ಕೂದಲಿಗೆ ಅಮೃತ ಈ ಹೂವು, ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತೆ!

White hair home remedies: ಇತ್ತೀಚಿನ ದಿನಗಳಲ್ಲಿ ಕೂದಲ ರಕ್ಷಣೆಗೆ ಹೆಚ್ಚಿನ ಮಹತ್ವ ಬಂದಿದೆ. ಆಧುನಿಕ ಜೀವನಶೈಲಿ ಮತ್ತು ಕೆಲಸದ ಒತ್ತಡದಿಂದಾಗಿ ಕೂದಲು ಉದುರುವುದು ದೊಡ್ಡ ಸಮಸ್ಯೆಯಾಗಿದೆ. ಪ್ರಕೃತಿಯಲ್ಲಿ ಲಭ್ಯವಿರುವ ಕೆಲವು ರೀತಿಯ ಹೂವುಗಳಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. 
 

White hair to black hair naturally permanently: ಪ್ರಕೃತಿಯಲ್ಲಿರುವ ವಿವಿಧ ಹೂವುಗಳಲ್ಲಿ ಅನೇಕ ಆರೋಗ್ಯ ಪ್ರಯೋಜನಗಳು ಅಡಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಕೂದಲನ್ನು ನೈಸರ್ಗಿಕವಾಗಿ ಆರೋಗ್ಯವಾಡಗಿಡಲು ಈ ಹೂವುಗಳನ್ನು ಬಳಸಬಹುದು. ಬಹುವಾರ್ಷಿಕ ಹೂವುಗಳು ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಉತ್ತಮವಾಗಿದೆ.
 

1 /6

ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲು ವಯಸ್ಸಿನಲ್ಲೇ ಶುರುವಾಗುವುದು ಒಂದು ಸಮಸ್ಯೆಯಾಗಿದೆ. ಪ್ರೌಢಾವಸ್ಥೆಯಲ್ಲಿ ಕೂದಲು ಬಿಳಿಯಾಗುತ್ತಿದೆ. ಅಸಮರ್ಪಕ ಆಹಾರ ಪದ್ಧತಿಯು ಕೂದಲಿನ ಮೇಲೆ ಪರಿಣಾಮ ಬೀರಬಹುದು. ಅಂದರೆ ಕೂದಲು ಬೇಗ ಬೆಳ್ಳಗಾಗುತ್ತದೆ.   

2 /6

ಈ ಪರಿಸ್ಥಿತಿಗಳಲ್ಲಿ ಡೈ ಬಳಸಿದರೆ, ಕೂದಲು ದುರ್ಬಲಗೊಳ್ಳುತ್ತದೆ ಮತ್ತು ವೇಗವಾಗಿ ಉದುರುತ್ತದೆ. ಆದ್ದರಿಂದ, ಈ ಪರಿಸ್ಥಿತಿಯನ್ನು ತಪ್ಪಿಸಲು, ಕೂದಲನ್ನು ಯಾವಾಗಲೂ ನೈಸರ್ಗಿಕ ವಿಧಾನಗಳಿಂದ ಕಪ್ಪಾಗಿಸಬೇಕು. ನೈಸರ್ಗಿಕ ಕಪ್ಪು ಕೂದಲು ಎಂದಿಗೂ ಬಿಳಿಯಾಗುವುದಿಲ್ಲ.  

3 /6

ಬಸವನಪಾದ ಅಥವಾ ಸದಾಪುಷ್ಪ ಅಥವಾ ನಿತ್ಯ ಕಣಗಿಲೆ ಎಂದು ಕರೆಯುವ ಈ ಹೂವುಗಳಿಂದ ನಿಮ್ಮ ಕೂದಲನ್ನು ನೈಸರ್ಗಿಕ ಕಪ್ಪಾಗಿ ಇರಿಸಬಹುದು. ಇವು ಪ್ರಕೃತಿಯಲ್ಲಿ ನಮ್ಮ ಸುತ್ತಲೂ ವ್ಯಾಪಕವಾಗಿ ಲಭ್ಯವಿರುವ ಹೂವುಗಳಾಗಿವೆ.   

4 /6

ಕೂದಲಿಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳನ್ನು ಈ ಹೂವುಗಳಿಂದ ಪರಿಹರಿಸಬಹುದು. ರಾಸಾಯನಿಕಗಳನ್ನು ಬಳಸದೆ ಕಪ್ಪು ಕೂದಲು ಪಡೆಯಲು ಈ ಹೂವುಗಳು ಉತ್ತಮವಾಗಿವೆ. ಆದರೆ ಇದನ್ನು ದೀರ್ಘಕಾಲದವರೆಗೆ ಬಳಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.  

5 /6

20-30 ನಿತ್ಯ ಕಣಗಿಲೆ ಹೂವುಗಳು ಮತ್ತು 15-20 ನಿತ್ಯ ಕಣಗಿಲೆ ಗಿಡದ ಎಲೆಗಳನ್ನು ತೆಗೆದುಕೊಳ್ಳಬೇಕು. ಎರಡು ಸಣ್ಣ ಚಮಚ ಟೀ ಪುಡಿ ಮತ್ತು ಒಂದು ಚಮಚ ಕಾಫಿ ಪುಡಿ ತೆಗೆದುಕೊಳ್ಳಿ. ಮೊದಲು ಅರ್ಧ ಕಪ್ ನೀರಿಗೆ ಟೀ ಪುಡಿ ಹಾಕಿ ಕುದಿಸಿದ ನಂತರ ಸೋಸಿ ತಣ್ಣಗಾಗಿಸಿ. ಅದರ ನಂತರ ಹೂವುಗಳು ಮತ್ತು ಎಲೆಗಳನ್ನು ಸೇರಿಸಿ ಮತ್ತು ಅದನ್ನು ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ ಕಾಫಿ ಸೇರಿಸಿ.   

6 /6

ಕಬ್ಬಿಣದ ಕಡಾಯಿಯಲ್ಲಿ 2 ಗಂಟೆಗಳ ಕಾಲ ಇಡಬೇಕು. ಕಬ್ಬಿಣದ ಬಾಣಲೆಯಲ್ಲಿ ಇಟ್ಟುಕೊಳ್ಳುವುದರಿಂದ ಕಬ್ಬಿಣಾಂಶ ಬರುತ್ತದೆ. ಕೂದಲು ಪೋಷಕಾಂಶಗಳಿಂದ ಸಮೃದ್ಧವಾಗುತ್ತದೆ. ಈ ಮಿಶ್ರಣವನ್ನು ನಿಮ್ಮ ಕೂದಲು ಮತ್ತು ನೆತ್ತಿಗೆ ಅನ್ವಯಿಸಿ. ಒಂದು ಗಂಟೆಯ ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಇದನ್ನು ಮಾಡಿ.