ಚೀನಾದ ಟೆಕ್ ಕಂಪನಿ Xiaomi ವಿಶೇಷ ಸಾಧನವನ್ನು ತಯಾರಿಸುವಲ್ಲಿ ನಿರತವಾಗಿದೆ. ಇದರಲ್ಲಿ ಬ್ಯಾಟರಿ ಆಫ್ ಆದ ಸ್ಮಾರ್ಟ್ಫೋನ್ಗಳನ್ನು ಚಾರ್ಜ್ ಮಾಡಲು ವಿದ್ಯುತ್ ಬೇಕಾಗಿಲ್ಲ.
ನವದೆಹಲಿ : ಚೀನಾದ ಟೆಕ್ ಕಂಪನಿ Xiaomi ವಿಶೇಷ ಸಾಧನವನ್ನು ತಯಾರಿಸುವಲ್ಲಿ ನಿರತವಾಗಿದೆ. ಇದರಲ್ಲಿ ಬ್ಯಾಟರಿ ಆಫ್ ಆದ ಸ್ಮಾರ್ಟ್ಫೋನ್ಗಳನ್ನು ಚಾರ್ಜ್ ಮಾಡಲು ವಿದ್ಯುತ್ ಬೇಕಾಗಿಲ್ಲ. ಧ್ವನಿಯ ಸಹಾಯದಿಂದಲೇ ಪೋನ್ ಅನ್ನು ಚಾರ್ಜ್ ಮಾಡಬಹುದು. ಹಾಗಿದ್ದರೆ ಈ ಸಾಧನ ಹೇಗಿರಲಿದೆ ನೋಡೋಣ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಭಾರತದ ನಂಬರ್ 1 ಸ್ಮಾರ್ಟ್ಫೋನ್ ಬ್ರಾಂಡ್ ಎಂದು ಹೇಳಿಕೊಳ್ಳುವ Xiaomi ಈ ಹೊಸ ತಂತ್ರಜ್ಞಾನಕ್ಕೆ ಪೇಟೆಂಟ್ ಫೈಲ್ ಮಾಡಿದೆ. ಶಿಯೋಮಿಯ ಧ್ವನಿ ಚಾರ್ಜಿಂಗ್ ಪೇಟೆಂಟ್ನ ಚಿತ್ರಗಳು ಚೀನಾದ ನ್ಯಾಷನಲ್ ಇಂಟೆಲೆಕ್ಚುವೆಲ್ ಪ್ರಾಪರ್ಟಿ ಎಡ್ ಮಿನಿಸ್ಟ್ರೇಷನ್ ನಲ್ಲಿ (CNIPA) ಕಂಡುಬಂದಿದೆ.
ಶಿಯೋಮಿ ಈ ಪೇಟೆಂಟ್ ಅನ್ನು ಧ್ವನಿ ಚಾರ್ಜಿಂಗ್ ಸಾಧನ, ಎನರ್ಜಿ ಸ್ಟೋರೇಜ್ ಡಿವೈಸ್, ಮತ್ತು ಎಲೆಕ್ಟ್ರಾನಿಕ್ ಸಾಧನಕ್ಕಾಗಿ ಬಳಸಬಹುದು ಎಂದು ಹೇಳಲಾಗುತ್ತಿದೆ.
ಈ ಯಾಂತ್ರಿಕ ಸಾಧನವನ್ನು ವಿದ್ಯುತ್ ಪ್ರವಾಹವಾಗಿ ಪರಿವರ್ತಿಸಲು, ಶಿಯೋಮಿ ಗ್ರಾಹಕರಿಗೆ ಡಿವೈಸ್ ವೊಂದನ್ನು ನೀಡುತ್ತದೆ. ಈ ಸಾಧನವು ಎಸಿ ಪ್ರವಾಹವನ್ನು ಡಿಸಿ ಕರೆಂಟ್ ಆಗಿ ಪರಿವರ್ತಿಸುತ್ತದೆ. ಈ ತಂತ್ರಜ್ಞಾನವು ಪವರ್ ಸಾಕೆಟ್ ಇಲ್ಲದೆ ಸ್ಮಾರ್ಟ್ಫೋನ್ ಮತ್ತು ಇತರ ಸಾಧನಗಳನ್ನು ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇದಲ್ಲದೆ, ಶಿಯೋಮಿ ತನ್ನ 200W ಹೈಪರ್ಚಾರ್ಜ್ ತಂತ್ರಜ್ಞಾನವನ್ನು ಸಹ ಘೋಷಿಸಿದೆ. ಇದು ಕೇವಲ 8 ನಿಮಿಷಗಳಲ್ಲಿ 4000 mAh ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಕಂಪನಿಯು ಇದರಲ್ಲಿ ಹೊಸ mi ಏರ್ ಚಾರ್ಜರ್ ಅನ್ನು ಪರಿಚಯಿಸಿದೆ. ಇದರೊಂದಿಗೆ ಚಾರ್ಜಿಂಗ್ ಕೇಬಲ್ ಅಥವಾ ಸ್ಟ್ಯಾಂಡ್ ಇಲ್ಲದೆ ಸಾಧನದ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಹೊಸ mi ಏರ್ ಚಾರ್ಜ್ ತಂತ್ರಜ್ಞಾನದಿಂದ ಒಂದೇ ಸಮಯದಲ್ಲಿ ಅನೇಕ ಸಾಧನಗಳನ್ನು ಚಾರ್ಜ್ ಮಾಡಬಹುದಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಪ್ರಸ್ತುತ mi ಏರ್ ಚಾರ್ಜ್ ತಂತ್ರಜ್ಞಾನಕ್ಕಾಗಿ 17 ಪೇಟೆಂಟ್ಗಳನ್ನು ಹೊಂದಿದೆ. ಹೊಸ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ, ಗೃಹ ಬಳಕೆಯ ವಸ್ತುಗಳಾದ ಸ್ಮಾರ್ಟ್ ಸ್ಪೀಕರ್, ಡೆಸ್ಕ್ ಲ್ಯಾಂಪ್, ಸ್ಮಾರ್ಟ್ ವಸ್ತುಗಳು ಮತ್ತು ಇತರ ವಸ್ತುಗಳನ್ನು ಚಾರ್ಜ್ ಮಾಡಬಹುದು. ಮಿ ಏರ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬಿಡುಗಡೆ ಮಾಡುವ ಬಗ್ಗೆ ಕಂಪನಿಯು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.