮಸ್ಯೆಗಳಿಂದ ದೂರ ಉಳಿಯಬಹುದು.

3 /5

ದಿನವಿಡೀ ಶೂ ಧರಿಸುವುದರಿಂದ ಪಾದಗಳು ಬೆವರುವುದು ಸಾಮಾನ್ಯ. ಇದರಿಂದಾಗಿ ಪಾದಗಳಲ್ಲಿ ಬ್ಯಾಕ್ಟೀರಿಯಾಗಳು ಶೇಖರಗೊಳ್ಳಬಹುದು. ಇದನ್ನು ತಪ್ಪಿಸಲು ತಪ್ಪದೇ ಮಲಗುವ ಮೊದಲು ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಿ. 

4 /5

ಹೆಚ್ಚಿನ ಜನರು ದಿನವಿಡೀ ಸಾಕ್ಸ್ ಧರಿಸುತ್ತಾರೆ. ಇದರಿಂದ ಪಾದಗಳಲ್ಲಿ ವಾಸನೆ ಬರುವುದು ಸಹಜವೇ. ಇದು ಕೆಲವೊಮ್ಮೆ ಮುಜುಗರಕ್ಕೂ ಕಾರಣವಾಗಬಹುದು. ಜೊತೆಗೆ ನಿಮ್ಮ ಜೊತೆಗಿರುವವರಿಗೂ ಕಿರಿಕಿರಿ ಉಂಟುಮಾಡಬಹುದು. ಇದನ್ನು ತಪ್ಪಿಸಲು ನಿತ್ಯ ಮಲಗುವ ಮುನ್ನ ತಪ್ಪದೇ ನಿಮ್ಮ ಕಾಲುಗಳನ್ನು ತೊಳೆಯಿರಿ.  

5 /5

ಪ್ರತಿದಿನ ರಾತ್ರಿ ಮಲಗುವ ಮುನ್ನ ಕಾಲುಗಳನ್ನು ಸ್ವಚ್ಛಗೊಳಿಸುವುದರಿಂದ ಮೃದುವಾದ, ಕೋಮಲವಾದ ಪಾದಗಳು ನಿಮ್ಮದಾಗುತ್ತವೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.