ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡಿದರೆ ಹೆಚ್ಚಾಗಲಿದೆ ಈ ರೋಗಗಳ ಅಪಾಯ ..!

 ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ  Irregular  ಅಥವಾ  Abnormally fast heart rhythm ಅಪಾಯ ಹೆಚ್ಚಿರುತ್ತದೆ.  

ನವದೆಹಲಿ : ಕೆಲವೊಂದು ಕಂಪೆನಿಗಳಲ್ಲಿ ಶಿಫ್ಟ್ ನಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ರೀತಿ ಶಿಫ್ಟ್ ನಲ್ಲಿ ಕೆಲಸ ಮಾಡುವಾಗ ರಾತ್ರಿ ಪಾಳಿ ಕೂಡಾ ಮಾಡಬೇಕಾಗುತ್ತದೆ. ಆದರೆ, ರಾತ್ರಿ ಪಾಳಿ ಮಾಡಿದರೆ ಹೃದಯದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಇತ್ತೀಚಿನ ಅಧ್ಯಯನದಲ್ಲಿ ಈ ವಿಚಾರ ಬಯಲಾಗಿದೆ.  ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ  Irregular  ಅಥವಾ  Abnormally fast heart rhythm ಅಪಾಯ ಹೆಚ್ಚಿರುತ್ತದೆ.  ಅಂತರರಾಷ್ಟ್ರೀಯ ಸಂಶೋಧಕರ ತಂಡವು ಈ ಅಧ್ಯಯನವನ್ನು ಮಾಡಿದ್ದು, ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಇದನ್ನು ಪ್ರಕಟಿಸಲಾಗಿದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

 ರಾತ್ರಿ ಪಾಳಿ ಕೆಲಸ ಮತ್ತು Atrial fibrillation ನಡುವಿನ ಲಿಂಕ್  ಹುಡುಕುವ ಕೆಲಸ ಮಾಡಲಾಯಿತು. ಇದರಲ್ಲಿ, ಯುಕೆ ಬಯೋಬ್ಯಾಂಕ್ ಡೇಟಾಬೇಸ್‌ನಲ್ಲಿರುವ 283,657 ಜನರ ಮಾಹಿತಿಯನ್ನು ಬಳಸಲಾಗಿದೆ. ಇಲ್ಲಿ ಅಧ್ಯಯನದಲ್ಲಿ  ಕಂಡುಬಂದ ಸತ್ಯ ಎಂದರೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ Atrial fibrillation ಅಪಾಯ ಹೆಚ್ಚಿರುತ್ತದೆ. ಇದು ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. 

2 /5

 Shanghai Ninth People's Hospital ನ Yingli Lu  ಮತ್ತು ಅಮೆರಿಕದ Tulane University School of Public Health and Tropical Medicine ನ ಪ್ರೊಫೆಸರ್ Lu Qi ಈ ಬಗ್ಗೆ ಪೀಕ್ಷೆ ನಡೆಸಿದ್ದಾರೆ. ಇದಕ್ಕಾಗಿ, ವಿಜ್ಞಾನಿಗಳು 166 genetic variations ಸಂಬಂಧಿಸಿದ ಆನುವಂಶಿಕ ಅಪಾಯದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ರಾತ್ರಿಯ ಶಿಫ್ಟ್ ಕೆಲಸ ಮತ್ತು ಎಎಫ್ ಅಪಾಯದ ಮೇಲೆ ಆನುವಂಶಿಕ ಅಪಾಯದ ಮಟ್ಟವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.  

3 /5

ಈ ರೀತಿಯ ಅಧ್ಯಯನವು ರಾತ್ರಿ ಪಾಳಿ ಮತ್ತು Atrial fibrillation ಮತ್ತು ಹೃದಯ ಕಾಯಿಲೆಯ ಅಪಾಯದ ನಡುವಿನ ಲಿಂಕ್ ಅನ್ನು ಬಹಿರಂಗಪಡಿಸುವುದಿಲ್ಲ. ಆದರೆ ಜೀವಮಾನದ ರಾತ್ರಿ ಪಾಳಿ ಕೆಲಸವು ಇದರ ಅಪಾಯವನ್ನು  ಹೆಚ್ಚಿಸಬಹುದು ಎನ್ನುವುದನ್ನು ಸೂಚಿಸುತ್ತದೆ ಎಂದು ಪ್ರೊಫೆಸರ್ ಲು ಹೇಳಿದ್ದಾರೆ.

4 /5

ವಿಜ್ಞಾನಿಗಳು ರಾತ್ರಿ ಪಾಳಿಯ ಕೆಲಸದ frequency ಮತ್ತು ಅವಧಿಯನ್ನು ಕಡಿಮೆ ಮಾಡುವುದರಿಂದ ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಲಿದೆ ಎಂದಿದ್ದಾರೆ. ಸಾಂದರ್ಭಿಕ ಅಥವಾ ಶಾಶ್ವತ ಆಧಾರದ ಮೇಲೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರು ಹಗಲಿನಲ್ಲಿ ಕೆಲಸ ಮಾಡುವವರಿಗಿಂತ AF ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

5 /5

 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯದವರೆಗೆ ನಿರಂತರವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮೂಲಕ ಮಹಿಳೆಯರು Atrial Fibrillation ಅಪಾಯಕ್ಕೆ ಒಳಗಾಗುತ್ತಾರೆ ಎನ್ನುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.