World's Hottest Chili: ಇದು ವಿಶ್ವದ ಅತ್ಯಂತ ಖಾರ ಮೆಣಸಿನ ಕಾಯಿ, ತಿಂದವರ ಹೆಸರು ಗಿನ್ನಿಸ್ ಬುಕ್ ಸೇರುತ್ತಂತೆ!

World's Hottest Chili: ಹಲವು ಆಹಾರ ಪದಾರ್ಥಗಳಲ್ಲಿ ಮೆಣಸಿನ ಕಾಯಿ ಇಲ್ಲ ಅಂದರೆ ಅದಕ್ಕೆ ರುಚಿಯೇ ಬರುವದಿಲ್ಲ. ಅನೇಕ ಜನರು ಖಾರವಾದ ಆಹಾರವನ್ನು ಇಷ್ಟಪಡುತ್ತಾರೆ. ಆದರೆ ಒಂದು ಮೆಣಸಿನಕಾಯಿ (Chili) ಎಷ್ಟು ಖಾರವಾಗಿದೆ ಎಂದರೆ, ಅದರ ಕೇವಲ ಮೂರು ಪೀಸ್ ತಿಂದವರ ಹೆಸರು ಗಿನ್ನಿಸ್ ಬುಕ್ ಸೇರಿದೆ. 

World's Hottest Chili: ಹಲವು ಆಹಾರ ಪದಾರ್ಥಗಳಲ್ಲಿ ಮೆಣಸಿನ ಕಾಯಿ ಇಲ್ಲ ಅಂದರೆ ಅದಕ್ಕೆ ರುಚಿಯೇ ಬರುವದಿಲ್ಲ. ಅನೇಕ ಜನರು ಖಾರವಾದ ಆಹಾರವನ್ನು ಇಷ್ಟಪಡುತ್ತಾರೆ. ಆದರೆ ಒಂದು ಮೆಣಸಿನಕಾಯಿ (Chili) ಎಷ್ಟು ಖಾರವಾಗಿದೆ ಎಂದರೆ, ಅದರ ಕೇವಲ ಮೂರು ಪೀಸ್ ತಿಂದವರ ಹೆಸರು ಗಿನ್ನಿಸ್ ಬುಕ್ ಸೇರಿದೆ. ನೀವು ಈ ಮೆಣಸಿನಕಾಯಿಯ 4 ತುಂಡುಗಳನ್ನು ತಿಂದರೆ, ನಿಮ್ಮ ಹೆಸರನ್ನು ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ  (Guinness Book Of World Records) ದಾಖಲಿಸಬಹುದು. ಈ ಮೆಣಸಿನಕಾಯಿಯ ಹೆಸರು 'ಕೆರೊಲಿನಾ ರೀಪರ್ (Carolina Reaper)'. ಈ ಮೆಣಸಿನಕಾಯಿಯನ್ನು ಅಮೆರಿಕದಲ್ಲಿ ಬೆಳೆಯಲಾಗುತ್ತದೆ. ಈ ಮೆಣಸಿನ ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Photo Gallery: ಐಪಿಎಲ್ ಚಾಂಪಿಯನ್ ಚೆನ್ನೈ ತಂಡದ ಸಂಭ್ರಮದ ಕ್ಷಣಗಳು..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

1. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಹೆಸರು ದಾಖಲಾಗಿದೆ - ಈ ಮೆಣಸಿನಕಾಯಿ ನೋಡಲು ಕ್ಯಾಪ್ಸಿಕಂನಂತೆ ಕಾಣುತ್ತದೆ. ಈ ಮೆಣಸಿನಕಾಯಿಯ ಹೆಸರು ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ 'ವಿಶ್ವದ ಅತ್ಯಂತ ಖಾರ ಮೆಣಸಿನಕಾಯಿ' ಎಂದು ದಾಖಲಾಗಿದೆ. ವಿಜ್ಞಾನಿಗಳ ಪ್ರಕಾರ, ಇದುವರೆಗೆ ಕೆರೊಲಿನಾ ರೀಪರ್‌ನಂತಹ ಖಾರ ಮೆಣಸು ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಇದು ಸಾಮಾನ್ಯ ಮೆಣಸಿನಕಾಯಿಗಿಂತ 440 ಪಟ್ಟು ಹೆಚ್ಚು ಖಾರವಾಗಿದೆ ಎಂದು ಹೇಳಲಾಗಿದೆ.

2 /5

2. ಇದನ್ನು ತಿನ್ನುವುದು ಕಷ್ಟದ ಕೆಲಸ - 2012 ರಲ್ಲಿ, ಈ ಮೆಣಸಿನಕಾಯಿಯ ತೀಕ್ಷ್ಣತೆಯನ್ನು ದಕ್ಷಿಣ ಕೆರೊಲಿನಾದ ವಿಂಥ್ರಾಪ್ ವಿಶ್ವವಿದ್ಯಾಲಯವು ಪರೆಕ್ಷೆ ನಡೆಸಿದೆ. ಇದರಲ್ಲಿ 15,69,300 SHU ಅಂದರೆ ಸ್ಕೋವಿಲ್ಲೆ ಹೀಟ್ ಯುನಿಟ್ ಕಂಡುಬಂದಿದೆ. ಸಾಮಾನ್ಯವಾಗಿ ಯಾವುದೇ ಪದಾರ್ಥದ ಖಾರತನವನ್ನು SHU ನಲ್ಲಿಯೇ ಅಳೆಯಲಾಗುತ್ತದೆ. ಹೆಚ್ಚಿನ SHU, ಹೆಚ್ಚು ಅಪಾಯಕಾರಿ ತೀಕ್ಷ್ಣತೆ. ಯಾವುದೇ ಸಾಮಾನ್ಯ ಮೆಣಸಿನಕಾಯಿಯ ಎಸ್‌ಎಚ್‌ಯು 5000 ಕ್ಕೆ ಹತ್ತಿರದಲ್ಲಿರುತ್ತದೆ. ಆದರೆ, ಈ ಮೆಣಸಿನಕಾಯಿಯ ಎಸ್‌ಎಚ್‌ಯು ಎಷ್ಟೊಂದು ಜಾಸ್ತಿ ಇದೆ ಎಂದರೆ ಅದನ್ನು ನೀವು ತಿನ್ನುವುದೇ ಕಷ್ಟ.

3 /5

3. ಈ ಮೆಣಸಿನ ಕಾಯಿಯನ್ನು ತಿಂದವರ ಹೆಸರು ಗಿನ್ನಿಸ್ ಬುಕ್ ಸೇರಿದೆ - ಒಬ್ಬ ವ್ಯಕ್ತಿಯು ಇಂತಹ  ಮೆಣಸಿನಕಾಯಿಯನ್ನು 10 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ತಿಂದಿದ್ದಾನೆ, ನಂತರ ಆತನ ಹೆಸರನ್ನು ಗಿನ್ನೆಸ್ ವಿಶ್ವ ದಾಖಲೆ ಪಟ್ಟಿ ಸೇರಿದೆ. ಈ ಮೊದಲು, ಯಾರೂ ಈ ಮೆಣಸಿನಕಾಯಿಯನ್ನು ಅಷ್ಟು ವೇಗವಾಗಿ ತಿಂದಿರಲಿಲ್ಲ. ಏಕೆಂದರೆ ಅದರಲ್ಲಿ ಒಂದು ಸಣ್ಣ ತುಂಡು ಮಾತ್ರ ಜನರ ಸ್ಥಿತಿಯನ್ನು ಭಾರಿ ಹಾಳು ಮಾಡುತ್ತದೆ.

4 /5

4. ಕೇವಲ ಒಂದು ತುಣುಕು ತಿನ್ನುವುದರಿಂದಲೇ ಪರಿಸ್ಥಿತಿ ಬಿಗಡಾಯಿಸುತ್ತದೆ -2018 ರಲ್ಲಿ, ಅಮೆರಿಕದ ನ್ಯೂಯಾರ್ಕ್‌ನ 34 ವರ್ಷದ ವ್ಯಕ್ತಿ ಮೆಣಸಿನಕಾಯಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಶ್ವದ ಅತ್ಯಂತ ಖಾರ ಮೆಣಸಿನಕಾಯಿಯನ್ನು ತಿಂದರು, ಅವರು ತೀವ್ರ ತಲೆನೋವು ಅನುಭವಿಸಲು ಪ್ರಾರಂಭಿಸಿದರು, ನಂತರ ಅವರು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಈ ಮೆಣಸಿನ ಕಾಯಿಯ ಒಂದೇ ಒಂದು ತುಣುಕು ಸೇವಿಸುವುದು ಪರಿಸ್ಥಿತಿ ಭಾರಿ ಹದಗೆಡಿಸುತ್ತದೆ.

5 /5

5. ಇದಕ್ಕೂ ಮೊದಲು ಭಾರತ ದೇಶದ ಈ ಮೆಣಸಿನ ಕಾಯಿಯ ಹೆಸರಿನಲ್ಲಿತ್ತು ದಾಖಲೆ - 2013 ರಲ್ಲಿ, ಇದನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ವಿಶ್ವದ ಅತ್ಯಂತ ಖಾರವಾದ ಮೆಣಸಿನಕಾಯಿ ಎಂದು ಸೇರಿಸಲಾಯಿತು. ಈ ಮೆಣಸಿನಕಾಯಿಗೂ ಮೊದಲು ಅಂದರೆ 2013ಕ್ಕೂ  ಮೊದಲು, ಭಾರತದ 'ಭೂತ್ ಜೋಲ್ಕಿಯಾ' ಅನ್ನು ವಿಶ್ವದ ಅತ್ಯಂತ ಖಾರವಾದ ಮೆಣಸಿನಕಾಯಿ ಎಂದು ಪರಿಗಣಿಸಲಾಗಿತ್ತು. 2007 ರಲ್ಲಿ, ಭೂತ್ ಜೋಲ್ಕಿಯಾವನ್ನು(Bhut Jolokia) ಗಿನ್ನಿಸ್ ವಿಶ್ವ ದಾಖಲೆಗೆ ಸೇರಿಸಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.