ಮತ್ತೆ ದಾದಾಗಿರಿಗಿಳಿದ ವಾಟ್ಸ್ ಆಪ್ : ಪ್ರೈವೆಸಿ ಪಾಲಿಸಿ ಒಪ್ಪದಿದ್ದರೆ ಮುಂದೆ..?

ಹೊಸ ಗೋಪ್ಯತಾ ನೀತಿಗೆ ಸಂಬಂಧಿಸಿದಂತೆ ವಾಟ್ಸಾಪ್ ಮತ್ತೆ ದಾದಾಗಿರಿಗಿ ಇಳಿದಿದೆ. ಮೆಸೇಜಿಂಗ್ ಅಪ್ಲಿಕೇಶನ್ ತನ್ನ ಹೊಸ ಗೋಪ್ಯತೆ ನೀತಿಯನ್ನು ಮತ್ತೊಮ್ಮೆ ಬಳಕೆದಾರರಿಗೆ ಕಳುಹಿಸಿದೆ.
 

ನವದೆಹಲಿ : ಹೊಸ ಗೋಪ್ಯತಾ ನೀತಿಗೆ ಸಂಬಂಧಿಸಿದಂತೆ ವಾಟ್ಸಾಪ್ (WhatsApp) ಮತ್ತೆ ದಾದಾಗಿರಿಗಿ ಇಳಿದಿದೆ. ಮೆಸೇಜಿಂಗ್ ಅಪ್ಲಿಕೇಶನ್ ತನ್ನ ಹೊಸ ಗೋಪ್ಯತೆ ನೀತಿಯನ್ನು (Privacy policy) ಮತ್ತೊಮ್ಮೆ ಬಳಕೆದಾರರಿಗೆ ಕಳುಹಿಸಿದೆ. ನಿಗದಿತ ಸಮಯದೊಳಗೆ ಷರತ್ತುಗಳನ್ನು ಅಂಗೀಕರಿಸುವಂತೆ ಹೇಳಿದೆ. ನಿಗದಿತ ಸಮಯದೊಳಗೆ ಷರತ್ತುಗಳನ್ನು ಅಂಗೀಕರಿಸದಿದ್ದಲ್ಲಿ ಭಾರೀ ನಷ್ಟವಾಗಲಿದೆ ಎಂದು ಹೇಳಲಾಗಿದೆ. ಈ ಷರತ್ತುಗಳನ್ನು ಒಪ್ಪಿಕೊಳ್ಳದಿರುವ ಆಗುವ ಅನಾನುಕೂಲಗಳ ಬಗ್ಗೆ ನಾವು ಹೇಳುತ್ತೇವೆ ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಟೆಕ್ ಸೈಟ್ ಟೆಲಿಕಾಂಟಾಕ್ ಪ್ರಕಾರ, ವಾಟ್ಸಾಪ್ ಮತ್ತೊಮ್ಮೆ ಹೊಸ ಗೌಪ್ಯತೆ ನೀತಿಯ ಅಧಿಸೂಚನೆಗಳನ್ನು ಬಳಕೆದಾರರಿಗೆ ಕಳುಹಿಸಲು ಪ್ರಾರಂಭಿಸಿದೆ.

2 /5

ಮಾಹಿತಿಯ ಪ್ರಕಾರ, ಹೊಸ ಗೌಪ್ಯತೆ ನೀತಿಯನ್ನು ಮೇ 15 ರೊಳಗೆ ಅಂಗೀಕರಿಸಬೇಕಾಗುತ್ತದೆ ಎಂದು ವಾಟ್ಸಾಪ್ ಬಳಕೆದಾರರಿಗೆ ತಿಳಿಸಿದೆ. ಕಳೆದ ಬಾರಿಯಂತೆ  ಈ ಬಾರಿಯೂ ಬಳಕೆದಾರರಿಗೆ ಈ ಷರತ್ತುಗಳನ್ನು ಸ್ವೀಕರಿಸದಿರುವ ಆಯ್ಕೆಯನ್ನು ನೀಡಲಾಗಿಲ್ಲ.

3 /5

ವರದಿಯ ಪ್ರಕಾರ, ಹೊಸ ನಿಯಮಗಳನ್ನು ಒಪ್ಪಿಕೊಳ್ಳಬೇಕು ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ. ಒಂದು ವೇಳೆ, ಹೊಸ ನಿಯಮಗಳನ್ನು ಒಪ್ಪದೇ ಹೋದಲ್ಲಿ, ವಾಟ್ಸಾಪ್ ನಿಂದ ಬರುವ ಕರೆಗಳು ಮತ್ತು ನೊಟಿಫಿಕೇಶನ್ ಮುಂದುವರಿಯುತ್ತದೆ. ಆದರೆ, ಬಳಕೆದಾರರಿಗೆ ಸಂದೇಶವನ್ನು ಓದಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಸಂದೇಶಗಳನ್ನು ಕಳುಹಿಸುವ ಆಯ್ಕೆ ಕೂಡಾ ನಿಂತು ಹೋಗುತ್ತದೆ. 

4 /5

ಜನವರಿ 4 ರಂದು, ವಾಟ್ಸಾಪ್ ಬಳಕೆದಾರರಿಗೆ ಇದೇ ರೀತಿಯ ಗೌಪ್ಯತೆ ನೀತಿಯನ್ನು ಕಳುಹಿಸಿತ್ತು.  ಅಲ್ಲದೆ, ಬಳಕೆದಾರರ ಚಾಟ್‌ಗಳು, ಕಾಂಟಾಕ್ಟ್ ಮತ್ತು ವಹಿವಾಟುಗಳ ಮಾಹಿತಿಯನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನೊಂದಿಗೆ ಹಂಚಿಕೊಳ್ಳಲಾಗುವುದು ಎಂದು ತಿಳಿಸಿತ್ತು.  

5 /5

ಡೇಟಾವನ್ನು ಇತರ ಪ್ಲಾಟ್‌ಫಾರ್ಮ್‌ಗಳೊಂದಿಗೆ ಹಂಚಿಕೊಳ್ಳುವ ಬಗ್ಗೆ ವಾಟ್ಸಾಪ್ ಹೇಳಿರುವ ಕಾರಣ, ಬಳಕೆದಾರರು ವಾಟ್ಸಾಪ್ ಬಿಟ್ಟು, ಇತರ ಅಪ್ಲಿಕೇಶನ್‌ಗಳನ್ನು ಡೌನ್ ಲೋಡ್ ಮಾಡಲು ಆರಂಭಿಸಿದರು. ವಾಟ್ಸಾಪ್ ಗೋಪ್ಯತಾ ನೀತಿಯನ್ನು ವಿರೋಧಿಸಿ ಪ್ರಪಂಚದಾದ್ಯಂತದ ಬಳಕೆದಾರರು ಟೆಲಿಗ್ರಾಮ್ ಮತ್ತು ಸಿಗ್ನಲ್ ಅನ್ನು ಬಳಸುತ್ತಿದ್ದಾರೆ.