Facebook, twiteer ನಿದ್ದೆಗೆಡಿಸುತ್ತಿದೆ Clubhouse ; ಈ ಆಪ್ ನ ವಿಶೇಷತೆ ತಿಳಿಯಿರಿ

ಸಾಮಾಜಿಕ ಜಾಲತಾಣಗಳ ದಿಗ್ಗಜ್ಜರಾದ ಫೇಸ್ ಬುಕ್, ಟ್ವಿಟರ್ ನ ನಿದ್ದೆಗೆಡಿಸುತ್ತಿದೆ ಕ್ಲಬ್ ಹೌಸ್ .. ಇದ್ದಕ್ಕಿದ್ದಂತೆ ಕ್ಲಬ್ ಹೌಸ್ ಜನಪ್ರಿಯತೆ ಹೇಗೆ ಎನ್ನುವುದೇ ಸದ್ಯಕ್ಕೆ ಚರ್ಚೆಯ ವಿಷಯ..
 

ನವದೆಹಲಿ : ಕಳೆದ ಕೆಲ ದಿನಗಳಿಂದ ಕ್ಲಬ್ ಹೌಸ್ ಆಪ್ (Club house App) ಬಗ್ಗೆ ಬಹಳ ಚರ್ಚೆ ಕೇಳಿ ಬರುತ್ತಿದೆ. ಈ ಆಪ್ ಅಲ್ಪ ಅವಧಿಯಲ್ಲೇ ಬಹಳ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.  ಕ್ಲಬ್ ಹೌಸ್ ಅಪ್ ಜನಪ್ರಿಯತೆ ಸಾಮಾಜಿಕ ಮಾಧ್ಯಮಗಳ ದಿಗ್ಗಜರಾದ ಫೇಸ್ ಬುಕ್ (Facebook) ಟ್ವಿಟರ್ (twitter) ನಿದ್ದೆಗೆಡಿಸಿದೆ. ಇಷ್ಟಕ್ಕೂ ಕ್ಲಬ್ ಹೌಸ್ ಆಪ್ ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣ ಏನು ಅನ್ನೋದನ್ನ  ತಿಳಿದುಕೊಳ್ಳೋಣ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಏನಿದು ಕ್ಲಬ್ ಹೌಸ್ ಆಪ್ ? : Clubhouse ಅನ್ನು ಕಳೆದ ವರ್ಷ ಏಪ್ರಿಲ್ ನಲ್ಲಿ ಲಾಂಚ್ ಮಾಡಲಾಗಿತ್ತು. ಇದೊಂದು ಸಾಮಾಜಿಕ ಮಾಧ್ಯಮ ಆಪ್ ಆಗಿದ್ದರೂ ಇತರ  ಆಪ್ ಗಳಿಗಿಂತ ಭಿನ್ನವಾಗಿದೆ. ಈ ಆಪ್ ಮೂಲಕ ಬರೀ ವಾಯ್ಸ್ ಮೂಲಕವೇ ಪೋಸ್ಟ್ ಮಾಡುವುದು ಸಾಧ್ಯ. ಅಂದರೆ ಟೆಕ್ಸ್ಟ್ ಮತ್ತು ವಿಡಿಯೋಗಳನ್ನು ಈ ಆಪ್ ನಲ್ಲಿ ಬಳಸಲು ಸಾಧ್ಯವಿಲ್ಲ. ಕ್ಲಬ್ ಹೌಸ್ ಆಪ್ ನ ಇನ್ನೊಂದು ವಿಶೇಷ ಅಂದರೆ, ಇದರಲ್ಲಿ ಕ್ಯಾಮರಾ ಬಳಸುವ ಅಗತ್ಯವೂ ಇಲ್ಲ. 

2 /5

Tesla  ಮಾಲೀಕ Elon Musk ಕೂಡಾ ಈ ಆಪ್ ಬಳಸುತ್ತಿದ್ದಾರೆ:  ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ Tesla  ಮಾಲೀಕ Elon Musk ಕೂಡಾ ಈ ಆಪ್ ಬಳಸುತ್ತಿದ್ದಾರೆ.  Elon Musk  ಅವರ Good Time Show ಅನ್ನು ಬಹಳಷ್ಟು ಜನರು ಫಾಲೋ ಮಾಡುತ್ತಿದ್ದಾರೆ. ಕ್ಲಬ್ ಹೌಸ್ ನಲ್ಲಿ  Elon Musk ಪೋಸ್ಟ್ ಹಾಕುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಈ ಆಪನ್ನು ಡೌನ್ ಲೋಡ್  ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.  

3 /5

ಪ್ರತಿಯೊಬ್ಬರೂ ಈ ಆಪ್ ಬಳಸುವಂತಿಲ್ಲ :  Clubhouse ಆಪ್ ನ ಮತ್ತೊಂದು ವಿಶೇಷವೆಂದರೆ, ಈ ಆಪ್ ಅನ್ನು ಡೌನ್ ಲೋಡ್ ಮಾಡಿದ ಕೂಡಲೇ ಇದನ್ನು ಬಳಸಲು ಸಾಧ್ಯವಿಲ್ಲ. ಇದೊಂದು Invite-Only ಆಪ್. ಇದರರ್ಥ Clubhouseನ ಸಕ್ರೀಯ ಬಳಕೆದಾರರು ಮಾತ್ರ  ಆಪ್ ಅನ್ನು ಬಳಸುವಂತೆ Invite ಮಾಡಬಹುದು.   

4 /5

Clubhouse ಆಪ್ ಅನ್ನು ಬಳಸುವುದು ಹೇಗೆ ?:  ಪ್ರಸ್ತುತ ಬಳಕೆಯಲ್ಲಿರುವ Facebook, Instagram, Twitter, WhatsApp, TikTokಗಳಿಗೆ ಹೋಲಿಸಿದರೆ ಕ್ಲಬ್ ಹೌಸ್ ಕೇವಲ ಮಾತನಾಡಲು ಇರುವಂಥಹ ಆಪ್. ಇದರಲ್ಲಿ ತಮ್ಮದೇ ಆದ  Room ಕ್ರಿಯೇಟ್ ಮಾಡಿಕೊಳ್ಳಬಹುದು. ಈ ಮೂಲಕ ಯಾವುದೇ ವಿಷಯದ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಬಹುದು. ಜನರ ಅಭಿಪ್ರಾಯಗಳನ್ನು ಕೂಡಾ ಪಡೆದುಕೊಳ್ಳಬಹುದು. ಇದರ ನ್ನೊಂದು ವಿಶೇಷವೆಂದರೆ, ಇಲ್ಲಿ ಯಾವುದೇ ರೀತಿಯ ಫೋಟೋ, ವಿಡಿಯೋ, ಟೆಕ್ಸ್ಟ್ ಗಳನ್ನು ಶೇರ್ ಮಾಡಲು ಸಾಧ್ಯವಾಗುವುದಿಲ್ಲ.

5 /5

ಇದ್ದಕ್ಕಿದ್ದಂತೆ ಜನಪ್ರಿಯವಾಗಲು ಕಾರಣ :  ಕ್ಲಬ್ ಹೌಸ್ ಲಾಂಚ್ ಆಗಿ ಒಂದು ವರ್ಷವೂ ಆಗಿಲ್ಲ. ಈಗಲೇ ಇದರ ಮೌಲ್ಯ ಒಂದು ಬಿಲಿಯನ್ ಡಾಲರ್ ಅನ್ನೂ ದಾಟಿದೆ. Elon Musk ಮಾತ್ರವಲ್ಲದೆ ಫೇಸ್ ಬುಕ್ ನ ಮಾಲೀಕರಾದ Mark Zuckerberg ಕೂಡಾ ಈ ಆಪ್ ಅನ್ನು ಬಳಸುತ್ತಿದ್ದಾರೆ. ಸೆಲೆಬ್ರಿಟಿ Oprah Winfrey ಕೂಡಾ Clubhouse ಬಳಸಲು ಆರಂಭಿಸಿದ್ದಾರೆ.