World Milk Day: ಈ 5 ಆಹಾರಗಳ ಸೇವನೆ ಬಳಿಕ ಎಂದಿಗೂ ಹಾಲು ಕುಡಿಯಬೇಡಿ

World Milk Day: ಜೂನ್ 1 ರಂದು ವಿಶ್ವ ಹಾಲು ದಿನ. ಹಾಲನ್ನು ಪರಿಪೂರ್ಣ ಆಹಾರ ಎಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವು ಪದಾರ್ಥಗಳನ್ನು ಸೇವಿಸಿದ ನಂತರ ಹಾಲು ಸೇವಿಸಬಾರದು. ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಯಾಗಬಹುದು. ಹಾಗಾಗಿ ಈ ವಿಷಯಗಳ ಬಗ್ಗೆ ಎಚ್ಚರದಿಂದಿರುವುದು ಮುಖ್ಯ...

ವಿಶ್ವ ಹಾಲು ದಿನ: ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಈ ದಿನವನ್ನು ಸ್ಥಾಪಿಸಿದೆ. ಹಾಲಿನ ಮಹತ್ವವನ್ನು ತಿಳಿಸುವುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ಸಾಮಾನ್ಯವಾಗಿ ಜನರು ಹಾಲು ಸೇವಿಸುವ ಮೊದಲು ಅಥವಾ ನಂತರ ಅಂತಹ ಕೆಲವು ಆಹಾರಗಳನ್ನು ಸೇವಿಸುತ್ತಾರೆ, ನಂತರ ಅವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಯಾವ ಪದಾರ್ಥಗಳನ್ನು ತಿಂದ ನಂತರ ಹಾಲು ಸೇವಿಸುವುದು ಹಾನಿಕಾರಕ. ಯಾವ ಪದಾರ್ಥಗಳೊಂದಿಗೆ ಹಾಲನ್ನು ಸೇವಿಸಬಾರದು ಎಂದು ತಿಳಿದಿರುವುದು ಬಹಳ ಮುಖ್ಯ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನಿಂಬೆಹಣ್ಣಿನ ಸೇವನೆಯ ನಂತರ ಹಾಲು :  ನಿಂಬೆಹಣ್ಣಿನ ಸೇವನೆಯ ನಂತರ ಹಾಲು ಸೇವಿಸಬಾರದು. ಇದರ ಹೊರತಾಗಿ ಹುಳಿ ಪದಾರ್ಥಗಳನ್ನು ಸೇವಿಸಿದ ನಂತರವೂ ಹಾಲು ಸೇವಿಸಬಾರದು. ಇದರಿಂದ ಆರೋಗ್ಯ ಕೆಡಬಹುದು.

2 /5

ಮಾಂಸಾಹಾರ ಸೇವನೆ ಬಳಿಕ ಹಾಲು:  ನೀವು ಮಾಂಸಾಹಾರ ಮತ್ತು ಮೀನು ಸೇವಿಸುವವರಾಗಿದ್ದರೆ, ಮೀನು ಸೇವಿಸಿದ ತಕ್ಷಣ ಹಾಲನ್ನು ಸೇವಿಸುವುದನ್ನು ತಪ್ಪಿಸಬೇಕು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು.

3 /5

ಮೊಸರು ಹಾಲು ಒಟ್ಟಿಗೆ ಸೇವಿಸಲೇಬಾರದು : ಮೊಸರು ತಿಂದ ತಕ್ಷಣ ಹಾಲನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ಅಜೀರ್ಣ ಸಮಸ್ಯೆ ಉಂಟಾಗಬಹುದು.

4 /5

ಉದ್ದಿನಬೇಳೆಯಿಂದ ತಯಾರಿಸಿದ ಆಹಾರ ಸೇವನೆ ಬಳಿಕ ಹಾಲು ಸೇವಿಸದಿದ್ದರೆ ಒಳಿತು :  ನೀವು ಉದ್ದಿನಬೇಳೆಯನ್ನು ಸೇವಿಸುತ್ತಿದ್ದರೆ, ಸುಮಾರು 2 ಅಥವಾ 3 ಗಂಟೆಗಳ ನಂತರ ಹಾಲನ್ನು ಸೇವಿಸಿ.  ಇಲ್ಲದಿದ್ದರೆ ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.

5 /5

ಉಪ್ಪು ಸೇವಿಸಿದ ನಂತರ ಹಾಲು ಸೇವನೆ ಹಾನಿಕಾರಕ:  ಉಪ್ಪು ಸೇವಿಸಿದ ನಂತರ ಸ್ವಲ್ಪ ಸಮಯದ ನಂತರ ಹಾಲು ಸೇವಿಸಬಹುದು. ಆದರೆ, ಉಪ್ಪು ಸೇವಿಸಿದ ನಂತರ ಹಾಲು ಸೇವನೆ ಹಾನಿಕಾರಕ. ಏಕೆಂದರೆ ಹೊಟ್ಟೆಯೊಳಗೆ ಉಪ್ಪು ಮತ್ತು ಹಾಲು ಬೆರೆತಾಗ ಹೊಟ್ಟೆಗೆ ಹಾನಿಯಾಗುತ್ತದೆ.