ಭಾರತದ ನೂತನ ಕೋಚ್ ಗೌತಮ್ ಗಂಭೀರ್ ಪತ್ನಿ ಯಾರು ಗೊತ್ತಾ? ತಂದೆಯ ಸ್ನೇಹಿತನ ಮಗಳನ್ನೇ ಪ್ರೀತಿಸಿ ಮದ್ವೆಯಾದ ದಿಗ್ಗಜ

Gautam Gambhir Natasha Jain Love Story: ಟೀಂ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ. ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದ್ದು, ಇನ್ಮುಂದೆ ಭಾರತೀಯ ಕ್ರಿಕೆಟ್ ತಂಡದ ಜವಾಬ್ದಾರಿ ಗಂಭೀರ್ ಹೆಗಲೇರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಟೀಂ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ. ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದ್ದು, ಇನ್ಮುಂದೆ ಭಾರತೀಯ ಕ್ರಿಕೆಟ್ ತಂಡದ ಜವಾಬ್ದಾರಿ ಗಂಭೀರ್ ಹೆಗಲೇರಲಿದೆ. ಇನ್ನು ನಾವಿಂದು ಈ ವರದಿಯಲ್ಲಿ ಗೌತಮ್ ಗಂಭೀರ್ ಅವರ ಲವ್ ಸ್ಟೋರಿ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.  

2 /7

ವೈಯಕ್ತಿಕ ಜೀವನದಲ್ಲಿ ಗಂಭೀರ್ ಸಾಕಷ್ಟು ರೊಮ್ಯಾಂಟಿಕ್. ಗಂಭೀರ್ ಮದುವೆಯಾಗಿದ್ದು, ತಂದೆಯ ಸ್ನೇಹಿತನ ಮಗಳನ್ನು. ಅಂದು ವಿಶ್ವಕಪ್ ಮುಗಿದ ಬೆನ್ನಲ್ಲೇ ನತಾಶಾ ಜೈನ್ ಜೊತೆ ಗೌತಮ್ ವಿವಾಹವಾದರು. ಆದರೆ ಈ ಮದುವೆಗೂ ಮುನ್ನ ಗೌತಮ್ ಗಂಭೀರ್ ನತಾಶಾಗೆ ಒಂದು ಕಂಡೀಷನ್ ಹಾಕಿದ್ದರಂತೆ.

3 /7

2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಹೀರೋ ಗೌತಮ್ ಗಂಭೀರ್ ತನ್ನ ತಂದೆಯ ಸ್ನೇಹಿತನ ಮಗಳ ಅಂದಕ್ಕೆ ಮನಸೋತು ಪ್ರೀತಿಯಲ್ಲಿ ಬಿದ್ದಿದ್ದರು. ಮೊದಲು ಇಬ್ಬರೂ ಸ್ನೇಹಿತರಾಗಿದ್ದವರು. ಇದಾದ ನಂತರ ಪರಸ್ಪರ ಪ್ರೀತಿಸಿ ನಂತರ ಮದುವೆಯಾದರು.

4 /7

ಗೌತಮ್ ಗಂಭೀರ್ ಮತ್ತು ನತಾಶಾ ಜೈನ್ ಮದುವೆ ನಿಶ್ಚಯವಾಗಿತ್ತು. ಅಂದಹಾಗೆ ಗೌತಮ್ ಗಂಭೀರ್ ತಂದೆ ಮತ್ತು ನತಾಶಾ ಜೈನ್ ತಂದೆ ಉತ್ತಮ ಸ್ನೇಹಿತರು. ಅವರ ಮೂಲಕವೇ ನತಾಶಾ, ಗೌತಮ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು.

5 /7

ಗೌತಮ್ ಗಂಭೀರ್ ತನ್ನ ಆಯ್ಕೆಯ ಬಗ್ಗೆ ಸ್ಪಷ್ಟತೆ ಹೊಂದಿದ್ದು, ತನ್ನ ಜೀವನ ಸಂಗಾತಿ ಡೌನ್ ಟು ಅರ್ಥ್ ಆಗಿರಬೇಕು ಎಂದುಕೊಂಡಿದ್ದರಂತೆ. ಕೊನೆಗೂ ನತಾಶಾಳಲ್ಲಿ ಈ ಗುಣವನ್ನು ಕಂಡುಕೊಂಡಾಗ, ಈಕೆಯೇ ನನಗೆ ಪರ್ಫೆಕ್ಟ್ ಎಂದು ವಿವಾಹವಾಗಲು ನಿರ್ಧರಿಸಿದರಂತೆ. ಈ ಬಗ್ಗೆ ಸಂದರ್ಶನದಲ್ಲಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

6 /7

"ನತಾಶಾಳ ಅತ್ಯುತ್ತಮ ವಿಷಯವೆಂದರೆ ಆಕೆ ನನ್ನೊಂದಿಗೆ ಕ್ರಿಕೆಟ್ ಬಗ್ಗೆ ಚರ್ಚಿಸುವುದಿಲ್ಲ. ನಾನು ಸಾಕಷ್ಟು ಕ್ರಿಕೆಟ್ ಆಡುತ್ತೇನೆ, ಹೀಗಾಗಿ ಮತ್ತೆ ರೂಂಗೆ ಬಂದು ಕ್ರಿಕೆಟ್ ಬಗ್ಗೆ ಚರ್ಚಿಸೋಕೆ ನಾನು ಇಷ್ಟ ಪಡಲ್ಲ'' ಎಂದಿದ್ದಾರೆ. ಹಾಗೆಯೇ ವಿಶ್ವಕಪ್ ನಂತರವೇ ಮದುವೆಯಾಗುವುದಾಗಿ ಗೌತಮ್ ಗಂಭೀರ್ ನತಾಶಾ ಜೈನ್’ಗೆ ಹೇಳಿದ್ದರು.

7 /7

2011ರ ವಿಶ್ವಕಪ್ ನಂತರ ಮದುವೆಯಾಗುವುದು ನನ್ನ ಏಕೈಕ ನಿರ್ಧಾರವಾಗಿತ್ತು. ಇದು ನನ್ನ ಮೊದಲ 50 ಓವರ್‌’ಗಳ ವಿಶ್ವಕಪ್, ಅದಕ್ಕಾಗಿ ಶ್ರಮದ ಅಗತ್ಯವಿತ್ತು. ನಾವು ಗೆದ್ದೆವು. ಅದರಲ್ಲೂ ನಾನೇ ಹೆಚ್ಚು ರನ್ ಗಳಿಸಿದ ಆಟಗಾರ ಎಂದು ಅವರು ಹೇಳಿದ್ದಾರೆ.