Salman Khan: ಗುಂಡಿನ ದಾಳಿ, ಬೆದರಿಕೆ, ಇದೀಗ ಸ್ನೇಹಿತನ ಕೊಲೆ.. ಬಿಷ್ಣೋಯ್‌ಗೆ ಕ್ಷಮೆ ಕೇಳ್ತಾರಾ ಸಲ್ಮಾನ್ ಖಾನ್?

salman khan apologise to bishnoi gang: 1998 ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ಗೆ ಸಲ್ಮಾನ್ ಕ್ಷಮೆಯಾಚಿಸುತ್ತಾರಾ? ಈ ವಿಷಯದಲ್ಲಿ ನಟ ಸಾರ್ವಜನಿಕ ಅಥವಾ ವೈಯಕ್ತಿಕ ಕ್ಷಮೆ ಯಾಚಿಸುವ ಯಾವುದೇ ಅವಕಾಶವಿದೆಯೇ? ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.. 

1 /6

1998 ರಲ್ಲಿ ಕೃಷ್ಣಮೃಗ ಬೇಟೆಯ ನಂತರ, ಸಲ್ಮಾನ್ ಖಾನ್ ಆಗಾಗ್ಗೆ ಬಿಷ್ಣೋಯ್ ಗ್ಯಾಂಗ್‌ನ ಗುರಿಯಾಗಿದ್ದರು. ಅವರ ಮನೆಯ ಮೇಲೂ ಗುಂಡು ಹಾರಿಸಲಾಗಿತ್ತು. ಹಾಗಾದ್ರೆ ನಟ ಕ್ಷಮೆ ಕೇಳುತ್ತಾರಾ?.. ಇತ್ತೀಚೆಗೆ ಸಲ್ಮಾನ್‌ ಖಾನ್‌ ಆಪ್ತ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಬಿಷ್ಣೋಯ್ ಗ್ಯಾಂಗ್ ಅದರ ಹೊಣೆಹೊತ್ತುಕೊಂಡಿದ್ದರಿಂದ ಈ ಪ್ರಶ್ನೆ ಉದ್ಭವಿಸಿದೆ.   

2 /6

ಈ ಬಗ್ಗೆ ನಟ ಸಲ್ಮಾನ್ ಆಪ್ತರೊಬ್ಬರು ಮಾದ್ಯಮದೊಂದಿಗೆ ಮಾತನಾಡಿದ್ದು, ಸಲ್ಮಾನ್‌ ಖಾನ್‌ ಹಾಗೂ ಅವರು ತಮ್ಮ ಆಪ್ತರನ್ನು ನಿರಂತರವಾಗಿ ಗುಂಡಿನ ದಾಳಿ, ಬೆದರಿಕೆಗಳಿಂದ ರಕ್ಷಿಸಲು ಆಯ್ಕೆ ಏನು.. ಪರಿಹಾರ ಯಾವುದು ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.   

3 /6

ಆಪ್ತ ಮೂಲಗಳ ಪ್ರಕಾರ "ಸಲ್ಮಾನ್ ಕ್ಷಮೆಯಾಚಿಸಿದರೆ, ಅವರು ಈ ವಿಷಯದಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದರ್ಥ. ತಾನು ಮಾಡದಿದ್ದಕ್ಕೆ ಕ್ಷಮೆ ಕೇಳುವುದಿಲ್ಲ..  ಇಷ್ಟು ವರ್ಷವೇ ಹೀಗೆ ಮಾಡಲಾಗಿಲ್ಲ, ಈಗ ಅವರಿಗೆ ಕ್ಷಮೆ ಕೇಳುವುದು ಅಸಾಧ್ಯ" ಎನ್ನಲಾಗುತ್ತಿದೆ.  

4 /6

ಇಷ್ಟೇ ಅಲ್ಲ.. ಸಲ್ಮಾನ್ ಅವರ ಆರೋಗ್ಯದ ಬಗ್ಗೆಯೂ ಅವರ ಸ್ನೇಹಿತರು ಮತ್ತು ಕುಟುಂಬದವರು ತುಂಬಾ ಕಾಳಜಿ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.. ಈ ಬಗ್ಗೆ ಮಾತನಾಡಿದ ಸಲ್ಲು ಆಪ್ತರು.. " "ಖಂಡಿತವಾಗಿಯೂ ಇದು ಅವರಿಗೆ ತೀವ್ರ ಕಾಳಜಿಯ ವಿಷಯವಾಗಿದೆ. ಪ್ರತಿ ಬಾರಿ ಅವರು ಸಾರ್ವಜನಿಕವಾಗಿ ಹೊರಗೆಹೋದಾಗ ಅಥವಾ ಶೂಟಿಂಗ್ಗೆ ಹೋದಾಗ ಅವರು ಇನ್ನಷ್ಟು ಒತ್ತಡಕ್ಕೆ ಒಳಗಾಗುತ್ತಾರೆ. ಕುಟುಂಬದವರು ಅಸಮಾಧಾನಗೊಂಡಿದ್ದು, ಅವರ ಬಗ್ಗೆ ಕಾಳಜಿ ವಹಿಸುತ್ತಾರೆ ಆದರೆ ಈ ವಿಷಯದಲ್ಲಿ ಅವನೊಂದಿಗೆ ಎಲ್ಲರೂ ಇದ್ದಾರೆ ಮತ್ತು ಈ ವಿಷಯದಲ್ಲಿ ಅವರ ನಿಲುವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ." ಎಂದಿದ್ದಾರೆ.   

5 /6

ಹಾಗಾದ್ರೆ ನಟ ಸಲ್ಮಾನ್‌ ಖಾನ್‌ ಕ್ಷಮೆ ಕೇಳದೇ ಇದ್ದರೇ ಅವರ ಮುಂದಿರುವ ಬೇರೆ ಆಯ್ಕೆಗಳೇನು? ಎನ್ನುವುದಕ್ಕೂ ಉತ್ತರಿಸಲಾಗಿದ್ದು, "ಮೊದಲನೆಯದಾಗಿ, ಸೂಕ್ತ ಭದ್ರತೆಯನ್ನು ಒದಗಿಸುವಂತೆ ಭದ್ರತಾ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳ ಮೇಲೆ ಒತ್ತಡವಿದೆ.. ಬಿಗ್‌ಬಾಸ್ 18 ರ ಶೂಟಿಂಗ್‌ಗಾಗಿ ಅವರು ಪ್ರತಿ ವಾರ ಪ್ರಯಾಣಿಸುತ್ತಾರೆ ಎಂಬ ತರ್ಕವನ್ನು ಪರಿಗಣಿಸಿ ಅವರಿಗೆ ಹೊಸ ಭದ್ರತೆಯನ್ನು ನೀಡಲಾಗಿದೆ"  

6 /6

"ಇದೆಲ್ಲರ ಹೊರತಾಗಿ ಸಲ್ಮಾನ್‌ ಖಾನ್‌ ಸದ್ಯ ಸಿಕಂದರ್ ಮತ್ತು ಸಿಂಘಮ್ ಸಿನಿಮಾ ಪ್ರಾಜೆಕ್ಟ್‌ಗಳಲ್ಲೂ ಬಿಜಿಯಾಗಿದ್ದಾರೆ. ಈ ಬೆದರಿಕೆಗಳಿಂದ ಅವರು ತಮ್ಮ ಕೆಲಸಕ್ಕೆ ಧಕ್ಕೆ ತರಲು ಬಯಸುವುದಿಲ್ಲ.. ಆದ್ದರಿಂದ, ಅವರು ನಿಗದಿತ ಸಮಯಕ್ಕೆ ತಕ್ಕಂತೆ ತಮ್ಮ ಕೆಲಸವನ್ನು ಮಾಡುತ್ತಾರೆ" ಎಂದು ಮೂಲಗಳು ಹೇಳುತ್ತಿವೆ..