Kangana Ranaut : ನಟಿ ಕಂಗನಾ ರಾವತ್ ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ.. ಸಧ್ಯ ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನು ಸಂಸದೆಯಾಗಿರುವ ಕಂಗನಾಗೆ ಸರ್ಕಾರ ನೀಡುವ ಸವಲತ್ತುಗಳು ಮತ್ತು ಮಾಸಿಕ ವೇತನ ಎಷ್ಟು ಅಂತ ನಿಮ್ಗೆ ಗೊತ್ತೆ..!
ಭಾರತೀಯ ಲೋಕಸಭೆಯಲ್ಲಿ ಸಂಸದರ ಮೂಲ ವೇತನವು ತಿಂಗಳಿಗೆ 1 ಲಕ್ಷ ರೂ. 2018 ರಲ್ಲಿ ವೇತನ ಹೆಚ್ಚಳದ ನಂತರ ಈ ಮೊತ್ತವನ್ನು ನಿಗದಿಪಡಿಸಲಾಗಿದೆ. ಸಂಸದೆಗೆ ಕಚೇರಿಗಳನ್ನು ನಿರ್ವಹಿಸಲು ಮತ್ತು ಕ್ಷೇತ್ರಕ್ಕೆ ಪ್ರಯಾಣಿಸಲು ತಿಂಗಳಿಗೆ 70,000 ರೂ. ನೀಡಲಾಗುತ್ತದೆ.
ಕಚೇರಿ ವೆಚ್ಚಕ್ಕಾಗಿ ತಿಂಗಳಿಗೆ 60 ಸಾವಿರ ರೂ. ಇದು ಪೆನ್ ಮತ್ತು ಪೆನ್ಸಿಲ್ ಸೇರಿದಂತೆ ದೂರಸಂಪರ್ಕಕ್ಕೆ ಭತ್ಯೆ, ಸಿಬ್ಬಂದಿಯ ವೇತನ ಮತ್ತು ಇತರ ವೆಚ್ಚಗಳನ್ನು ಒಳಗೊಂಡಿದೆ.
ಎಲ್ಲಾ ಸಂಸದರು ಮತ್ತು ಅವರ ಕುಟುಂಬಗಳು ವರ್ಷಕ್ಕೆ 34 ಬಾರಿ ಉಚಿತ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಬಹುದು. ತಮ್ಮ ಸ್ವಂತ ಕೆಲಸ ಮತ್ತು ವೈಯಕ್ತಿಕ ಉದ್ದೇಶಗಳಿಗಾಗಿ ಉಚಿತವಾಗಿ ಪ್ರಥಮ ದರ್ಜೆ ರೈಲಿನಲ್ಲಿ ಪ್ರಯಾಣ ಮಾಡಬಹುದು.
ಸಂಸದರಿಗೆ ಹಿರಿತನದ ಆಧಾರದ ಮೇಲೆ ಅವರ ಸ್ವಂತ ಬಂಗಲೆಗಳು, ಫ್ಲ್ಯಾಟ್‌ಗಳು ಅಥವಾ ಕೊಠಡಿಗಳನ್ನು ಬಾಡಿಗೆ ರಹಿತವಾಗಿ ಒದಗಿಸಲಾಗುವುದು. ಅಲ್ಲದೆ ಸಂಸದರು ಮತ್ತು ಅವರ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಅಡಿಯಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತದೆ.
ಪ್ರತಿ ಸಂಸದರು ವಾರ್ಷಿಕವಾಗಿ 1,50,000 ಉಚಿತ ಫೋನ್ ಕರೆಗಳನ್ನು ಪಡೆಯುತ್ತಾರೆ. ಅವರ ಮನೆ ಮತ್ತು ಕಚೇರಿಗಳಲ್ಲಿ ಉಚಿತ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕಗಳನ್ನು ಒದಗಿಸಲಾಗುತ್ತದೆ. ಅವರಿಗೆ ವರ್ಷಕ್ಕೆ 50,000 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಮತ್ತು ನೀರನ್ನು ಪೂರೈಸಲಾಗುತ್ತದೆ.
ಈ ಎಲ್ಲಾ ಸೌಲಭ್ಯಗಳನ್ನು ನಟಿ ಹಾಗೂ ಸಂಸದೆ ಕಂಗನಾ ಪಡೆಯಲಿದ್ದಾರೆ. ಸರ್ಕಾರದಿಂದ ಇಷ್ಟೆಲ್ಲಾ ರಿಯಾಯ್ತಿ ಪಡೆದ ಕಂಗನಾ ರಾಜಕೀಯ ಜೀವನ ಹೇಗಿರಲಿದೆ ಎಂಬುದನ್ನು ಮಂದಿನ ದಿನದಲ್ಲಿ ಕಾದು ನೋಡಬೇಕು.